ಭಿಕ್ಷುಕನ ಮನೆಯಲ್ಲಿತ್ತು ಕಂತೆ ಕಂತೆ ನೋಟಿನ ಪೆಟ್ಟಿಗೆ
ವ್ಯಕ್ತಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಈ ಕೋಣೆಯ ಮೇಲೆ ಹಕ್ಕು ಸಾಧಿಸಲು ಕೆಲವರು ಯತ್ನಿಸುವುದನ್ನು ಮನಗಂಡ ಪೊಲೀಸರು ತರಾತುರಿಯಲ್ಲಿ ತನಿಖೆ ಆರಂಭಿಸಿದ್ದಾರೆ.
64 ವರ್ಷ ವಯಸ್ಸಿನ ಶ್ರೀನಿವಾಸನ್ ತಿರುಮಲ, ದೇವಾಲಯಕ್ಕೆ ಬರುವ ಭಕ್ತರಲ್ಲಿ ಭಿಕ್ಷೆ ಬೇಡುತ್ತಿದ್ದರು, ಇನ್ನು ಇಲ್ಲಿಗೆ ಬರುವ ವಿಐಪಿ ಭಕ್ತರ ಬೆನ್ನತ್ತುತ್ತಿದ್ದ ಶ್ರೀನಿವಾಸನ್ , ಭಲ್ತರು ತನ್ನ ಕೈಯಿಂದ ತಿಲಕವಿರಿಸಿ ಅದಕ್ಕೆ ಹಣ ನೀಡುವವರೆಗೆ ಬಿಡುತ್ತಿರಲಿಲ್ಲ. ಇದೀಗ ಶ್ರೀನಿವಾಸನ್ ಮನೆಯಲ್ಲಿ ಲಕ್ಷಾಂತರ ರೂಪಾಯಿಗಳಿರುವ ಎರಡು ಪೆಟ್ಟಿಗೆ ಸಿಕ್ಕಿದೆ.
ಕಳೆದ ಕೆಲವು ದಿನಗಳಿಂದ ಕೆಲ ಅಪರಿಚಿತರು ಶ್ರೀನಿವಾಸನ್ ವಾಸವಿದ್ದ ಕೋಣೆಯ ಮೇಲೆ ಹಕ್ಕು ಸಾಧಿಸಲು ಯತ್ನಿಸುತ್ತಿದ್ದರು. ಈ ಜನರಿಗೆ ಶ್ರೀನಿವಾಸನ್ ಕೋಣೆಯಲ್ಲಿ ಹಣ ಇರುವ ಬಗ್ಗೆ ತಿಳಿದಿತ್ತು ಎನ್ನಲಾಗಿದೆ. ಇದನ್ನು ಮನಗಂಡ ಅಕ್ಕಪಕ್ಕದವರು ಟಿಟಿಡಿ ಅಧಿಕಾರಿಗಳು ಮತ್ತು ಪೊಲೀಸರ ಗಮನಕ್ಕೆ ವಿಷಯವನ್ನು ತಂದಿದ್ದಾರೆ.
ಶ್ರೀನಿವಾಸನ್ ಸಂಬಂಧಿಕರು ಯಾರೂ ಇಲ್ಲ ಎಂದು ತಿಳಿದ ನಂತರ, ವಿಜಿಲೆನ್ಸ್ ಮತ್ತು ರಾಜಸ್ವ ವಿಭಾಗದ ತಂಡ ಶ್ರೀನಿವಾಸನ್ ಮನೆಯಲ್ಲಿ ಸಿಕ್ಕಿರುವ ಹಣಗಳ ೆಣಿಕೆ ಕಾರ್ಯ ಆರಂಭಿಸಿತು. ಈ ಸಂದರ್ಭದಲ್ಲಿ ಎರಡು ಪೆಟ್ಟಿಗೆಯಲ್ಲಿ ಒಟ್ಟು 6 ಲಕ್ಷದ 15 ಸಾವಿರದ 50 ರೂಪಾಯಿ ಹಣ ಸಿಕ್ಕಿದೆ.
ಕೆಲ ಸಮಯಗಳ ಹಿಂದೆ, ಬಾಲಿವುಡ್ ತಾರೆಯರಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಿರುಮಕ್ಕೆ ಭೇಟಿ ನೀಡಿದ್ದ ವೇಳೆ ಅವರ ಹಿಂದೆಯೂ ಹೋಗಿದ್ದ ಶ್ರೀನಿವಾಸನ್ ಅವರಿಂದಲೂ ಹಣ ಪಡೆದಿದ್ದ.
ಮನಷ್ಯ ಬರೀ ಕೈಯಲ್ಲಿ ಬರುತ್ತಾನೆ, ಬರೀ ಕೈಯಲ್ಲೇ ಹೋಗುತ್ತಾನೆ ಎಂಬ ಮಾತಿದೆ. ಹಾಗೆಯೇ ಶ್ರೀನಿವಾಸನ್ ಭಿಕ್ಷೆ ಬೇಡಿ ಲಕ್ಷಾಂತರ ರೂಪಾಯಿ ಕೂಡಿಟ್ಟಿದ್ದರೂ ಅವೆಲ್ಲಾ ಈಗ ಸರ್ಕಾರಿ ಖಜಾನೆಯ ಪಾಲಾಗಿದೆ.
ಅತ್ಯಂತ ವಿನಮ್ರ ಸ್ವಭಾವದ ಶ್ರೀನಿವಾಸನ್ ತಾನು ಯುವಕನಾಗಿದ್ದಾಗಲೇ ತಿರುಮಲಕ್ಕೆ ಬಂದಿದ್ದರು. ಬಾಲಾಜಿಯ ಬಗ್ಗೆ ಅಪಾಋ ಭಕ್ತಿಯನ್ನು ಹೊಂದಿದ್ದ ಇವರು ಒಳ್ಳೆಯ ಸ್ವಭಾವ ಹೊಂದಿದ್ದರು. ದೇವಾಲಯಕ್ಕೆ ಬರುವ ಹೆಚ್ಚಿನ ಭಕ್ತರು ಇವರಿಂದ ತಿಲಕ ಇರಿಸಿಕೊಳ್ಳುತ್ತಿದ್ದರು.