ಈ ರಾಶಿಯಲ್ಲಿ ಶಶ ಮಹಾಪುರುಷ ಯೋಗ! ಶನಿ ದೇವನ ಕೃಪೆಯಿಂದ ಇನ್ನೆರಡೂವರೆ ವರ್ಷ ರಾಜರಂತೆ ಬದುಕುತ್ತಾರೆ ಈ ರಾಶಿಯವರು

Fri, 28 Apr 2023-9:05 am,

ಶನಿಯು ಯಾರ ಮೇಲೆ ದಯೆ ತೋರುತ್ತಾನೆಯೋ, ಅವರೂ ಜೀವನದಲ್ಲಿ ರಾಜರಂತೆ ಬದುಕುತ್ತಾರೆ.  ಆದರೆ ಯಾರ ಜಾತಕದ ಮೇಲೇ ಶನಿಯ ವಕ್ರ ದೃಷ್ಟಿ ಬೀಳುತ್ತದೆಯೋ ಅವರ ಬದುಕು ನಕಾರ ಸದೃಶವಾಗಿ ಬಿಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿದೆಸೆ ಏಳೂವರೆ ವರ್ಷಗಳವರೆಗೆ ಇರುತ್ತದೆ. ಈ ಸಂದರ್ಭದಲ್ಲಿ ಆ ರಾಶಿಯವರು ಬಹಳ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಜನವರಿ 17 ರಂದು ಶನಿಯು ಕುಂಭ ರಾಶಿ ಪ್ರವೇಶದೊಂದಿಗೆ ಶಶ ಮಹಾಪುರುಷ ರಾಜ ಯೋಗ ರೂಪುಗೊಂಡಿದೆ.  

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶಶ ಮಹಾಪುರುಷ ಯೋಗವು ವೃಷಭ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ತರಲಿದೆ. ಈ ಸಮಯದಲ್ಲಿ, ಈ ರಾಶಿಯವರ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಇನ್ನು ಎರಡೂವರೆ ವರ್ಷ ಈ ರಾಶಿಯವರ ಆರ್ಥಿಕ ಜೀವನ ಉತ್ತಮವಾಗಿರಲಿದೆ. ಈ ಸಮಯದಲ್ಲಿ, ಉದ್ಯೋಗ, ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಇರುತ್ತದೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ  ಮನೆ ಮಾಡುತ್ತದೆ. 

ಜ್ಯೋತಿಷಿಗಳ ಪ್ರಕಾರ, ಈ ರಾಶಿಯ ಜನರ ಜೀವನದಲ್ಲಿ ಶಾಂತಿ ನೆಲೆಯಾಗುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ.  ಹೊಸ ಆಸ್ತಿ ಅಥವಾ ವಾಹನ ಖರೀದಿ ಭಾಗ್ಯ ಇರುತ್ತದೆ. ಪ್ರತಿ ಕೆಲಸದಲ್ಲಿ ಯಶಸ್ಸು ಪಡೆಯುವುದು ಸಾಧ್ಯವಾಗುತ್ತದೆ. ಈ ಸಮಯದಲ್ಲಿ, ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. 

ಈ ಸಮಯದಲ್ಲಿ, ಮಿಥುನ ರಾಶಿಯ ಜನರು ತಮ್ಮ ವೃತ್ತಿ ಮತ್ತು ಕೆಲಸದ ಕ್ಷೇತ್ರದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಕಚೇರಿಯಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಹಿರಿಯ ಅಧಿಕಾರಿಗಳು ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸೂಚಿಸುತ್ತಾರೆ. ಕಠಿಣ ಪರಿಶ್ರಮದ ಸಂಪೂರ್ಣ ಫಲ ಸಿಗುತ್ತದೆ. ಉದ್ಯೋಗ ಬದಲಾಯಿಸುವ ಯೋಚನೇ ಇದ್ದರೆ ಈ ಸಮಯವು ಅನುಕೂಲಕರವಾಗಿರುತ್ತದೆ.  

ಶಶ ಮಹಾಪುರುಷ ಯೋಗವು ಈ ರಾಶಿಯವರಿಗೆ ಮಂಗಳಕರ ಮತ್ತು ಫಲದಾಯಕವಾಗಿ ಪರಿಣಮಿಸಲಿದೆ. ಕೆಲಸದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳ ಗಮನವು ನಿಮ್ಮ ಕಡೆಗೆ ಆಕರ್ಷಿತವಾಗುತ್ತದೆ. ಪ್ರತಿಷ್ಠೆ ಹೆಚ್ಚಾಗಲಿದೆ. ಆಸ್ತಿಯಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ.

ಈ ಯೋಗದ ಪ್ರಭಾವದಿಂದಾಗಿ ಕುಂಭ ರಾಶಿಯವರು ವೃತ್ತಿ ಜೀವನದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಕಠಿಣ ಪರಿಶ್ರಮದಲ್ಲಿ ಯಶಸ್ಸು ಸಿಗಲಿದೆ. ನಿಮ್ಮದೇ ಕ್ಷೇತ್ರದಲ್ಲಿ ಆದಾಯವನ್ನು ಹೆಚ್ಚಿಸಲು ಅನೇಕ ಅವಕಾಶಗಳಿವೆ. ನಿಮ್ಮ ಇಚ್ಛೆಯಂತೆ ಕೆಲಸ ಸಿಗುತ್ತದೆ. ಬಡ್ತಿಯೊಂದಿಗೆ ವೇತನ ಹೆಚ್ಚಳದ ಎಲ್ಲಾ ಸಾಧ್ಯತೆಗಳಿವೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಜೀ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link