2025ರಲ್ಲಿ ಶುಕ್ರ ಸಂಚಾರ: ಈ ರಾಶಿಯವರಿಗೆ ವರ್ಷವಿಡೀ ಲಕ್ಷ್ಮಿ ಕೃಪೆ, ವೃತ್ತಿಯಲ್ಲಿ ಯಶಸ್ಸು, ಹಣದ ಸುರಿಮಳೆ
ವೈದಿಕ ಜ್ಯೋತಿಷ್ಯದಲ್ಲಿ ಮಂಗಳಗ್ರಹ, ಸಂಪತ್ತು, ವೈಭವ, ಸಂತೋಷ, ಪ್ರೀತಿ, ಐಷಾರಾಮಿ ಜೀವನದ ಅಂಶ ಎಂದು ಪರಿಗಣಿಸಲಾಗಿರುವ ಶುಕ್ರನು 2025ರಲ್ಲಿ ಒಟ್ಟು 10 ಬಾರಿ ಪಥ ಬದಲಿಸಲಿದ್ದಾನೆ.
ಸಂಪತ್ತಿನ ಅಧಿಪತಿಯಾದ ಶುಕ್ರನು 2025ರಲ್ಲಿ ಜನವರಿ 28, ಮೇ 31, ಜೂನ್ 29, ಜುಲೈ 26, ಆಗಸ್ಟ್ 21, ಸೆಪ್ಟೆಂಬರ್ 15, ಅಕ್ಟೋಬರ್ 9, ನವೆಂಬರ್ 2 ಹಾಗೂ ವರ್ಷಾಂತ್ಯ ಡಿಸೆಂಬರ್ 20 ಹೀಗೆ ಒಟ್ಟು 10 ಬಾರಿ ತನ್ನ ಸಂಚಾರದಲ್ಲಿ ಬದಲಾವಣೆ ಮಾಡಲಿದ್ದಾನೆ.
ಶುಕ್ರ ಸಂಚಾರ ಬದಲಾವಣೆಯಿಂದ 2025ರಲ್ಲಿ ಕೆಲವು ರಾಶಿಯವರಿಗೆ ಭಾಗ್ಯದ ಬಾಗಿಲುಗಳು ತೆರೆದು ಶುಕ್ರ ದೆಸೆ ಆರಂಭವಾಗಲಿದೆ. ಇದರ ಪ್ರಭಾವದಿಂದ ವರ್ಷವಿಡೀ ಸಾಕ್ಷಾತ್ ಲಕ್ಷ್ಮಿಯ ಅನುಗ್ರಹವಿರಲಿದೆ ಎನ್ನಲಾಗುತ್ತಿದೆ.
ಮೇಷ ರಾಶಿ: 2025ರಲ್ಲಿ ಶುಕ್ರ ಮಹಾದಶ ಪ್ರಭಾವದಿಂದ ವ್ಯಾಪಾರದಲ್ಲಿ ಭಾರೀ ಪ್ರಗತಿಯನ್ನು ಕಾಣುವಿರಿ. ವೃತ್ತಿಪರರಿಗೆ ಬಡ್ತಿ ಸಾಧ್ಯತೆ ಇದೆ. ಅನಾರೋಗ್ಯದಿಂದ ಬಳಲುತ್ತಿರುವವರು ಉತ್ತಮ ಆರೋಗ್ಯವನ್ನು ಅನುಭವಿಸುವಿರಿ. ಸಾಲದಿಂದ ಮುಕ್ತಿ ದೊರೆಯುವ ಸಂಭವವಿದೆ.
ವೃಶ್ಚಿಕ ರಾಶಿ: 2025ರ ವರ್ಷವು ಈ ರಾಶಿಯವರಿಗೆ ತುಂಬಾ ವಿಶೇಷವಾಗಿರಲಿದೆ. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಹೊಸ ಅವಕಾಶದ ಜೊತೆಗೆ ಕೈ ತುಂಬಾ ಹಣ ಸಂಪಾದಿಸುವಿರಿ. ವೃತ್ತಿಪರರಿಗೆ ಕೆಲಸದಲ್ಲಿ ಒತ್ತಡ ಕಡಿಮೆಯಾಗಿ ಪ್ರಮೋಷನ್ ಭಾಗ್ಯ ದೊರೆಯಲಿದೆ. ನೀವು ಬಯಸಿದಂತೆ ಆಸ್ತಿ, ಮನೆ, ವಾಹನ ಖರೀದಿಸುವಿರಿ.
ಧನು ರಾಶಿ: 2025ರಲ್ಲಿ ಶುಕ್ರನ ಪ್ರಭಾವದಿಂದ ನಿಮ್ಮ ಜೀವನದಲ್ಲಿ ಧನಾತ್ಮಕ ಫಲಗಳನ್ನು ಕಾಣುವಿರಿ. ವ್ಯಾಪಾರಸ್ಥರು ತಮ್ಮ ವ್ಯವಹಾರವನ್ನು ವಿಸ್ತರಿಸಲು ಸುಸಮಯ. ತಾಯಿಯ ಕಡೆಯಿಂದ ಸಂಪತ್ತು ಪ್ರಾಪ್ತಿ. ವೃತ್ತಿಪರರಿಗೆ ಪ್ರಮೋಷನ್ ಸಾಧ್ಯತೆ. ಅವಿವಾಃತರಿಗೆ ವಿವಾಹ ಯೋಗ ದೊರೆಯಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.