Shukraditya Yog: ಶುಕ್ರಾದಿತ್ಯ ಯೋಗದಿಂದ ಚಿನ್ನದಂತೆ ಹೊಳೆಯಲಿದೆ ಈ ರಾಶಿಯವರ ಅದೃಷ್ಟ

Tue, 28 May 2024-1:49 pm,

ಮೇ 14 ರಂದು ಸೂರ್ಯ ವೃಷಭ ರಾಶಿಯನ್ನು ಪ್ರವೇಶಿಸಿದ್ದರೆ, ಮೇ 19 ರಂದು ಶುಕ್ರನೂ ಸಹ ವೃಷಭ ರಾಶಿಗೆ ಪದಾರ್ಪಣೆ ಮಾಡಿದ್ದಾನೆ. ಇದರಿಂದಾಗಿ ಶುಕ್ರಾದಿತ್ಯ ಯೋಗ ನಿರ್ಮಾಣವಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದನ್ನು ಶುಭ ಯೋಗ ಎನ್ನಲಾಗುತ್ತದೆ. ಜೂನ್ 12ರವರೆಗೂ ಶುಕ್ರಾದಿತ್ಯ ಯೋಗದಿಂದ ಕೆಲವು ರಾಶಿಯವರ ಅದೃಷ್ಟ ಚಿನ್ನದಂತೆ ಹೊಳೆಯಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ಸ್ವ ರಾಶಿಚಕ್ರ ಚಿಹ್ನೆಯಲ್ಲಿ ನಿರ್ಮಾಣವಾಗುತ್ತಿರುವ ಶುಕ್ರಾದಿತ್ಯ ಯೋಗವು ವೃಷಭ ರಾಶಿಯವರಿಗೆ ಹಲವು ಆಯಾಮಗಳಲ್ಲಿ ಬಂಪರ್ ಲಾಭವನ್ನು ನೀಡಲಿದೆ. ವೃತ್ತಿಯಲ್ಲಿ ಪ್ರಗತಿ, ಕುಟುಂಬದಲ್ಲಿ ಸಂತೋಷದ ವಾತಾವಾರಣ ನಿರ್ಮಾಣವಾಗಲಿದೆ. 

ಶುಕ್ರಾದಿತ್ಯ ರಾಜಯೋಗವು ಮಿಥುನ ರಾಶಿಯವರ ಜೀವನದಲ್ಲಿಯೂ ಒಳ್ಳೆಯ ಫಲಗಳನ್ನು ತರಲಿದೆ. ಈ ಸಮಯದಲ್ಲಿ ವ್ಯಾಪಾರದಿಂದ ಲಾಭ, ವ್ಯವಹಾರವನ್ನು ವಿಸ್ತರಿಸಲು ಒಳ್ಳೆಯ ಸಮಯ. ನಿಮ್ಮ ಬಹುದಿನದ ಆಸೆಗಳು ಕೈಗೂಡುವ ಸಮಯ ಎಂದು ಹೇಳಬಹುದು. 

ಶುಕ್ರಾದಿತ್ಯ ರಾಜಯೋಗವು ಸಿಂಹ ರಾಶಿಯ ಜನರಿಗೂ ಅದೃಷ್ಟದ ಸಮಯ ಎಂದು ಸಾಬೀತುಪಡಿಸಲಿದೆ. ಈ ಸಮಯದ್ಲಲಿ ಆದಾಯ ಹೆಚ್ಚಳ, ಹೂಡಿಕೆಯಿಂದ ಲಾಭವನ್ನು ಕಾಣಬಹುದು. ಮಕ್ಕಳಿಂದ ಶುಭವಾರ್ತೆ ನಿರೀಕ್ಷಿಸಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link