ದೌರ್ಬಲ್ಯ ಮೆಟ್ಟಿನಿಂತ ಶ್ರೇಯಸ್ ಅಯ್ಯರ್: ಯಶಸ್ಸಿನ ಗುಟ್ಟು ರಟ್ಟು ಮಾಡಿದ್ರು ದಾಖಲೆ ವೀರ

Sat, 24 Dec 2022-6:49 am,

India vs Bangladesh 2nd Test: ಬಾಂಗ್ಲಾದೇಶ ವಿರುದ್ಧದ ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ 87 ರನ್‌ಗಳ ಇನ್ನಿಂಗ್ಸ್ ಗಳಿಸಿದರು. ಈ ಪಂದ್ಯದಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 314 ರನ್ ಗಳಿಸಿತ್ತು. ಎರಡನೇ ದಿನದ ಆಟದ ಅಂತ್ಯದ ಬಳಿಕ ಮಾತನಾಡಿದ ಅಯ್ಯರ್, ತಮ್ಮ ದೌರ್ಬಲ್ಯವನ್ನು ಹೇಗೆ ಸುಧಾರಿಸಿಕೊಂಡರು ಎಂದು ಹೇಳಿದರು.

ಢಾಕಾದ ಶೇರ್-ಎ-ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸರಣಿಯ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು, ಶ್ರೇಯಸ್ ಅಯ್ಯರ್ 105 ಎಸೆತಗಳಲ್ಲಿ 87 ರನ್ ಗಳಿಸಿದರು. ಭಾರತ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಈ ಅವಧಿಯಲ್ಲಿ ಬಾಂಗ್ಲಾದೇಶದ ಬೌಲರ್‌ಗಳು ಅಯ್ಯರ್ ವಿರುದ್ಧ ಶಾರ್ಟ್ ಬಾಲ್‌ಗಳನ್ನು ಬಳಸಿದರೂ ಸಹ ಅದನ್ನು ದೃಢವಾಗಿ ಎದುರಿಸಿದರು.

ಅಯ್ಯರ್ 5ನೇ ವಿಕೆಟ್‌ಗೆ ರಿಷಬ್ ಪಂತ್ ಜೊತೆ 159 ರನ್ ಜೊತೆಯಾಟ ನಡೆಸಿದರು. ಪಂತ್ ಶತಕ ವಂಚಿತರಾದರು. 105 ಎಸೆತಗಳನ್ನು ಎದುರಿಸಿದ ಅವರು 7 ಬೌಂಡರಿ, 5 ಸಿಕ್ಸರ್‌ಗಳ ನೆರವಿನಿಂದ 93 ರನ್ ಗಳಿಸಿದರು. ಇವರಿಬ್ಬರನ್ನು ಬಿಟ್ಟರೆ ಬೇರೆ ಯಾವ ಭಾರತೀಯ ಬ್ಯಾಟ್ಸ್‌ಮನ್‌ಗೂ ದೊಡ್ಡ ಇನ್ನಿಂಗ್ಸ್ ಆಡಲಾಗಲಿಲ್ಲ.

ಶ್ರೇಯಸ್ ಅಯ್ಯರ್ ಸಾಮಾನ್ಯವಾಗಿ ಶಾರ್ಟ್ ಪಿಚ್ ಬಾಲ್ ವಿರುದ್ಧ ಆಡಲು ತೊಂದರೆ ಅನುಭವಿಸುತ್ತಾರೆ. ಆದರೆ ಈ ಬಾರಿ ಈ ವಿಚಾರದಲ್ಲಿಯೇ ಆಟವನ್ನು ಸುಧಾರಿಸುವತ್ತ ಗಮನ ಹರಿಸಿದ್ದಾರೆ. ಅದು ಫಲ ನೀಡಿದೆ ಎಂದು ಹೇಳಿದರು.

ಶುಕ್ರವಾರ ಎರಡನೇ ದಿನದಾಟದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಯ್ಯರ್, "ನಾನು ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಬಂದಾಗ, ಬಾಂಗ್ಲಾದೇಶದ ಬೌಲರ್‌ಗಳು ಶಾಟ್ ಬಾಲ್‌ಗಳಿಂದ ನನ್ನನ್ನು ಗುರಿಯಾಗಿಸಲು ಪ್ರಾರಂಭಿಸಿದರು." ನನಗೆ ಶಾರ್ಟ್ ಬಾಲ್ ಸಮಸ್ಯೆ ಇದೆ ಎಂದು ಅನೇಕರು ಹೇಳುತ್ತಿದ್ದರು. ಈ ವಿಷಯ ನನ್ನ ಮನಸ್ಸಿನಲ್ಲಿ ಕುಳಿತಿತ್ತು” ಎಂದು ಹೇಳಿದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link