ಈ ಆಹಾರ ಪದಾರ್ಥಗಳನ್ನು ತಪ್ಪಿಯೂ ಫ್ರಿಜ್ ನಲ್ಲಿಡಬೇಡಿ
ಕಾಫಿ ಪೌಡರ್ ಬಾಟಲಿಯನ್ನು ಫ್ರಿಡ್ಜ್ ನಲ್ಲಿ ಇಡುವ ಅಭ್ಯಾಸ ಹಲವರಿಗೆ ಇದೆ. ಹೀಗೆ ಮಾಡುವುದರಿಂದ ಫ್ರಿಜ್‌ನ ತೇವಾಂಶದ ಸಂಪರ್ಕಕ್ಕೆ ಬರುವ ಮೂಲಕ ಕಾಫಿಯ ರುಚಿ ಬದಲಾಗಬಹುದು.
ರೆಫ್ರಿಜರೇಟರ್‌ನಲ್ಲಿ ಅಡುಗೆ ಎಣ್ಣೆ ಸೇರಿದಂತೆ ಯಾವುದೇ ರೀತಿಯ ಎಣ್ಣೆಯನ್ನು ಇಡಬಾರದು. ಒಂದು ವೇಳೆ ಎಣ್ಣೆಯನ್ನು ಫ್ರಿಜ್ ನಲ್ಲಿಟ್ಟರೆ ಅದು ಘನೀಕರಿಸಲು ಆರಂಭವಾಗುತ್ತದೆ. ಮಾತ್ರವಲ್ಲ ಅದರ ಪರಿಮಳ ಕೂಡಾ ಬದಲಾಗುತ್ತದೆ.
ಮಾವಿನ ಹಣ್ಣಿನಂತೆ, ಬಾಳೆಹಣ್ಣನ್ನು ಕೂಡ ಫ್ರಿಜ್‌ನಲ್ಲಿ ಇಡುವುದಿಲ್ಲ. ಬಾಲೆ ಹಣ್ಣನ್ನು ಫ್ರಿಜ್ ನಲ್ಲಿಟ್ಟರೆ ಅದು ಹಾಳಾಗುತ್ತದೆ.
ತುಳಸಿ, ಕರಿಬೇವಿನ ಎಲೆಗಳು, ರೋಸ್ಮರಿ ಮುಂತಾದ ಗಿಡಮೂಲಿಕೆಗಳನ್ನು ದೈನಂದಿನ ಆಹಾರದಲ್ಲಿ ಬಳಸಲಾಗುತ್ತದೆ. ಆದರೆ, ಈ ವಸ್ತುಗಳನ್ನು ತಪ್ಪಿಯೂ ಫ್ರಿಜ್ ನಲ್ಲಿಡಬಾರದು.