ಫಸ್ಟ್ ಟೈಮ್ ಬಿಕಿನಿ ತೊಟ್ಟ ಶ್ರದ್ಧಾ ಶ್ರೀನಾಥ್..! ವ್ಹಾವ್... ಎಂದ ಫ್ಯಾನ್ಸ್... ಫೊಟೋಸ್ ಇಲ್ಲಿವೆ..
ಬೆಂಗಳೂರು ಮೂಲದ ನಟಿ ಶ್ರದ್ಧಾ ಶ್ರೀನಾಥ್ ಕಾನೂನು ವ್ಯಾಸಂಗ ಮುಗಿಸಿ ನಟನೆಯ ಮೇಲಿನ ಆಸಕ್ತಿಯಿಂದ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. 33 ವರ್ಷದ ಈ ಸುಂದರಿ, 2015 ರಲ್ಲಿ ಮಲಯಾಳಂನಲ್ಲಿ ಬಿಡುಗಡೆಯಾದ 'ಕೊಹಿನೂರ್' ಚಿತ್ರದ ಮೂಲಕ ನಟಿಯಾಗಿ ಪಾದಾರ್ಪಣೆ ಮಾಡಿದರು.
2016 ರಲ್ಲಿ ತೆರೆಕಂಡ ಯು ಟರ್ನ್ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಈ ಚಿತ್ರದಲ್ಲಿನ ಅವರ ಪಾತ್ರ ಅಭಿಮಾನಿಗಳ ಮನಗೆದ್ದಿತು. ಅತ್ಯುತ್ತಮ ಅಭಿನಯಕ್ಕಾಗಿ ಕೆಲವು ಪ್ರಶಸ್ತಿಗಳನ್ನು ಸಹ ಪಡೆದರು.
ಅಲ್ಲದೆ, ಮಣಿರತ್ನಂ ನಿರ್ದೇಶನದ ಕಾರ್ತಿ ಮತ್ತು ಅದಿತಿ ರಾವ್ ಅಭಿನಯದ ತಮಿಳಿನ 'ಕಾಟು ಉಯಡೈ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಇವಾನ್ ತಂತ್ರನ್ ಚಿತ್ರದಲ್ಲಿ ಗೌತಮ್ ಕಾರ್ತಿಕ್ ಜೊತೆ ನಟಿಸಿದರು.
ಶ್ರದ್ಧಾ ಶ್ರೀನಾಥ್ ಅವರಿಗೆ ಹೈಪ್ ನೀಡಿದ ಸಿನಿಮಾ ಅಂದ್ರೆ, 2017 ರಲ್ಲಿ ತೆರೆಕಂಡ ವಿಕ್ರಮ್ ವೇದ. ಇದರಲ್ಲಿ ಮಾಧವನ್ ಎದುರು ತುಂಬಾ ಬೋಲ್ಡ್ ಪಾತ್ರದಲ್ಲಿ ನಟಿಸಿ ಅಭಿಮಾನಿಗಳ ಮನ ಕದ್ದರು.
ಕನ್ನಡ, ತೆಲುಗು, ತಮಿಳು, ನಂತರ ಸಧ್ಯ ಬಾಲಿವುಡ್‌ನತ್ತ ಶ್ರದ್ಧಾ ಶ್ರೀನಾಥ್ ಗಮನ ಹರಿಸುತ್ತಿದ್ದಾರೆ.. ಜೊತೆಗೆ ಹಲವಾರು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.
ಶ್ರದ್ಧಾ ನಟನೆಯ ಕಳೆದ ವರ್ಷ ತೆರೆಕಂಡ ‘ಇರುಗಪಟ್ಟು’ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಸದ್ಯ ಹಿಂದಿ ಸಿನಿಮಾವೊಂದರ ಶೂಟಿಂಗ್ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಿದ್ಧವಾಗಿದೆ.
ಸಧ್ಯ ರಜೆಯ ದಿನಗಳನ್ನು ಎಂಜಾಯ್ ಮಾಡಲು ಥಾಯ್ಲೆಂಡ್‌ಗೆ ತೆರಳಿರುವ ಶ್ರದ್ಧಾ ಶ್ರೀನಾಥ್, ದೋಣಿಯಲ್ಲಿ ಬಿಕಿನಿ ತೊಟ್ಟು ಕ್ಯಾಮರಾಗೆ ಪೋಸ್ ನೀಡಿದ್ದಾರೆ.. ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ..