ತುಳಸಿ ಪಕ್ಕದಲ್ಲಿ ಈ ವಸ್ತುಗಳನ್ನು ಎಂದಿಗೂ ಇಡಬೇಡಿ ! ಹೊಕ್ಕಿ ಬಿಡುವುದು ದರಿದ್ರ ! ಕುಬೇರನ ಖಜಾನೆ ಕೂಡಾ ಬರಿದಾಗುವುದು
ತುಳಸಿ ಗಿಡಕ್ಕೆ ಪ್ರತಿನಿತ್ಯ ನೀರನ್ನು ಅರ್ಪಿಸಬೇಕು. ಹೀಗೆ ಮಾಡಿದರೆ ಲಕ್ಷ್ಮೀ ದೇವಿ ಪ್ರಸನ್ನಳಾಗುತ್ತಾಳೆ. ಮನೆ ಮತ್ತು ಮನೆ ಮಂದಿಯ ಮೇಲೆ ಆಕೆಯ ಅನುಗ್ರಹ ಇರುತ್ತದೆ
ತುಳಸಿ ಒಂದು ಪವಿತ್ರವಾದ ಸಸ್ಯ. ಹಾಗಾಗಿ ಅದರ ಬಳಿ ಕೂಡಾ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು. ಇಲ್ಲವಾದರೆ ತಾಯಿ ಲಕ್ಷ್ಮೀ ಮುನಿಸಿಕೊಳ್ಳುತ್ತಾಳೆ.
ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡದ ಬಳಿ ಅಥವಾ ಸುತ್ತ ಮುತ್ತ ಗಲೀಜು ಇರಬಾರದು. ಈ ಜಾಗವನ್ನು ನಿತ್ಯ ಶುಚಿಗೊಳಿಸುತ್ತಾ ಇರಬೇಕು.ಕಸ ಕಡ್ಡಿಗಳು ತುಳಸಿ ಬಳಿ ಇರಲೇ ಬಾರದು.
ತುಳಸಿ ಗಿಡದ ಬಳಿ ಪೊರಕೆ ಇಡಬಾರದು. ತುಳಸಿ ಬಳಿ ಪೊರಕೆ ಇಡುವುದರಿಂದ ಮನೆಯಲ್ಲಿ ಬಡತನ ಬರಲಾರಂಭಿಸುತ್ತದೆ.
ತುಳಸಿ ಇರುವಲ್ಲಿ ಶೂ ಮತ್ತು ಚಪ್ಪಲಿಗಳನ್ನು ಇರಿಸಬಾರದು. ತುಳಸಿ ಬಳಿ ಶೂ, ಚಪ್ಪಲಿ ಬಿಡುವುದರಿಂದ ಆರೋಗ್ಯ ಸಮಸ್ಯೆ ಕಾಡುತ್ತದೆ.
ತುಳಸಿ ಗಿಡದ ಬಳಿ ಯಾವುದೇ ರೀತಿಯ ಮುಳ್ಳಿನ ಗಿಡಗಳನ್ನು ನೆಡಬಾರದು. ಇದು ಮನೆಯೊಳಗೆ ನೆಗೆಟಿವ್ ಎನರ್ಜಿ ಹರಿದು ಬರಲು ಕಾರಣವಾಗುತ್ತದೆ. ತುಳಸಿಯ ಸುತ್ತ ಮುಳ್ಳಿನ ಗಿಡವಿದ್ದರೆ ತಕ್ಷಣ ತೆಗೆಯಿರಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.