ಬಿಗ್ ಬಾಸ್ ಶೋನಿಂದ ಸಿಕ್ಕ ಸಂಭಾವನೆ ಎಷ್ಟು? ಸಂದರ್ಶನದಲ್ಲಿ ಬಹಿರಂಗಪಡಿಸಿದ ಶಿಶಿರ್ ಶಾಸ್ತ್ರಿ
ಕಳೆದ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಶಿಶಿರ್ ಶಾಸ್ತ್ರಿ ಸಂದರ್ಶನವೊಂದರಲ್ಲಿ ದೊಡ್ಮನೆಯಲ್ಲಿ ಆದ ಅನುಭವ, ಅಲ್ಲಿನ ಇತರ ಸ್ಪರ್ಧಿಗಳ ಸ್ವಭಾವ, ಬಿಗ್ ಬಾಸ್ ನೀಡಿರುವ ಸಂಭಾವನೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
"ಕಾಲೇಜು ದಿನಗಳಿಂದಲೂ ನಾನು ಸುದೀಪ್ ಅವರ ಫ್ಯಾನ್. ನನ್ನ ಮೊದಲ ಸಿನಿಮಾದ ಆಡಿಯೋ ಲಾಂಚ್ ಅವರ ಕೈಯಲ್ಲೇ ಆಗಬೇಕು ಎಂದು ಹಠ ಹಿಡಿದಿದ್ದೆ. ನನ್ನ ಮೊದಲ ಸಿನಿಮಾದ ಕಟೌಟ್ ಕೂಡ ಸುದೀಪ್ ಅಣ್ಣನದ್ದೇ ಹಾಕಿಸಿದ್ದು. ನಾನು ಅಷ್ಟು ದೊಡ್ಡ ಹುಚ್ಚು ಅಭಿಮಾನಿ" ಎಂದು ಹೇಳಿದ್ದಾರೆ.
ಇನ್ನು ಶಿಶಿರ್ ಪ್ರಕಾರ ಯಾರು ಟಾಪ್ 5ಗೆ ಬರ್ತಾರೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹನುಮಂತ, ತ್ರಿವಿಕ್ರಮ್, ರಜತ್, ಚೈತ್ರಾ, ಭವ್ಯಾ ಅಥವಾ ಮಂಜು" ಎಂದು ಹೇಳಿದ್ದಾರೆ.
ಈ ನಂತರ ಸಂಭಾವನೆ ಎಷ್ಟು ಸಿಕ್ಕಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ನಾನು ಹೇಳೋಕೆ ಆಗಲ್ಲ, ಆದರೆ ಬಿಗ್ ಬಾಸ್ ತಂಡದವರು ತುಂಬಾ ಡೀಸೆಂಟ್ ಅಮೌಂಟ್ ಕೊಟ್ಟಿದ್ದಾರೆ. ಯಾವುದೇ ಮೋಸ ಆಗಿಲ್ಲ" ಎಂದು ಹೇಳಿದ್ದಾರೆ.
ಇನ್ನು ಬಿಗ್ ಬಾಸ್ ಸಂಭಾವನೆಯ ಹೊರತಾಗಿ ಶಿಶಿರ್ ಒಂದಷ್ಟು ಕ್ಯಾಶ್ ಪ್ರೈಜ್‌ಗಳನ್ನು ಸಹ ಪಡೆದಿದ್ದಾರೆ. ಬಿಗ್ ಬಾಸ್‌ನ ಮೂರು ಪ್ರಾಯೋಜಕರ ಕಡೆಯಿಂದ ಒಟ್ಟು 2 ಲಕ್ಷ ರೂಪಾಯಿಗಳ ಕ್ಯಾಶ್ ಪ್ರೈಜ್ ಮತ್ತು ಗಿಫ್ಟ್ ವೋಚರ್ ಪಡೆದುಕೊಂಡಿದ್ದಾರೆ.
ಕನ್ನಡ, ತೆಲುಗು ಧಾರಾವಾಹಿ ಸೇರಿದಂತೆ ಒಂದಷ್ಟು ಸಿನಿಮಾಗಳನ್ನು ಮಾಡಿರುವ ಶಿಶಿರ್ ಅವರ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂದು ಪ್ರಶ್ನಿಸಿದಾಗ, " ಪರ್ವಾಗಿಲ್ಲ. ಚೆನ್ನಾಗಿದ್ದೀನಿ. ತುಂಬಾ ಚೆನ್ನಾಗಿ ಅಂತಲೂ ಹೇಳೋಕೆ ಆಗಲ್ಲ" ಎಂದು ಉತ್ತರಿಸಿದ್ದಾರೆ.