ಬ್ಲಾಕ್ ಗೌನ್‌ನಲ್ಲಿ ಸಖತ್ ಹಾಟ್ ಫೋಟೋ ಶೂಟ್ ಮಾಡಿಸಿದ ಸೌತ್ ಸುಂದರಿ ಶೃತಿ ಹಾಸನ್..!
ನಟಿ ಶೃತಿ ಹಾಸನ್ ಸಖತ್ ಹಾಟ್ ಫೋಟೋ ಶೂಟ್ ಮಾಡಿಸಿದ್ದಾರೆ. ಇದರಲ್ಲಿಈ ನಟಿ ಕಪ್ಪು ಬಣ್ಣದ ಗೌನ್ ಧರಿಸಿ ಕ್ಯಾಮೆರಾಗೆ ವಿಭಿನ್ನ ಪೋಸ್ ನೀಡಿದ್ದಾರೆ.
ಈ ಸೌತ್ ಬೆಡಗಿ ಕೊರಳಿಗೆ ವೈಟ್ ಸ್ಟೋನ್‌ನ ನೆಕ್ಲೆಸ್, ವೈಟ್ ಸ್ಟೋನ್ ಒಲೆ ಹಾಗೂ ಬೆರಳಿಗೆ ರಿಂಗ್ ಧರಿಸಿ ಮಿಂಚುತ್ತಿದ್ದರು.
ಇವಳ ಮೇಕಪ್ ಹಾಗೂ ಹೇರ್ ಸ್ಟೈಲ್ ತುಂಬಾ ಡ್ರೆಸ್‌ಗೆ ತಕ್ಕಂತೆ ಮ್ಯಾಚ್ ಆಗುತ್ತಿತ್ತು.
ನಟಿ ಶೃತಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಾವಿರಾರು ಲೈಕ್ಸ್ ಹಾಗೂ ಫಾಸಿಟೀವ್ ಕಮೆಂಟ್ಸ್ ಪಡೆದುಕೊಂಡಿದ್ದಾರೆ.
ಸೌತ್ ಸುಂದರಿ ಶೃತಿ ಹಾಸನ್, ಕಮಲ್ ಹಾಸನ್ ಮಗಳಾದರೂ ತಂದೆಯ ನೆರಳಲ್ಲಿ ವೃತ್ತಿ ಬದುಕನ್ನು ಕಟ್ಟಿಕೊಳ್ಳದೆ, ಸ್ವಂತ ಶ್ರಮದಿಂದ ಬೆಳೆದು ನಿಂತಿದ್ದಾರೆ.
ದಕ್ಷಿಣ ಭಾರತದ ಈ ನಟಿ ತಮ್ಮ ಸಿನಿಮಾಗಳಿಂದ ಎಷ್ಟು ಹೆಸರು ಮಾಡಿದ್ದಾರೋ ಅಷ್ಟೆ ವಿವಾದಗಳಲ್ಲೂ ಸಿಕ್ಕಿಕೊಂಡಿದ್ದಾರೆ.
ನಟಿ ಶೃತಿ ಹಾಸನ್ ಈ ವರ್ಷ ʼವೀರ ಸಿಂಹ ರೆಡ್ಡಿʼ, ʼವಾಲ್ಟೈಯರ್ ವೀರಯ್ಯʼ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು, ಇದೇ ವರ್ಷ ಡಿಸೆಂಬರ್‌ನಲ್ಲಿ ರಿಲೀಸ್ ಆಗುವ ʼಹಾಯ್ ನಾನಾʼ ಚಿತ್ರದಲ್ಲಿ ಸ್ಪೆಷಲ್ ಅಪಿಯರ್ನ್ಸೆನಲ್ಲಿ ಕಾಣಿಸಿಕೊಳ್ಳಲಿದ್ದು ಹಾಗೂ ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಜೊತೆ ನಾಯಕಿಯಾಗಿ ತೆರೆಮೇಲೆ ಬರಲಿದ್ದಾರೆ.
ಸದ್ಯ ಸೌತ್ ಸಿನಿಮಾರಂಗದ ನಟಿ ಇಷ್ಟು ವರ್ಷ ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೀಗ ʼದಿ ಐʼ ಇಂಗ್ಲೀಷ್ ಚಿತ್ರದ ಶೂಟಿಂಗ್‌ನಲ್ಲಿ ಬಿಸಿಯಾಗಿದ್ದಾರೆ.