Shukra Nakshatra Parivartan 2024: ಮೂರು ದಿನಗಳ ಬಳಿಕ 3 ರಾಶಿಗಳ ಜನರ ಕೃಪೆ ತೋರಲಿದ್ದಾನೆ ಶುಕ್ರ, ಉನ್ನತಿಯ ಜೊತೆಗೆ ಅಪಾರ ಧನಪ್ರಾಪ್ತಿ!
ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶ್ರವಣಾ ನಕ್ಷತ್ರಕ್ಕೆ 27 ನಕ್ಷತ್ರಗಳಲ್ಲಿ 22ನೇ ಸ್ಥಾನ ಪ್ರಾಪ್ತಿಯಾಗಿದೆ. ಈ ನಕ್ಷತ್ರಕ್ಕೆ ಚಂದ್ರ ಹಾಗೂ ಶ್ರೀವಿಷ್ಣು ಅಧಿಪತಿ. ಹೀಗಿರುವಾಗ ಶುಕ್ರನ ಶ್ರವಣಾ ನಕ್ಷತ್ರ ಪ್ರವೇಶದಿಂದ ಆಧ್ಯಾತ್ಮದತ್ತ ನಿಮ್ಮ ಒಲವು ಅಪಾರ ಹೆಚ್ಚಾಗಲಿದೆ.
ಮೇಷ ರಾಶಿ: ನಿಮ್ಮ ಗೋಚರ ಜಾತಕದ ದಶಮಭಾವದಲ್ಲಿ ಶುಕ್ರನ ಈ ಶ್ರವಣಾ ನಕ್ಷತ್ರ ಗೋಚರ ನೆರವೇರಲಿದೆ. ಇದರಿಂದ ಮೇಷ ರಾಶಿಯ ಜಾತಕದವರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸಿನ ಜೊತೆಗೆ ಅಪಾರ ಧನಲಾಭ ಉಂಟಾಗಲಿದೆ. ದೀರ್ಘ ಕಾಲದಿಂದ ನಿಂತುಹೋದ ಕೆಲಸಗಳು ಪೂರ್ಣಗೊಳ್ಳಲಿವೆ. ವೃತ್ತಿ ಜೀವನದ ಕುರಿತು ಹೇಳುವುದಾದರೆ. ಅಪಾರ ಯಶಸ್ಸಿನ ಜೊತೆಗೆ ಸಾಧನೆಗಳು ನಿಮ್ಮದಾಗಲಿವೆ. ಸಂಗಾತಿಯ ಜೊತೆಗೆ ಉತ್ತಮ ಕಾಲವನ್ನು ಕಳೆಯುವಿರಿ. ನಿಮ್ಮ ಮದ್ಯೆ ಏರ್ಪಟ್ಟ ಒತ್ತಡ ನಿವಾರಣೆಯಾಗಲಿದೆ. ವ್ಯಾಪಾರ ಕ್ಷೇತ್ರದ ಕುರಿತು ಹೇಳುವುದಾದರೆ, ವಿಭಿನ್ನ ಮಾರ್ಗಗಳಿಂದ ಸಾಕಷ್ಟು ಹಣಗಳಿಕೆ ಮಾಡುವಿರಿ. ದೊಡ್ಡ ಡೀಲ್ ಹಾಗೂ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಹೀಗಿರುವಾಗ ಈ ರಾಶಿಗಳ ಜನರ ಆರ್ಥಿಕ ಸ್ಥಿತಿಯಲ್ಲಿ ಅಪಾರ ಸುಧಾರಣೆಯಾಗಲಿದೆ.
ಧನು ರಾಶಿ: ಧನು ಜಾತಕದವರ ಪಾಲಿಗೆ ಶುಕ್ರ ಶ್ರವಣಾ ನಕ್ಷತ್ರದ ದ್ವಿತೀಯ ಭಾವದಲ್ಲಿ ವಿರಾಜಮಾನನಾಗಲಿದ್ದಾನೆ. ಹೀಗಿರುವಾಗ ಈ ರಾಶಿಗಳ ಜನರಿಗೆ ಅಪಾರ ಧನ ಸಂಪತ್ತು ಪಾಪ್ತಿಯಾಗಲಿದೆ ನೌಕರಿ ಹಾಗೂ ವ್ಯಾಪಾರದಲ್ಲಿ ಅಪಾರ ಯಶಸ್ಸಿನ ಜೊತೆಗೆ ಹಣಗಳಿಕೆಗೆ ಅವಕಾಶ ಸಿಗಲಿದೆ. ಇದರೊಂದಿಗೆ ನಿಂತು ಹೋದ ಕಾರ್ಯಗಳಿಗೂ ಕೂಡ ಪುನಃ ಗತಿ ಸಿಗಲಿದೆ. ಈ ಅವಧಿಯಲ್ಲಿ ನೀವು ಅಪಾರ ಹಣ ಉಳಿತಾಯ ಮಾಡುವಲ್ಲಿಯೂ ಕೂಡ ಯಶಸ್ವಿಯಾಗುವಿರಿ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯುವಿರಿ ಹಾಗೂ ಮಕ್ಕಳ ಕಡೆಯಿಂದ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ. ಶ್ರವಣಾ ನಿಯಕ್ಷತ್ರದಲ್ಲಿ ಶುಕ್ರನ ಗೋಚರ ಸುಖ ಸೌಕರ್ಯಗಳನ್ನು ವೇಗವಾಗಿ ಹೆಚ್ಚಿಸಲಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸಿನ ಜೊತೆಗೆ ಸಮಾಜದಲ್ಲಿ ಘನತೆ ಗೌರವ ಹೆಚ್ಚಿಸಲಿದೆ.
ಕುಂಭ ರಾಶಿ: ಕುಂಭ ರಾಶಿಯ ಜಾತಕದವರ ಪಾಲಿಗೆ ಶುಕ್ರ ಶ್ರವಣಾ ನಕ್ಷತ್ರದ ದ್ವಾದಶ ಭಾವದಲ್ಲಿ ಇರಲಿದ್ದಾನೆ. ಇದರಿಂದ ವಿದೇಶಕ್ಕೆ ತೆರಳಬೇಕೆಂಬ ನಿಮ್ಮ ಕನಸು ಪೂರ್ಣಗೊಳ್ಳಲಿದೆ. ಇದಲ್ಲದೆ ಆಧ್ಯಾತ್ಮದಲ್ಲಿ ನಿಮ್ಮ ಸದಭಿರುಚಿ ಹೆಚ್ಚಾಗಲಿದೆ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಮುಂಚೂಣಿಯಲ್ಲಿಡುಕೊಂಡು ಭಾಗವಹಿಸುವುರಿ. ಇದಲ್ಲದೆ ವಿದೇಶದಲ್ಲಿ ನೀವು ಮಾಡುತ್ತಿರುವ ವ್ಯಾಪಾರದಲ್ಲಿಯೂ ಕೂಡ ನಿಮಗೆ ಅಪಾರ ಯಶಸ್ಸು ಸಿಗಲಿದೆ. ನಿಮ್ಮ ಕಾರ್ಪೊರೇಟ್ ಹಾಗೂ ವ್ಯಾಪಾರ ವೇದಿಕೆಗೆ ವಿದೇಶ ಯಾತ್ರೆ ಅತ್ಯುತ್ತಮ ಸಾಬೀತಾಗಲಿದೆ. ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಸಿಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)