ಫೇಶಿಯಲ್‌ಗಿಂತಲೂ ಅಧಿಕ ಹೊಳಪನ್ನು ಬಯಸುತ್ತಿದ್ದೀರಾ? ಹಾಗಾದರೆ ಸಿಂಪಲ್ ಯೋಗಾಸನಗಳು ನಿಮಗಾಗಿ
ಧನುರ್ಸಾನ: ಈ ಧನುರ್ಸಾನ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುವುದು. ಈ ಭಂಗಿಯ ನಿಯಮಿತ ಅಭ್ಯಾಸ ತ್ವೆಚೆಯ ಹಲವಾರು ಸಮಸ್ಯೆಗಳಿಂದ ಕ್ರಮೇಣ ಮುಕ್ತಿ ನೀಡುತ್ತದೆ. ಈ ಆಸನವು ದೇಹದಲ್ಲಿನ ಕೊಳಕು ಅಥವಾ ಕಲ್ಮಷವನ್ನು ಹೊರಹಾಕಿ ದೇಹವನ್ನು ಡಿಟಾಕ್ಸ್ ಮಾಡುತ್ತದೆ.
ಮತ್ಸ್ಯಾಸನ: ಈ ಭಂಗಿಯನ್ನು ಮಾಡುವುದರಿಂದ ಆರೋಗ್ಯ ಮತ್ತು ಚರ್ಮದ ಕಾಂತಿಯನ್ನು ಸುಧಾರಿಸಬಹುದು. ಇದು ಥೈರಾಯ್ಡ್ ಗ್ರಂಥಿ ಸರಳವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಇದರಿಂದ ಹಲವಾರು ತ್ವಚೆಯ ಸಮಸ್ಯೆಗಳು ನಿಮ್ಮಿಂದ ದೂರವಿರುತ್ತವೆ.
ಸರ್ವಾಂಗಾಸನ: ದೇಹದಲ್ಲಿ ರಕ್ತಚಲನವಲನವನ್ನು ಸುಧಾರಿಸಲು ಈ ಆಸನ ಸಹಕಾರಿ. ರಕ್ತ ಸಂಚಾರ ಸುಧಾರಿಸಿದರೇ ನಿಮ್ಮ ತ್ವಚೆಯೂ ಉತ್ತಮವಾಗಿರುತ್ತದೆ. ಆದರೆ ಈ ಆಸನವನ್ನು ಮಾಡುವ ಮುನ್ನ ಅಭ್ಯಾಸ ಮಾಡಿ.
ಶವಾಸನ: ಈ ಸರಳವಾದ ಶವಾಸನ ದೇಹಕ್ಕೆ ತುಂಬಾ ಪ್ರಯೋಜಕಾರಿಯಾಗಿದೆ. ಈ ಆಸನ ಮಾಡುವುದರಿಂದ ನಿಮ್ಮ ಒತ್ತಡ ನಿಯಂತ್ರಣವಾಗುವುದಲ್ಲದೇ ತ್ವಚೆಯ ಸಮಸ್ಯೆಗಳೂ ಮಾಯವಾಗುತ್ತವೆ.
ಅದೋಮುಖ ಶ್ವಾನಾಸನ: ಈ ಆಸನದ ನಿಯಮಿತ ಅಭ್ಯಾಸ ನಿಮ್ಮ ದೇಹ ಮತ್ತು ತ್ವಚೆ ಎರಡಕ್ಕೂ ಒಳ್ಳೆಯದು. ಈ ಭಂಗಿಯನ್ನು ಮಾಡುವುದರಿಂದ ನಿಮ್ಮ ದೇಹದಲ್ಲಿ ರಕ್ತದ ಚಲನೆ ಉತ್ತಮವಾಗುತ್ತದೆ.
ಪಶ್ಚಿಮೋತ್ತಾಸನ: ಈ ಆಸನ ತ್ವಚೆಯ ಕಾಂತಿಯನ್ನು ಹೆಚ್ಚಿಸುವುದಲ್ಲದೇ ಮಾನಸಿಕ ಒತ್ತಡವನ್ನೂ ಕಡಿಮೆ ಮಾಡುತ್ತದೆ. ಸಾಮಾನ್ಯವಾಗಿ ಮನುಷ್ಯನಿಗೆ ಒತ್ತಡ ಹೆಚ್ಚಾದಾಗ ಮೊಡವೆ, ಸುಕ್ಕು ಸೇರಿದಂತೆ ಮುಂತಾದ ಚರ್ಮ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ. ಅವುಗಳಿಂದ ಮುಕ್ತಿ ಪಡೆಯಲು ಉತ್ತಮ ಮಾರ್ಗವೆಂದರೇ ಯೋಗಾಸನಗಳನ್ನು ಮಾಡುವುದು.