Stock market: ಹೂಡಿಕೆದಾರರಿಗೆ ದೊಡ್ಡಮಟ್ಟದ ನಷ್ಟವನ್ನುಂಟು ಮಾಡಿದ ಷೇರುಗಳು!
Paytm ಷೇರು 2021ರ ನವೆಂಬರ್ ತಿಂಗಳಿನಲ್ಲಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಯಿತು. 1 ರೂ. ಮುಖಬೆಲೆಯ ಈ ಷೇರು 2080-2150 ರೂ. ದರದಲ್ಲಿ ಐಪಿಒಗೆ ಬಂದಿತ್ತು. ಆದರೆ ಈ ಷೇರು ಹೂಡಿಕೆದಾರರಿಗೆ ದೊಡ್ಡಮಟ್ಟದ ನಷ್ಟವನ್ನುಂಟು ಮಾಡಿದೆ. ಈ ಷೇರು ಒಂದು ಬಾರಿ 1,955 ರೂ.ಗೆ ಏರಿತ್ತು. ಆ ಸಮಯದಲ್ಲಿ ಈ ಷೇರಿನಲ್ಲಿ ಹೂಡಿಕೆ ಮಾಡಿದವರಿಗೆ ದೊಡ್ಡಮಟ್ಟದ ನಷ್ಟವಾಗಿದೆ. Paytm ಷೇರು ಶುಕ್ರವಾರದಂದು 6.60 ರೂ. ಏರಿಕೆ ಕಂಡು 546.40 ರೂ.ಗೆ ತಲುಪಿದೆ. ಈ ಷೇರಿನಲ್ಲಿ 1 ಲಕ್ಷ ಹೂಡಿಕೆ ಮಾಡಿದವರಿಗೆ ಶೇ.60ರಷ್ಟು ಅಂದರೆ 60 ಸಾವಿರ ರೂ. ನಷ್ಟವುಂಟಾಗಿದೆ.
Dhani Services ಸ್ಟಾಕ್‌ನ ಸ್ಥಿತಿಯೂ ಉತ್ತಮವಾಗಿಲ್ಲ. ಫೆಬ್ರವರಿ 2021ರಲ್ಲಿ Life Time High 268 ರೂ.ಗೆ ತಲುಪಿದ್ದ ಈ ಷೇರು ಈಗ 48 ರೂ.ಗೆ ಕುಸಿದಿದೆ. ಈ ಸ್ಟಾಕ್‌ನ 52 ವಾರಗಳ ಗರಿಷ್ಠ ಮಟ್ಟವು 180.90 ರೂ. ಇದೆ. ಇದರಲ್ಲಿ ಹೂಡಿಕೆ ಮಾಡಿದ ಜನರು ಕೈಸುಟ್ಟುಕೊಂಡಿದ್ದಾರೆ.
ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ 3I Infotech ಷೇರು 42 ರೂ. ತಲುಪಿದೆ. ಡಿಸೆಂಬರ್ 2021ರಲ್ಲಿ ಈ ಷೇರಿನ Life Time High 119.30 ರೂ. ಇತ್ತು. ಆದರೆ ಈಗ ಈ ಷೇರು ಶೇ.52ರಷ್ಟು ಕುಸಿತ ಕಂಡಿದ್ದು, ಹೂಡಿಕೆದಾರರಿಗೆ ದೊಡ್ಡಮಟ್ಟದ ನಷ್ಟವನ್ನುಂಟು ಮಾಡಿದೆ.
ಅಕ್ಟೋಬರ್ 2021ರಲ್ಲಿ 1279.26 ರೂ. ಇದ್ದ IRCTC ಷೇರು ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ 718 ರೂ.ಗೆ ಬಂದು ತಲುಪಿದೆ. 52 ವಾರಗಳ ಈ ಸ್ಟಾಕ್‌ನ ಉನ್ನತ ಮಟ್ಟ(Life Time High)ವು 919.70 ರೂ.ಇದೆ. ಈ ಷೇರಿನಲ್ಲಿ ಹೂಡಿಕೆ ಮಾಡಿದವರು ಇಂದು ದೊಡ್ಡಮಟ್ಟದ ನಷ್ಟವನ್ನು ಅನುಭವಿಸಿದ್ದಾರೆ.
7,465.40 ರೂ. lifetime highಗೆ ತಲುಪಿದ ನಂತರ Info Edge india ಷೇರು ಇದೀಗ ಕೊಂಚ ಚೇತರಿಕೆ ಹಂತಕ್ಕೆ ಬಂದು ನಿಂತಿದೆ. ಈ ಷೇರು ನಿರಂತರವಾಗಿ ಕುಸಿತ ಕಾಣುವ ಮೂಲಕ 3,900 ರೂ.ಗೆ ಬಂದು ತಲುಪಿದೆ. ಕೇವಲ ಒಂದೇ ವರ್ಷದಲ್ಲಿ ಈ ಷೇರು ಹೂಡಿಕೆದಾರರಿಗೆ ಸುಮಾರು ಶೇ.36ರಷ್ಟು ನಷ್ಟವನ್ನುಂಟು ಮಾಡಿದೆ.