LPG ಕನೆಕ್ಷನ್ ಈಗ ಇನ್ನಷ್ಟು ಸುಲಭ.! ಕೇವಲ ಒಂದೇ ಒಂದು ದಾಖಲೆ ಸಾಕು.!

Fri, 23 Apr 2021-11:40 am,

ಕರೋನಾದ ಹೆಚ್ಚುತ್ತಿರುವ ಪ್ರಕರಣಗಳ ಮಧ್ಯೆ, ಪೆಟ್ರೋಲಿಯಂ ಸಚಿವಾಲಯವು ಹೊಸ LPG  ಕನೆಕ್ಷನ್ ನಿಯಮಗಳನ್ನು ಸುಲಭಗೊಳಿಸಿದೆ. ಈಗ ಈ ಒಂದು ದಾಖಲೆ ತೋರಿಸಿದರೆ ಸಾಕು, ಗ್ಯಾಸ್ ಕನೆಕ್ಷನ್ ಪಡೆಯಬಹುದು. 

ಇನ್ನು ನೀವು ದೇಶದ ಯಾವುದೇ ಮೂಲೆಗೆ ಹೋದರೂ ಅಡುಗೆ ಅನಿಲ ಪಡೆಯಬಹುದು. ಅದಕ್ಕಾಗಿ ನಿವಾಸ ಪ್ರಮಾಣ ಪತ್ರ ಸಲ್ಲಿಸುವ  ಅಗತ್ಯವಿಲ್ಲ.  ಒಂದು ಐಡಿ ಫ್ರೂಫ್ ಇದ್ದರೆ ಸಾಕು ನಿಮಗೆ ಎಲ್ ಪಿಜಿ ಸಂಪರ್ಕ ಸಿಗಲಿದೆ. ಪೆಟ್ರೋಲಿಯಂ ಸಚಿವಾಲಯ  ಈ ಹಿನ್ನೆಲೆಯಲ್ಲಿ ಎಲ್ಲಾ ತೈಲ ಕಂಪನಿಗಳಿಗೆ ನಿರ್ದೇಶನ ನೀಡಿದೆ. ಸದ್ಯದಲ್ಲೇ ಗ್ರಾಹಕರಿಗೆ ಈ ನಿರ್ದೇಶನ ಜಾರಿ ಆಗಲಿದೆ. 

ಎಲ್ ಪಿಜಿಗಾಗಿ ಇನ್ನು ದಾಖಲೆಗಳ ಜಂಜಾಟ ಮುಗಿಯಲಿದೆ. ಒಂದು ಐಡಿ ಪ್ರೂಫ್ ಇದ್ದರೆ ಸಾಕು ಗ್ಯಾಸ್  ಸಿಗುತ್ತದೆ. ಇದರಿಂದ  ಕಾರ್ಮಿಕರಿಗೆ ಸಾಕಷ್ಟು ನೆರವಾಗಲಿದೆ. ತೈಲ ಕಂಪನಿಗಳು ಒಂದು ಕೇಂದ್ರೀಕೃತ ವ್ಯವಸ್ಥೆ ಮೂಲಕ ಗ್ಯಾಸ್ ಸಂಪರ್ಕ ನೀಡಲಿವೆ. 

ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಕೇಂದ್ರ ಸರ್ಕಾರ ಎರಡು ವರ್ಷಗಳಲ್ಲಿ ಒಂದು ಕೋಟಿ ಜನರಿಗೆ ಉಚಿತ ಎಲ್ ಪಿಜಿ ಗ್ಯಾಸ್ ನೀಡುವ  ಉದ್ದೇಶ  ಇಟ್ಟುಕೊಂಡಿದೆ.  ಈ ಹಿನ್ನೆಲೆಯಲ್ಲಿ ಮಾತನಾಡಿರುವ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ನಮ್ಮದು ಪ್ರಗತಿಶೀಲ ಅರ್ಥವ್ಯವಸ್ಥೆ. ಶ್ರೀಮಂತ ದೇಶಗಳ ಆರ್ಥಿಕತೆಗೆ ಹೋಲಿಸಿದರೆ ನಮ್ಮ ಆದ್ಯತೆಗಳು ಬೇರೆ ಎಂದು ಪ್ರಧಾನ್ ಹೇಳಿದ್ದಾರೆ. 

ದೇಶವನ್ನು  ಕಾರ್ಬನ್ ಮುಕ್ತಗೊಳಿಸಲು ಭಾರತ ಬದ್ದವಾಗಿದೆ. ಹಾಗಾಗಿ ವಾತಾವರಣಕ್ಕೆ ಹಾನಿ ಉಂಟುಮಾಡುವ ವಸ್ತುಗಳನ್ನು ಭಾರತ ಕಡಿಮೆ ಬಳಸಲಿದೆ. ಹಾಗಾಗಿ, ಸಾಧ್ಯವಾದಷ್ಟು ಹೆಚ್ಚು  ಪರಿಸರ ಸ್ನೇಹಿ ಇಂಧನ ಬಳಸಲು ಭಾರತ ರಣತಂತ್ರ ರೂಪಿಸಿದೆ ಎಂದು ಪ್ರಧಾನ್ ಹೇಳಿದ್ದಾರೆ.  

ಮುಂದಿನ ದಿನಗಳಲ್ಲಿ ನವೀಕರಿಸಬಹುದಾದದ ಇಂಧನ ಮೂಲಗಳನ್ನು ಭಾರತ ಹೆಚ್ಚು ಹೆಚ್ಚು ಬಳಸಲಿದೆ. ಮುಂದಿನ ದಿನಗಳಲ್ಲಿ ಭಾರತ ತನ್ನ  ಅಗತ್ಯದ ಶೇ. 40 ರಷ್ಟು ಇಂಧನವನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದಲೇ ಪಡೆಯಲಿದೆ ಎಂದು ಪ್ರಧಾನ್ ಹೇಳಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link