Side Effects of Ginger: ಎಚ್ಚರ! ಶುಂಠಿಯ ಮಿತಿಮೀರಿದ ಸೇವನೆ ಅಪಾಯಕಾರಿ
ಗರ್ಭಾವಸ್ಥೆಯಲ್ಲಿ ವಾಕರಿಕೆ ಅಥವಾ ವಾಂತಿಯನ್ನು ಸರಿಪಡಿಸಲು ಶುಂಠಿಯು ಗರ್ಭಿಣಿಯರಿಗೆ ಸಹಾಯ ಮಾಡುತ್ತದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಶುಂಠಿಯು ಗರ್ಭಪಾತಕ್ಕೆ ಕಾರಣವಾಗಬಹುದು. ಹಾಗಾಗಿ ರಕ್ತಸ್ರಾವ ಸಮಸ್ಯೆ ಇರುವ ಮಹಿಳೆಯರು ಶುಂಠಿಯನ್ನು ತಪ್ಪಿಸುವುದು ಉತ್ತಮ.
ಶುಂಠಿ ತೂಕ ಇಳಿಸಲು ಸಹಾಯ ಮಾಡುತ್ತದೆ. ಆದರೆ, ತೂಕ ಇಳಿಸಿಕೊಳ್ಳಲು ಬಯಸದ ಅಥವಾ ಕಡಿಮೆ ತೂಕ ಹೊಂದಿರುವ ಜನರು ಈ ಶುಂಠಿಯನ್ನು ತಮ್ಮ ಆಹಾರದಿಂದ ತಪ್ಪಿಸಬೇಕು ಎಂದು ಹೇಳಲಾಗುತ್ತದೆ.
ಪಿತ್ತಗಲ್ಲು: ಶುಂಠಿಯು ನಿಮ್ಮ ಪಿತ್ತಕೋಶದಲ್ಲಿ ಪಿತ್ತಗಲ್ಲುಗಳನ್ನು ಉಂಟುಮಾಡಬಹುದು. ಶುಂಠಿಯ ಅತಿಯಾದ ಸೇವನೆಯು ಪಿತ್ತಜನಕಾಂಗದಲ್ಲಿ ಅಧಿಕ ಪಿತ್ತರಸ ಸ್ರವಿಸುವಿಕೆಯನ್ನು ಉಂಟುಮಾಡಬಹುದು ಮತ್ತು ಪಿತ್ತಗಲ್ಲುಗಳನ್ನು ಉಂಟುಮಾಡಬಹುದು.
ಇದನ್ನೂ ಓದಿ- Weight Loss Tips : ನಿತ್ಯ ಶುಂಠಿಯನ್ನು ಈ ರೀತಿ ಬಳಸಿದರೆ ಬಹುಬೇಗ Weight Loss ಮಾಡಿಕೊಳ್ಳಬಹುದು
ಶುಂಠಿಯಲ್ಲಿ ಸ್ಯಾಲಿಸಿಲೇಟ್‌ಗಳು ಸಮೃದ್ಧವಾಗಿವೆ. ರಕ್ತಹೀನತೆ (Anemia) ಮತ್ತು ಹಿಮೋಫಿಲಿಯಾದಂತಹ ಕಾಯಿಲೆಗಳಿಂದ ಬಳಲುತ್ತಿರುವ ಜನರು ಖಂಡಿತವಾಗಿಯೂ ಶುಂಠಿಯನ್ನು ತಮ್ಮ ಆಹಾರದಿಂದ ತಪ್ಪಿಸಬೇಕು. ಏಕೆಂದರೆ ಶುಂಠಿಯು ಅಧಿಕ ರಕ್ತಸ್ರಾವಕ್ಕೆ ಕಾರಣವಾಗುತ್ತದೆ.
ಇದನ್ನೂ ಓದಿ- Ginger Water For Glowing Skin:ಹೊಳೆಯುವ ಚರ್ಮಕ್ಕಾಗಿ ನಿತ್ಯ ಬಳಸಿ ಶುಂಠಿ ನೀರು
ಆಸಿಡ್ ರಿಫ್ಲಕ್ಸ್ ನಂತಹ ಉರಿಯೂತದ ಸಮಸ್ಯೆ ಇರುವವರಿಗೆ, ಅತಿಯಾದ ಶುಂಠಿ ಸೇವನೆಯು ಆಸಿಡ್ ರಿಫ್ಲಕ್ಸ್, ಹೊಟ್ಟೆ ಉರಿ, ಎದೆ ನೋವು ಮತ್ತು ಎದೆಯುರಿ ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಆಸಿಡ್ ರಿಫ್ಲಕ್ಸ್ ನಂತಹ ಮೇಲೆ ತಿಳಿಸಿದ ಸಮಸ್ಯೆಗಳನ್ನು ತಡೆಗಟ್ಟಲು ಕಡಿಮೆ ಶುಂಠಿಯನ್ನು ಸೇವಿಸುವುದು ಉತ್ತಮ.
(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)