Shraddha Das : ಶ್ರದ್ಧಾ ನೋಡಿ ʼಸೊಂಟದ ವಿಷ್ಯ ಬೇಡವೋ ಶಿಷ್ಯʼ ಎಂದ ಪಡ್ಡೆ ಹೈಕ್ಳು..!
ಇದೀಗ ಮುಂಬೈ ಬ್ಯೂಟಿ ಶ್ರದ್ಧಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಹಾಟ್ ಫೋಟೋಸ್ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿವೆ.
ಶ್ರದ್ಧಾ ದಾಸ್ ತಮ್ಮ ಪ್ಯಾನ್ಸ್‌ಗಾಗಿ ಹಾಟ್ ಟ್ರೀಟ್ ನೀಡಿದ್ದಾರೆ, ಸ್ಲೀವ್ ಲೆಸ್ ಜಾಕೆಟ್ ಮತ್ತು ಸೀರೆ ಧರಿಸಿ, ಸೊಂಟದ ಸೌಂದರ್ಯ ದರ್ಶನ ಮಾಡಿದ್ದಾರೆ.
ಸೂಪರ್ ಹೈಟ್, ಮೋಹಕ ಬಣ್ಣ, ಮಸ್ತ್ ಮೈಕಟ್ಟು ಹೊಂದಿರುವ ದಾಸ್‌ಗೆ ಹೆಚ್ಚಾಗಿ ಸಿನಿಮಾಗಳಲ್ಲಿ ನಾಯಕಿಯಾಗಿ ಆಫರ್ ಬರ್ಲಿಲ್ಲ ಅಂದ್ರೂ ಯಾವುದೇ ಟಾಪ್ ಹೀರೋಯಿನ್‌ಗೆ ಇವರೆನೂ ಕಮ್ಮಿ ಇಲ್ಲ.
ಕನ್ನಡದ ಕೋಟಿಗೊಬ್ಬ 3, ಮತ್ತು ಟಾಲಿವುಡ್ ಆರ್ಯ 2, ಡಾರ್ಲಿಂಗ್, ನಾಗವಲ್ಲಿ, ಗುಂಟೂರ್ ಟಾಕೀಸ್ ಸೇರಿದಂತೆ ಮುಂತಾದ ಚಿತ್ರಗಳ ಮೂಲಕ ಸೌತ್ ಸಿನಿ ಪ್ರೇಕ್ಷರಿಗೆ ಶ್ರದ್ಧಾ ದಾಸ್ ಹತ್ತಿರವಾಗಿದ್ದಾರೆ.
'ಸಿದ್ದು ಫ್ರಂ ಶ್ರೀಕಾಕುಳಂ' ತೆಲುಗು ಚಿತ್ರದ ಮೂಲಕ ಶ್ರದ್ಧಾ ದಾಸ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ಸೆಕೆಂಡ್ ಹೀರೋಯಿನ್ ಪಾತ್ರ ಮಾಡಿದರೂ ಪ್ರೇಕ್ಷಕರ ಮನದಲ್ಲಿ ಉಳಿದುಕೊಂಡಿದ್ದರು.
ಶ್ರದ್ಧಾ ದಾಸ್ ಮಾರ್ಚ್ 4, 1987 ರಂದು ಮುಂಬೈನಲ್ಲಿ ಜನಿಸಿದರು. ಮುಂಬೈ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ.
ಹೆಚ್ಚು ಸಿನಿಮಾ ಮಾಡಿಲ್ಲ ಅಂದ್ರೂ ಶ್ರದ್ಧಾ ದಾಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿರುತ್ತಾರೆ.