Shukra Gochar: ಶುಕ್ರನ ಅನುಗ್ರಹದಿಂದ ಡಿಸೆಂಬರ್‌ನಿಂದ ರಾಜರಂತೆ ಬದುಕುತ್ತಾರೆ ಈ ಮೂರು ರಾಶಿಯವರು
ನವಗ್ರಹಗಳಲ್ಲಿ ಶುಕ್ರ ಗ್ರಹವೂ ಒಂದು. ಜ್ಯೋತಿಷ್ಯದಲ್ಲಿ ಶುಕ್ರನನ್ನು ಸುಖ-ಸಂಪತ್ತು, ಐಷಾರಾಮಿ ಜೀವನಕಾರಕ ಎಂದು ನಂಬಲಾಗಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಶುಭ ಗ್ರಹ ಎಂದು ಪರಿಗಣಿಸಲಾಗಿದೆ. ಅಂತೆಯೇ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಶುಕ್ರ ಶುಭ ಸ್ಥಾನದಲ್ಲಿದ್ದಾಗ ಆ ವ್ಯಕ್ತಿಯ ಜೀವನದಲ್ಲಿ ಸುಖ-ಸಂಪತ್ತಿಗೆ ಕೊರತೆಯೇ ಇರುವುದಿಲ್ಲ ಎಂತಲೂ ಹೇಳಲಾಗುತ್ತದೆ.
ಪ್ರಸ್ತುತ ಕನ್ಯಾ ರಾಶಿಯಲ್ಲಿ ಸಂಚರಿಸುತ್ತಿರುವ ಶುಕ್ರನು ಈ ತಿಂಗಳ ಅಂತ್ಯದಲ್ಲಿ ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ. 30 ನವೆಂಬರ್ 2023 ರಂದು ಶುಕ್ರ ರಾಶಿ ಪರಿವರ್ತನೆ ಹೊಂದಲಿದ್ದಾನೆ.
ಶುಕ್ರ ರಾಶಿ ಬದಲಾವಣೆಯು ಎಲ್ಲಾ 12 ರಾಶಿಯವರ ಜೀವನದ ಆರ್ಥಿಕ ಸ್ಥಿತಿಯ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ.
ಆದಾಗ್ಯೂ, ಈ ತಿಂಗಳಾಂತ್ಯದಲ್ಲಿ ಶುಕ್ರ ರಾಶಿ ಪರಿವರ್ತನೆಯಿಂದ ಶುಕ್ರನ ಅನುಗ್ರಹದಿಂದ ಡಿಸೆಂಬರ್‌ನಿಂದ ಮೂರು ರಾಶಿಯವರು ರಾಜರಂತೆ ಬದುಕುತ್ತಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವೆಂದರೆ...
ಮೇಷ ರಾಶಿಯವರಿ ಈ ಸಮಯದಲ್ಲಿ ಬಂಪರ್ ಲಾಭವನ್ನು ಗಳಿಸುತ್ತಾರೆ. ಹಣಕಾಸಿನ ಸ್ಥಿತಿ ಸುಧಾರಿಸುವುದರ ಜೊತೆಗೆ ಪ್ರೇಮ ಜೀವನ, ವೈವಾಹಿಕ ಜೀವನವೂ ಸುಖಮಯವಾಗಿರಲಿದೆ.
ಈ ಸಮಯದಲ್ಲಿ ಕರ್ಕಾಟಕ ರಾಶಿಯವರ ಬಹುದಿನದ ಕನಸು ನನಸಾಗಲಿದೆ. ಹೂಡಿಕೆಯಿಂದ ಲಾಭವಾಗಲಿದೆ. ಹೊಸ ಆಸ್ತಿ, ವಾಹನ ಖರೀದಿ ಯೋಗವೂ ಇದೆ.
ಕನ್ಯಾ ರಾಶಿಯನ್ನು ತೊರೆದು ತುಲಾ ರಾಶಿಯನ್ನು ಪ್ರವೇಶಿಸಲಿರುವ ಶುಕ್ರ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಉದ್ಯೋಗಸ್ಥರಿಗೆ ಬಡ್ತಿ ಜೊತೆಗೆ ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.