ತಿಳಿದಿರಲಿ ಶ್ರಾವಣ ಮಾಸದಲ್ಲಿ ಈ ಐದು ಆಹಾರಗಳ ಸೇವನೆ ನಿಷಿದ್ಧ ..!

Mon, 26 Jul 2021-6:37 pm,

ಶ್ರಾವಣ ಮಾಸದಲ್ಲಿ ತೇವಾಂಶದ ಕಾರಣದಿಂದಾಗಿ ಹಸಿರು ತರಕಾರಿಗಳು ಬೇಗನೆ ಹಾಳಾಗುತ್ತವೆ. ಹಸಿರು ಎಲೆಗಳ ತರಕಾರಿಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಕೀಟಗಳು ವೇಗವಾಗಿ ಬೆಳೆಯುತ್ತವೆ. ಈ ದಿನಗಳಲ್ಲಿ ಹಸಿರು ಎಲೆಗಳ ತರಕಾರಿಗಳನ್ನು ತಿನ್ನುವುದರಿಂದ ವಾತದ ಸಮಸ್ಯೆ ಹೆಚ್ಚಾಗುತ್ತದೆ ಎನ್ನುತ್ತಾರೆ. ಪಾಲಕ, ಎಲೆಕೋಸು, ಹೂಕೋಸು ಮುಂತಾದ ತರಕಾರಿಗಳನ್ನು ಮಳೆಗಾಳದಲ್ಲಿ ತಿನ್ನದಂತೆ ಸೂಚಿಸಲಾಗುತ್ತದೆ. ಇವುಗಳ ಬದಲು ಆಗಲಕಾಯಿ, ಕುಂಬಳಕಾಯಿ, ಹಿರೆಕಾಯಿ, ಸೋರೆಕಾಯಿಯನ್ನು ತಿನ್ನಬೇಕು. ಯಾವುದೇ ತರಕಾರಿಗಳನ್ನು ಸೇವಿಸುವ ಮುನ್ನ ಅವುಗಳನ್ನು ಚೆನ್ನಾಗಿ ತೊಳೆಯುವುದನ್ನು ಮಾತ್ರ ಮರೆಯಬೇಡಿ.  

ಈ ಮಾಸದಲ್ಲಿ ಉಪ್ಪಿನಕಾಯಿ, ಚಟ್ನಿ, ಹುಳಿ ಕ್ಯಾಂಡಿ ಮತ್ತು ಹುಣಸೆಹಣ್ಣಿನಂತಹ ಹುಳಿ ವಸ್ತುಗಳಿಂದಲೂ ದೂರವಿರಬೇಕು.  ಇವುಗಳು ಈ ಸಮಯದಲ್ಲಿ ಆರೋಗ್ಯಕ್ಕೆ ಮಾರಕವಾಗಿ ಪರಿಗಣಿಸಬಹುದು. ಹುಳಿ ವಸ್ತುಗಳ ಸೇವನೆ, ಗಂಟಲು ನೋವು ಜ್ವರಕ್ಕೆ ಕಾರಣವಾಗಬಹುದು.   ಇದರ ಜೊತೆಗೆ, ಫ್ರಿಜ್ ನಲ್ಲಿ ಇರಿಸಿರುವ ನೀರು, ಜ್ಯೂಸ್ ಗಳ ಸೇವನೆಯನ್ನು ಕೂಡಾ ತಪ್ಪಿಸಬೇಕು.   

ಮಳೆಗಾಲದಲ್ಲಿ ಅಣಬೆಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಇದಕ್ಕೆ ಕಾರಣವೆಂದರೆ ಹೆಚ್ಚಿನ ತೇವಾಂಶದಿಂದಾಗಿ, ಕೀಟಗಳು ಮತ್ತು ಬ್ಯಾಕ್ಟೀರಿಯಾಗಳು ಅಣಬೆಯ ಮೇಲೆ ವೇಗವಾಗಿ ಬೆಳೆಯುತ್ತವೆ. ಅಣಬೆಗಳ ಮೇಲಿನ ಈ ಬ್ಯಾಕ್ಟೀರಿಯಾಗಳು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗುತ್ತದೆ. 

 ಮಳೆಗಾಲದ ದಿನಗಳಲ್ಲಿ, ಸಾಮಾನ್ಯವಾಗಿ ಕರಿದ  ತಿಂಡಿಗಳನ್ನು ತಿನ್ನಬೇಕು ಅನ್ನಿಸುತ್ತದೆ. ಆದರೆ ಮಳೆಗಾಲದಲ್ಲಿ ಕರಿದ ತಿಂಡಿಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾಕೆದರೆ ಈ ವಾತಾವರಣದಲ್ಲಿ ಜೀರ್ಣಾಂಗ ವ್ಯವಸ್ಥೆ ನಿಧಾನವಾಗಿರುತ್ತದೆ. ಕರಿದ ತಿನಿಸುಗಳನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ಉಬ್ಬುವುದು, ಗ್ಯಾಸ್ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. 

ಈ ಋತುವಿನಲ್ಲಿ ಬೀದಿ ಬದಿಯ ಆಹಾರ ಗಳನ್ನು ಕೂಡಾ ತಪ್ಪಿಸಬೇಕು.  ಅಲ್ಲದೆ ತಂಪು ಪ್ರವೃತಿಯ ಆಹಾರ ಪದಾರ್ಥಗಳನ್ನು ಸೇವಿಸುವುದನ್ನು ತಪ್ಪಿಸಬೇಕು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link