ಈ ಬಿಗ್ ಬಾಸ್ ಸ್ಪರ್ಧಿಯ ಅಕ್ಕ ಮತ್ತು ಭಾವ ಇಬ್ಬರೂ ಮೆಗಾ ಸ್ಟಾರ್ ಗಳೇ!ಆದರೆ ಮನೆಯೊಳಗೆ ಇರುವವರೆಗೂ ಬಳಸುವುದಿಲ್ಲವಂತೆ ಅವರ ಹೆಸರು!
ಬಿಗ್ ಬಾಸ್ ಅತ್ಯಂತ ಜನಪ್ರಿಯ ರಿಯಾಲಿಟಿ ಷೋ. ಪ್ರತಿ ನಿತ್ಯ ಹೊಸ ಹೊಸ ಟ್ವಿಸ್ಟ್ ಜೊತೆಗೆ ಪ್ರೇಕ್ಷಕರ ಕುತೂಹಲ ಹೆಚ್ಚಿಸುವ ಕಾರ್ಯಕ್ರಮ.
ಬಹು ನಿರೀಕ್ಷಿತ ರಿಯಾಲಿಟಿ ಷೋ ಇದೀಗ ಆರಂಭವಾಗಿದೆ. ಆರಂಭದಲ್ಲಿಯೇ ಗ್ರೂಪ್, ಮೈಂಡ್ ಗೇಮ್, ಜಗಳ ಕದನ ಎಲ್ಲವೂ ನಡೆಯುತ್ತಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಿ ಹೇಗಾದರೂ ಮಾಡಿ ತಾನು ಜನರಿಗೆ ಹತ್ತಿರವಾಗಬೇಕು. ಈ ಮೂಲಕ ಹೆಚ್ಚು ಹೆಚ್ಚು ವೋಟು ತೆಗೆದುಕೊಳ್ಳಬೇಕು ಎನ್ನುವ ತುಡಿತದಲ್ಲಿ ಇರುತ್ತಾರೆ.
ಆದರೆ ಈ ಬಾರಿ ದೊಡ್ಮನೆಯಲ್ಲಿ ಇರುವ ಈ ಸ್ಪರ್ಧಿ ಮಾತ್ರ ತನ್ನ ಅಕ್ಕ ಮತ್ತು ಭಾವ ದೊಡ್ಡ ಸ್ಟಾರ್ ಗಳಾಗಿದ್ದರೂ ಅವರ ಹೆಸರನ್ನು ಶೋದಲ್ಲಿ ಬಳಸುವುದಿಲ್ಲ ಎಂದಿದ್ದಾರೆ.
ಹೌದು ಬಿಗ್ ಬಾಸ್ 18 ನ ಸ್ಪರ್ಧಿ ಶಿಲ್ಪಾ ಶಿರೋಡ್ಕರ್ ಖ್ಯಾತ ನಟಿ ನಮೃತಾ ಶಿರೋಡ್ಕರ್ ತಂಗಿ ಅಂದರೆ ಮಹೇಶ್ ಬಾಬು ನಾದಿನಿ. ಆದರೆ ಇವರಿಬ್ಬರ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡುವುದಿಲ್ಲ ಎಂದಿದ್ದಾರೆ ಶಿಲ್ಪಾ.
ಇನ್ನು ಶಿಲ್ಪಾ ಶಿರೋಡ್ಕರ್ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಬಗ್ಗೆ ನಮೃತಾ ಶಿರೋಡ್ಕರ್ ಮತ್ತು ಮಹೇಶ್ ಬಾಬು ಕೂಡಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.