AC Side Effects: ಬೇಸಿಗೆಯಲ್ಲಿ ದಿನವಿಡೀ ಎಸಿ ಬಳಸುತ್ತಿದ್ದೀರಾ? ಅದರ ಅಡ್ಡಪರಿಣಾಮಗಳ ಬಗ್ಗೆಯೂ ಇರಲಿ ಎಚ್ಚರ!
ಬೇಸಿಗೆಯಲ್ಲಿ ಬಿಸಿಲಿನ ಬೇಗೆಯಿಂದ ಪರಿಹಾರ ಪಡೆಯಲು ಎಸಿ ಬಳಕೆ ಪ್ರಯೋಜನಕಾರಿ ಆಗಿದೆ. ಆದರೆ, ಅತಿಯಾದ ಎಸಿ ಬಳಕೆಯು ಆರೋಗ್ಯಕ್ಕೆ ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ? ಬೇಸಿಗೆಯಲ್ಲಿ ದಿನವಿಡೀ ಎಸಿ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಯೋಣ...
ಎಸಿ ಬಳಸುವಾಗ ಗಾಳಿಯು ಅತಿಯಾಗಿ ಶುಷ್ಕವಾಗಿರುತ್ತದೆ. ದಿನವಿಡೀ ಏಶಿಯಲ್ಲಿ ಕೂರುವುದರಿಂದ ತುಟಿಗಳು ಒಡೆಯುತ್ತವೆ. ಇದನ್ನು ತಪ್ಪಿಸಲು ಗಂಟೆಗೊಮ್ಮೆಯಾದರೂ ಸ್ವಲ್ಪ ಹೊತ್ತು ಕೋಣೆಯಿಂದ ಹೊರಹೋಗಿ.
ಎಸಿ ಕೋಣೆಯಲ್ಲಿ ಹೆಚ್ಚು ಕಾಲ ಕಳೆಯುವುದರಿಂದ ತೇವಾಂಶ ಕಡಿಮೆಯಾಗಿ ಇದು ಬಾಯಾರಿಕೆಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ನಿರ್ಜಲೀಕರಣದ ಸಮಸ್ಯೆಗೂ ಕಾರಣವಾಗಬಹುದು. ಇದನ್ನು ತಪ್ಪಿಸಲು ಆಗಾಗ್ಗೆ ನೀರು ಕುಡಿಯುತ್ತಿರಿ.
ಹೆಚ್ಚು ಹೊತ್ತು ಹವಾನಿಯಂತ್ರಣ ಕೊಠಡಿಯಲ್ಲಿ ಇರುವುದರಿಂದ ಆ ಕೋಣೆಯಿಂದ ಹೊರಗೆ ಬಂದರೆ ತಲೆನೋವು ಕಾಡಬಹುದು.
ಸದಾ ಎಸಿ ಬಳಸುವವರು ಎಸಿಯಿಂದ ಸಾಮಾನ್ಯ ವಾತಾವರಣಕ್ಕೆ ಬಂದರೆ ಹೆಚ್ಚು ಸುಸ್ತು, ಆಯಾಸವನ್ನು ಅನುಭವಿಸಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.