Shankh Vastu Tips: ಶಂಖವನ್ನು ಮನೆಯಲ್ಲಿಡುವ ಮುನ್ನ ಈ ನಿಯಮ ತಿಳಿಯಿರಿ
ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಶಂಖವನ್ನು ದೇವಾಲಯದಲ್ಲಿ ಇರಿಸಲಾಗುತ್ತದೆ. ಲಕ್ಷ್ಮಿ ದೇವಿಯು ಸಮುದ್ರರಾಜನ ಮಗಳು ಮತ್ತು ಶಂಖವು ಅವಳ ಸಹೋದರನೆಂದು ನಂಬಲಾಗಿದೆ. ಆದ್ದರಿಂದ, ಶಂಖವಿರುವ ಸ್ಥಳದಲ್ಲಿ ಅದು ಲಕ್ಷ್ಮಿ ದೇವಿಯ ವಾಸಸ್ಥಾನವಾಗಿದೆ ಎಂದು ನಂಬಲಾಗಿದೆ.
ಶುಭ ಕಾರ್ಯಗಳಲ್ಲಿ ಶಂಖವನ್ನು ಬಳಸುವುದು ಹಿಂದೂ ಧರ್ಮದ ವಾಡಿಕೆ. ಪುರಾಣ ಕಥೆಯೊಂದರ ಪ್ರಕಾರ, ಸಾಗರ ಮಂಥನದ ಸಮಯದಲ್ಲಿ 14 ರತ್ನಗಳನ್ನು ಪಡೆಯಲಾಯಿತು. ಇದರಲ್ಲಿ ಶಂಖವೂ ಒಂದು.
ಶಂಖದಲ್ಲಿ, ದಕ್ಷಿಣಾವರ್ತಿ ಶಂಖವನ್ನು ಅತ್ಯುತ್ತಮವೆಂದು ಹೇಳಲಾಗುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ದಕ್ಷಿಣಾವರ್ತಿ ಶಂಖವನ್ನು ಇಡಲು ವಾಸ್ತುದಲ್ಲಿಯೂ ಸಲಹೆ ನೀಡಲಾಗಿದೆ. ಈ ಶಂಖವನ್ನು ಇಡುವುದರಿಂದ ಮನೆಯಲ್ಲಿ ಸಂಪತ್ತು ಮತ್ತು ಆಹಾರ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.
ಆದರೆ ದಕ್ಷಿಣಾವರ್ತಿ ಶಂಖವನ್ನು ಮನೆಯಲ್ಲಿ ಇಡಲು ಕೆಲವು ನಿಯಮಗಳಿವೆ. ಕೆಂಪು ಬಣ್ಣದ ಬಟ್ಟೆಯ ಮೇಲೆ ದಕ್ಷಿಣಾವರ್ತಿ ಶಂಖವನ್ನು ಇರಿಸಿ. ಶಂಖದಲ್ಲಿ ಗಂಗಾಜಲವನ್ನು ತುಂಬಿದ ನಂತರ ಓಂ ಶ್ರೀ ಲಕ್ಷ್ಮೀ ಸಹೋದರಾಯೈ ನಮಃ ಎಂಬ ಮಂತ್ರವನ್ನು ಪಠಿಸಬೇಕು. ಬಳಿಕ ಶಂಖವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಇಡಬೇಕು. ಅಲ್ಲದೆ ಶುಕ್ರವಾರದಂದು ಪೂಜಿಸುವುದರಿಂದ ಉತ್ತಮ ಲಾಭ ಪಡೆಯಬಹುದು.
ಮನೆಯಲ್ಲಿ ದಕ್ಷಿಣ ದಿಕ್ಕಿನಲ್ಲಿ ಶಂಖವನ್ನು ಇಡುವುದರಿಂದ ಲಕ್ಷ್ಮಿ ದೇವಿಯು ವಾಸಿಸುತ್ತಾಳೆ ಎಂದು ನಂಬಲಾಗಿದೆ. ಮನೆಯಲ್ಲಿ ಶಂಖವನ್ನು ದಕ್ಷಿಣ ದಿಕ್ಕಿಗೆ ಇಟ್ಟರೆ ಸಾಲದು, ಅದನ್ನೂ ಯಥಾವತ್ತಾಗಿ ಪೂಜಿಸಬೇಕು. ಶಂಖದ ನಾದದಿಂದ ಹಣದ ಕೊರತೆ ದೂರವಾಗುತ್ತದೆ.
(ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)