“ಮಾಜಿ ಕ್ಯಾಪ್ಟನ್ ಮಿಥಾಲಿ ರಾಜ್’ರನ್ನು ಮದುವೆಯಾಗಲಿದ್ದೇನೆ”- ಡಿವೋರ್ಸ್ ಬೆನ್ನಲ್ಲೇ 2ನೇ ಮದುವೆ ಬಗ್ಗೆ ಶಿಖರ್ ಧವನ್ ಹೇಳಿಕೆ

Wed, 03 Jul 2024-4:20 pm,

ಭಾರತ ಕ್ರಿಕೆಟ್ ತಂಡದ ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ ತಮ್ಮ 'ಧವನ್ ಕರೆಂಗೆ' ಶೋ ಮೂಲಕ ಮಹತ್ವದ ಹೇಳಿಕೆ ನೀಡಿ ಸುದ್ದಿಯಲ್ಲಿಯಾಗಿದ್ದಾರೆ.

ಈ ಕಾರ್ಯಕ್ರಮದ ಮೂಲಕ ಧವನ್ ಸೆಲೆಬ್ರಿಟಿಗಳೊಂದಿಗೆ ಮಾತುಕತೆ ನಡೆಸುತ್ತಾರೆ. ಜೊತೆಗೆ ತಮ್ಮ ಜೀವನದ ಕೆಲವು ಸ್ವಾರಸ್ಯಕರ ವಿಷಯಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಾರೆ.

ಅಂತೆಯೇ ಇತ್ತೀಚೆಗೆ ನಡೆದ ಶೋನ ಎಪಿಸೋಡ್ ಒಂದರಲ್ಲಿ ಶಿಖರ್ ಧವನ್, ತಾನು ಮತ್ತು ಮಿಥಾಲಿ ರಾಜ್‌  ಮದುವೆಯಾಗುತ್ತೇವೆ ಎಂದು ಹರಿದಾಡಿದ್ದ ವದಂತಿಯ ಬಗ್ಗೆ ಮಾತನಾಡಿದ್ದಾರೆ.

ಜಿಯೋ ಸಿನಿಮಾದ 'ಧವನ್ ಕರೆಂಗೆ' ಶೋಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅತಿಥಿಯಾಗಿ ಬಂದಿದ್ದರು. ಈ ವೇಳೆ ಧವನ್ ಮಿಥಾಲಿ ರಾಜ್’ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಜೊತೆಗೆ ಮಿಥಾಲಿ ರಾಜ್‌ ಜೊತೆ ತನ್ನ ಮದುವೆ ವದಂತಿ ಬಗ್ಗೆಯೂ ತಮಾಷೆಯ ಪ್ರಶ್ನೆಗಳನ್ನು ಕೇಳಿದ್ದಾರೆ.

“ನಾನು ಮಿಥಾಲಿ ರಾಜ್ ಅವರನ್ನು ಮದುವೆಯಾಗಲಿದ್ದೇನೆ… ಎಂಬ ವದಂತಿ ಹರಿದಾಡುತ್ತಿದೆ” ಎಂದು ಧವನ್ ಹೇಳುತ್ತಿದ್ದಂತೆ ಇಬ್ಬರೂ ಸಹ ಜೋರಾಗಿ ನಗತೊಡಗಿದರು. ಇದಲ್ಲದೇ ಶಿಖರ್ ಧವನ್ ಅವರು ಮಿಥಾಲಿಗೆ ಕ್ರಿಕೆಟ್ ಮತ್ತು ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಕೇಳಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link