Side Effects Of Aloe Vera On Health: ಲೋಳೆಸರದ ಲಾಭಗಳ ಕುರಿತು ನೀವು ಕೇಳಿರಬಹುದು... ಹಾನಿಗಳ ಕುರಿತು ಗೊತ್ತಿದೆಯಾ?

Sat, 11 Sep 2021-8:35 pm,

1. ಗ್ಯಾಸ್ ಸಮಸ್ಯೆ - ನೀವು ಗ್ಯಾಸ್ ಸಮಸ್ಯೆಯಿಂದ ಬಳಲುತ್ತಿದ್ದರೆ ಅಲೋವೆರಾವನ್ನು ಸೇವಿಸಬೇಡಿ. ಇದು ಸಮಸ್ಯೆಯನ್ನು ಹೆಚ್ಚಿಸಬಹುದು. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅದರ ಸೇವನೆಯನ್ನು ತಪ್ಪಿಸಬೇಕು.

2. ಬ್ಲಡ್ ಪ್ರೆಶರ್ - ಅಲೋವೆರಾವನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ, ರಕ್ತದೊತ್ತಡವು ಈಗಾಗಲೇ ತುಂಬಾ ಕಡಿಮೆಯಿರುವ ಜನರು, ತಮ್ಮ ವೈದ್ಯರನ್ನು ಕೇಳಿದ ನಂತರವೇ ಅದನ್ನು ಸೇವಿಸಬೇಕು.

3. ಹೃದ್ರೋಗಿಗಳಿಗೆ ಸಮಸ್ಯೆ - ಯಾವುದೇ ರೀತಿಯ ಹೃದಯ ಸಂಬಂಧಿ ಕಾಯಿಲೆ ಹೊಂದಿರುವ ಜನರು ಅಲೋವೆರಾ ಸೇವಿಸುವುದನ್ನು ತಪ್ಪಿಸಬೇಕು. ಅಲೋವೆರಾ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿನ ಪೊಟ್ಯಾಶಿಯಂ ಪ್ರಮಾಣ ಕಡಿಮೆಯಾಗುತ್ತದೆ, ಇದರಿಂದಾಗಿ ಅನಿಯಮಿತ ಹೃದಯ ಬಡಿತಗಳು ಮತ್ತು ದೌರ್ಬಲ್ಯವನ್ನು ಅನುಭವಿಸಬಹುದು.

4. ಸ್ಕಿನ್ ಅಲರ್ಜಿ - ಅಲೋವೆರಾ ಜ್ಯೂಸ್ ಅನ್ನು ಜಾಗ್ರತೆಯಿಂದ ಸೇವಿಸದಿದ್ದರೆ, ಒಬ್ಬ ವ್ಯಕ್ತಿಯಲ್ಲಿ ಅಲರ್ಜಿ ಉಂಟಾಗುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಅವರು ಚರ್ಮದ ದದ್ದು ಅಥವಾ  ತುರಿಕೆ ಅಥವಾ ಚರ್ಮ ಉರಿತ, ಉಸಿರಾಟದ ತೊಂದರೆ, ಎದೆ ನೋವು ಮತ್ತು ಗಂಟಲಿನ ಕಿರಿಕಿರಿಯಂತಹ ಲಕ್ಷಣಗಳನ್ನು ಕಾಣಬಹುದು.

5. ಡಿಹೈಡ್ರೇಶನ್ - ಹಲವು ಜನರು ಬೆಳಗ್ಗೆ ಎದ್ದಾಕ್ಷಣ ಆರೋಗ್ಯದಿಂದಿರಲು ಹಾಗೂ  ತೂಕ ಇಳಿಕೆಗಾಗಿ ಆಲೋವೆರಾ ಜ್ಯೂಸ್ ಕುಡಿಯುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ಸಿಗುವ ಈ ಜ್ಯೂಸ್ ನಿರ್ಜಲೀಕರಣ ಸಮಸ್ಯೆಗೆ ಕಾರಣವಾಗಬಹುದು.

6. ಡಯೋರಿಯಾ -ನಿಮಗೆ ಮಲಬದ್ಧತೆ ಅಥವಾ ಅತಿಸಾರ ಸಮಸ್ಯೆ ಇದ್ದರೆ, ಅಲೋವೆರಾವನ್ನು ಸೇವಿಸಬೇಡಿ. ಏಕೆಂದರೆ ಇದರಲ್ಲಿರುವ ವಿರೇಚಕ ಗುಣಲಕ್ಷಣಗಳು ನಿಮ್ಮ IBS ತೊಂದರೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಇದರ ರಸವು ಆಂಥ್ರಾಕ್ವಿನೋನ್ ಎಂಬ ವಸ್ತುವನ್ನು ಹೊಂದಿರುತ್ತದೆ, ಇದು ವಿರೇಚಕವಾಗಿದೆ. ಅದರಿಂದಾಗಿ ಇದನ್ನು ಸೇವಿಸುವ ವ್ಯಕ್ತಿಯು ಅತಿಸಾರ, ಹೊಟ್ಟೆ ನೋವು ತೊಂದರೆಗೊಳಗಾಗಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link