ಆ ಖ್ಯಾತ ನಿರ್ದೇಶಕ ಸ್ಟುಡಿಯೋ ಒಳಗೆ ಬಂದು.. ನನ್ನ ಆ ತರ ಕರೆದ..! ನೋವು ತೋಡಿಕೊಂಡ ಸ್ಟಾರ್ ಗಾಯಕಿ
ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಕೆಲಸದ ಸ್ಥಳಗಳಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಕೆಲವರು ಕಷ್ಟಗಳನ್ನು ಎದುರಿಸಲಾಗದೆ ಇಂಡಸ್ಟ್ರಿಯಿಂದ ದೂರ ಉಳಿದರೆ ಇನ್ನೂ ಕೆಲವರು ಎದುರಿಸಿ ನಿಂತು ಸ್ಟಾರ್ ಸ್ಟೇಟಸ್ ಪಡೆದ ಸೆಲೆಬ್ರಿಟಿಗಳೂ ಇದ್ದಾರೆ.
ಈ ಪೈಕಿ ಹಿರಿಯ ಗಾಯಕಿ ಸುನೀತಾ ಅವರು ತಮ್ಮ ಸೌಂದರ್ಯದಿಂದ ಮಾತ್ರವಲ್ಲದೆ ತಮ್ಮ ಧ್ವನಿಯಿಂದಲೂ ಪ್ರೇಕ್ಷಕರನ್ನು ಮತ್ತು ಕೇಳುಗರನ್ನು ರಂಜಿಸುವ ಕೆಲವೇ ಕೆಲವು ಗಾಯಕಿಯರಲ್ಲಿ ಒಬ್ಬರು. ತಮ್ಮ ಅದ್ಭುತ ಧ್ವನಿಯಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿರುವ ಸಿಂಗರ್ ಸಧ್ಯ ನೀಡಿರುವ ಹೇಳಿಕೆ ಅಚ್ಚರಿ ಮೂಡಿಸುತ್ತಿದೆ...
ಅದರಲ್ಲೂ ಹಲವು ಸ್ಟಾರ್ ನಿರ್ದೇಶಕರು ನಾಯಕಿಯಾಗಿ ಅವಕಾಶ ಕೊಡುತ್ತೇವೆ ಎಂದು ಹೇಳಿದರೂ ನಯವಾಗಿ ತಿರಸ್ಕರಿಸಿದ ಮನಸ್ಥಿತಿ ಅವರದು. ಮೇಲಾಗಿ.. ಅವರು ಡಬ್ಬಿಂಗ್ ಆರ್ಟಿಸ್ಟ್ ಕೂಡ.. ಹಲವು ಸಿನಿಮಾಗಳಿಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಮಾಡಿರುವ ಸುನೀತಾ ಅವರಿಗೆ ಎಂ.ಎಂ.ಕೀರವಾಣಿ ಎಂದರೆ ತುಂಬಾ ಇಷ್ಟವಂತೆ..
ಸಧ್ಯ ಮೂರು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಬಹಿರಂಗಪಡಿಸಿದ್ದರು.. ನಾನು ಸಿನಿಮಾವೊಂದರ ಪಾತ್ರಕ್ಕೆ ಡಬ್ಬಿಂಗ್ ಮಾಡಲು ಸ್ಟುಡಿಯೋಗೆ ಹೋಗಿದ್ದೆ ಅಲ್ಲಿ, ಆ ಸಿನಿಮಾದ ನಿರ್ದೇಶಕರು ನನ್ನನ್ನು ನೋಡಿ ಸುನೀತಾ ಮೇಡಂ.. ನಾನು ನಿಮ್ಮ ದೊಡ್ಡ ಅಭಿಮಾನಿ. ನೀವು ನನ್ನ ಚಿತ್ರಕ್ಕಾಗಿ ಕೆಲಸ ಮಾಡುತ್ತಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ ಎಂದರು.
ಆಗ ನಾನು ಡಬ್ಬಿಂಗ್ ಶುರು ಮಾಡಿದ ತಕ್ಷಣ ಸುನೀತಾ ಮೇಡಂ ಎನ್ನುವ ಪದ ರೀ ಸುನೀತಾ ಅಂತ ಆಯಿತು. ಆ ಬಳಿಕ ಕೆಲಕಾಲ ಸುನೀತಾ ಎಂದು ಕರೆಯತೊಡಗಿದ. ಆಮೇಲೆ ಸ್ವಲ್ಪ ಹೊತ್ತಿನ ನಂತರ ಅಪ್ಪ, ಕಣ್ಣಾ, ಬುಜ್ಜಿ ಅಂತ ಮಾತಾಡಲು ಶುರುಮಾಡಿದ.. ಹಾಗೆ ಕರೆದಿದ್ದಕ್ಕೆ ನನಗೆ ತುಂಬಾ ಮುಜುಗರವಾಯಿತು.
ಅಲ್ಲಿಂದ ಹೊರಡುವುದು ಹೇಗೆ ಎಂದು ಯೋಚಿಸಿದೆ. ಆದರೆ ಸಾಧ್ಯವಾಗಲಿಲ್ಲ. ಅದಕ್ಕಾಗಿ ಅವನು ಏನು ಕರೆದರೂ, ಏನು ಹೇಳಿದರೂ ನಾನು ಮೌನವಾಗಿದ್ದೆ. ಅದೃಷ್ಟವಶಾತ್ ಆ ನಿರ್ದೇಶಕರ ಸಿನಿಮಾಗೆ ಮತ್ತೆ ಕೆಲಸ ಮಾಡುವ ಅವಕಾಶ ಸಿಗಲಿಲ್ಲ’ ಎನ್ನುತ್ತಾರೆ ಸುನೀತಾ. ಸದ್ಯ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.