Shukra Surya Yuti 2024: ಐದು ವರ್ಷಗಳ ಬಳಿಕ ಪರಸ್ಪರ ಹತ್ತಿರಕ್ಕೆ ಬರಲಿದ್ದಾರೆ ಸೂರ್ಯ-ಶುಕ್ರ, ಐಶ್ವರ್ಯ ಲಕ್ಷ್ಮಿ ಕೃಪೆಯಿಂದ ಈ ಜನರಿಗೆ ಭಾರಿ ಧನಲಾಭ!
Shukra-Surya Yuti 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಧನ-ಐಶ್ವರ್ಯ ಕಾರಕ ಶುಕ್ರ ಹಾಗೂ ಸೂರ್ಯನ ಯುತಿ ಕುಂಭ ರಾಶಿಯಲ್ಲಿ ಶೀಘ್ರದಲ್ಲೇ ನೆರವೇರಲಿದೆ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. (Spiritual News In Kannada)
ಕುಂಭ ರಾಶಿ: ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ಈ ಯುತಿ ನೆರವೇರುತ್ತಿದೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಅಪಾರ ಹೆಚ್ಚಾಗಲಿದೆ. ವ್ಯಕ್ತಿತ್ವದಲ್ಲಿ ಹೊಸ ಹೊಳಪು ಕಾಣಲು ಸಿಗಲಿದೆ. ಸೂರ್ಯನ ಪ್ರಭಾವದಿಂದ ನಿಮ್ಮ ಘನತೆ ಗೌರವ ಹಾಗೂ ಪ್ರತಿಷ್ಠೆ ಹೆಚ್ಚಾಗಲಿದೆ. ಈ ಅವಧಿಯಲ್ಲಿ ಧನ ಪ್ರಾಪ್ತಿಯ ನಿಮ್ಮ ಆಸೆ ಈಡೇರಲಿದೆ. ವಿವಾಹಿತರ ವೈವಾಹಿಕ ಜೀವನ ಅದ್ಭುತವಾಗಿದೆ. ಬಾಳಸಂಗಾತಿಯ ಉನ್ನತಿ ನೆರವೇರಲಿದೆ. ಈ ಅವಧಿಯಲ್ಲಿ ಪಾರ್ಟ್ನರ್ಶಿಪ್ ವ್ಯವಹಾರದಿಂದ ನಿಮಗೆ ಲಾಭ ಸಿಗಲಿದೆ.
ಮೇಷ ರಾಶಿ: ಸೂರ್ಯ ಶುಕ್ರರ ಮೈತ್ರಿ ನಿಮ್ಮ ಗೋಚರ ಜಾತಕದ ಆದಾಯ ಭಾವದಲ್ಲಿ ರಚನೆಯಾಗುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳವಾಗಲಿದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಹೂಡಿಕೆಯಿಂದಲೂ ಕೂಡ ನಿಮಗೆ ಲಾಭ ಸಿಗಲಿದೆ. ಮಕ್ಕಳಿಗೆ ಸಂಬಂಧಿಸಿದಂತೆ ಶುಭ ಸಮಾಚಾರ ನಿಮಗೆ ಪ್ರಾಪ್ತಿಯಾಗಲಿದೆ. ಸ್ಟಾಕ್ ಮಾರ್ಕೆಟ್, ಲಾಟರಿ ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ, ಸಮಯ ಸಾಕಷ್ಟು ಅನುಕೂಲಕರವಾಗಿದೆ.
ವೃಷಭ ರಾಶಿ: ಸೂರ್ಯ ಶುಕ್ರರ ಈ ಯುತಿ ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ರಚನೆಯಾಗುತ್ತಿದೆ. ಹೀಗಾಗಿ ಕೆಲಸ ಕಾರ್ಯಗಳಲ್ಲಿ ನಿಮಗೆ ಅಪಾರ ಯಶಸ್ಸು ಸಿಗಲಿದೆ. ಇದಲ್ಲದೆ ಕೆಲಸ ಕಾರ್ಯಗಳಲ್ಲಿ ಉತ್ತಮ ಪರಿಣಾಮಗಳು ಕೂಡ ನಿಮಗೆ ಗೋಚರಿಸಲಿವೆ. ನೌಕರಿ ಕ್ಷೇತ್ರದಲ್ಲಿ ನಿಮಗೆ ಶುಭ ಹಾಲಿತಾಂಶಗಳು ಪ್ರಾಪ್ತಿಯಾಗಲಿದ್ದು, ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಇದಲ್ಲದೆ ಕಾರ್ಯಸ್ಥಳದಲ್ಲಿ ನಿಮಗೆ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಇದ್ದು, ಪ್ರಮೋಷನ್ ಭಾಗ್ಯ ಕೂಡ ಪ್ರಾಪ್ತಿಯಾಗಲಿದೆ. ವಿದ್ಯಾರ್ಥಿಗಳಿಗೆ ಸ್ಮಾಯ ಸಾಕಷ್ಟು ಅನುಕೂಲಕರವಾಗಿದೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿಮಗೆ ಯಶಸ್ಸು ಸಿಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)