ಶ್ರಾವಣ ಶುದ್ಧ ಪೌರ್ಣಮಿಯ ಈ ದಿನ ವಿಶಿಷ್ಟ ಯೋಗಗಳ ರಚನೆ, ಈ ಜನರಿಗೆ ಅಪಾರ ಧನ-ಸಂಪತ್ತು-ಭಾಗ್ಯೋದಯ ಪ್ರಾಪ್ತಿ ಯೋಗ!
ಮೇಷ ರಾಶಿ: ರಕ್ಷಾ ಬಂಧನದ ದಿನ ಮೇಷ ರಾಶಿಯ ಜನರಿಗೆ ತುಂಬಾ ವಿಶೇಷವಾಗಿರಲಿದೆ. ಈ ರಾಶಿಗಳ ಜನರಿಗೆ ಕುಟುಂಬದ ಸಂಪೂರ್ಣ ಬೆಂಬಲ ಇರಲಿದೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ವ್ಯಾಪಾರ ಕೂಡ ಸಾಕಷ್ಟು ವೇಗ ಪಡೆದುಕೊಳ್ಳಲಿದೆ. ಏತನ್ಮಧ್ಯೆ ಅಪಾರ ಧನಲಾಭ ಹಾಗೂ ಉನ್ನತಿಯ ಯೋಗ ಕೂಡ ಇದೆ. ಆದಾಯದ ಹೊಸ ಮೂಲಗಳು ನಿರ್ಮಾಣಗೊಳ್ಳಲಿವೆ. ನೌಕರವರ್ಗದ ಜನರಿಗೆ ಪದೋನ್ನತಿಯ ಜೊತೆಗೆ ಇಂಕ್ರಿಮೆಂಟ್ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಖುಷಿಗಳ ಆಗಮನವಾಗಲಿದೆ.
ಕನ್ಯಾ ರಾಶಿ: ಕನ್ಯಾ ರಾಶಿಯ ಜಾತಕದವರಿಗೂ ಕೂಡ ಈ ಬಾರಿಯ ರಕ್ಷಾ ಬಂಧನ ಅಪಾರ ಲಾಭವನ್ನು ತಂದು ಕೊಡಲಿದೆ. ನಿಮಗೆ ಬರಬೇಕಾದ ಮತ್ತು ದೀರ್ಘಾವಧಿಯಿಂದ ಸಿಲುಕಿಕೊಂಡ ಹಣ ನಿಮ್ಮತ್ತ ಮರಳಲಿದೆ. ಸರ್ಕಾರಿ ಕ್ಷೇತ್ರಗಳಿಗೆ ಸಂಬಂಧಿಸಿದ ಜನರಿಗೆ ಅಪಾರ ಲಾಭ ಉಂಟಾಗಲಿದೆ. ಸಮಾಜದಲ್ಲಿ ನಿಮ್ಮ ಘನತೆ-ಗೌರವ ಹೆಚ್ಚಾಗಲಿದೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯುವಲ್ಲಿ ಯಶಸ್ಸನ್ನು ಸಂಪಾದಿಸುವಿರಿ. ದೀರ್ಘಕಾಲದಿಂದ ನಡೆದುಕೊಂಡು ಬಂದ ವಿವಾದಗಳಿಂದ ಮುಕ್ತಿ ಸಿಗಲಿದೆ.
ಮಕರ ರಾಶಿ: ರಕ್ಷಾ ಬಂಧನ ಮೀನ ರಾಶಿಯ ಜಾತಕದವರಿಗೂ ಕೂಡ ನೌಕರಿಯಲ್ಲಿ ಅಪಾರ ಯಶಸ್ಸನ್ನು ತಂದು ಕೊಡಲಿದೆ. ನೌಕರಿಯಲ್ಲಿ ನಿಮಗೆ ಪದೋನ್ನತಿಯ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಇದಲ್ಲದೆ ಕಾರ್ಯಕ್ಷೇತ್ರದಲ್ಲಿ ನಿಮಗೆ ದೊಡ್ಡ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಹೀಗಾಗಿ ಸಂಪೂರ್ಣ ಕಷ್ಟಪಟ್ಟು ಅದನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ವ್ಯಾಪಾರದಲ್ಲಿಯೂ ಕೂಡ ನಿಮಗೆ ಅಪಾರ ಲಾಭ ಸಿಗಲಿದೆ.
ಮೀನ ರಾಶಿ: ಮೀನ ರಾಶಿಯ ಜಾತಕದವರಿಗೆ ಅಪಾರ ಧನಲಾಭ ಸಿಗುವ ಸಾಧ್ಯತೆ ಇದೆ. ಬಿಸ್ನೆಸ್ ನಲ್ಲಿಯೂ ಕೂಡ ಸಾಕಷ್ಟು ಲಾಭ ನಿಮ್ಮದಾಗಲಿದೆ. ಒಂದು ವೇಳೆ ಹೊಸ ಬಿಸ್ನೆಸ್ ಆರಂಭಿಸಲು ಯೋಚಿಸುತ್ತಿರುವವರಿಗೆ ಇದು ಸಕಾಲವಾಗಿದೆ. ಏಕೆಂದರೆ ಆ ಕೆಲಸದಲ್ಲಿ ಯಶಸ್ಸಿನ ಜೊತೆಗೆ ಭಾರಿ ಧನಲಾಭ ಸಿಗುವ ಸಕಲ ಸಾಧ್ಯತೆ ಇದೆ. ವೈವಾಹಿಕ ಜೀವನವೂ ಕೂಡ ಖುಷಿಗಳಿಂದ ತುಂಬಿರಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)