ರಾತ್ರಿ ಮಲಗುವಾಗ ತಲೆದಿಂಬಿನ ಕೆಳಗೆ ಈ ಗಿಡದ 5 ಎಲೆಗಳನ್ನು ಇಡಿ: ಎಷ್ಟೇ ಕಡುಬಡತನವಿದ್ದರೂ ತೊಲಗಿ ಶ್ರೀಮಂತಿಕೆ ಬರುವುದು! ಸಾಲವಂತೂ ರುಪಾಯಿಯೂ ಉಳಿಯದಂತೆ ತೀರುವುದು

Wed, 11 Sep 2024-4:20 pm,

 ಬಹುತೇಕ ಹಿಂದೂ ಧರ್ಮದ ಜನರ ಮನೆಗಳಲ್ಲಿ ತುಳಸಿ ಗಿಡ ಇದ್ದೇ ಇರುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಪೂಜಿಸಿ, ನೀರನ್ನು ಅರ್ಪಿಸುತ್ತಾರೆ. ಇನ್ನು ತುಳಸಿ ಔಷಧಿಯಿಂದ ಹಿಡಿದು ಅನೇಕ ಸಮಸ್ಯೆಗಳವರೆಗೆ ಪರಿಣಾಮಕಾರಿಯಾಗಿದೆ.

 

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ತುಳಸಿಯನ್ನು ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗಿದೆ. ಇನ್ನು ತುಳಸಿ ವಿಷ್ಣು ದೇವರಿಗೂ ಅಚ್ಚುಮೆಚ್ಚು. ತುಳಸಿಯಿಲ್ಲದೆ ವಿಷ್ಣು ಮತ್ತು ಶ್ರೀಕೃಷ್ಣನ ಪೂಜೆ ಅಪೂರ್ಣವಾಗುವುದು.

 

ಬಹುತೇಕ ಮನೆಗಳಲ್ಲಿ ತುಳಸಿ ಇದ್ದೇಇರುತ್ತದೆ. ಇದಲ್ಲದೆ, ತುಳಸಿ ಸಸ್ಯಕ್ಕೆ ಅನೇಕ ಪರಿಹಾರಗಳು ಮತ್ತು ನಿಯಮಗಳನ್ನು ಅಳವಡಿಸಲಾಗಿದೆ. ಇವುಗಳನ್ನು ಅಳವಡಿಸಿಕೊಳ್ಳುವುದರಿಂದ ವ್ಯಕ್ತಿಯ ಮನಸ್ಸು ಶಾಂತವಾಗುತ್ತದೆ ಮತ್ತು ಸಂಬಂಧಗಳು ಸುಧಾರಿಸುತ್ತವೆ.

 

ತುಳಸಿ ಎಲೆಗಳು ಔಷಧಿಯಾಗಿ ಅಷ್ಟೇ ಅಲ್ಲದೆ, ಸಮಸ್ಯೆಗಳಿಗೆ ಪರಿಹಾರವಾಗಿ ಹೇಗೆ ಪ್ರಯೋಜನಕಾರಿ ಎಂಬುದನ್ನು ಜ್ಯೋತಿಷಿಗಳು ವಿವರಿಸುತ್ತಾರೆ. ಅದೇ ರೀತಿ ತುಳಸಿಯಿಂದ ಮಾಡುವ ಕೆಲವು ತಂತ್ರಗಳು ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ತುಂಬುತ್ತವೆ. ದಾಂಪತ್ಯ ಜೀವನದಲ್ಲೂ ಪ್ರೀತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಒತ್ತಡದಿಂದ ಮುಕ್ತಿ ನೀಡುತ್ತದೆ ಎಂದು ಹೇಳುತ್ತಾರೆ.

 

ವೈವಾಹಿಕ ಜೀವನದಲ್ಲಿ ಉದ್ವೇಗ, ಒತ್ತಡ, ಆರ್ಥಿಕ ಸಮಸ್ಯೆ ಇದ್ದರೆ ಐದು ತುಳಸಿ ಎಲೆಗಳನ್ನು ದಿಂಬಿನ ಕೆಳಗೆ ಇಟ್ಟು ಮಲಗಿ. ಇದರೊಂದಿಗೆ, ಮನೆಯಲ್ಲಿ ಇರುವ ನಕಾರಾತ್ಮಕತೆಯು ಹೋಗುತ್ತದೆ. ಸಂತೋಷ ಮತ್ತು ಶಾಂತಿ ಇರುತ್ತದೆ ಮತ್ತು ಜೀವನದಲ್ಲಿ ಮಧುರತೆ ಇರುತ್ತದೆ.

 

ಪತಿ-ಪತ್ನಿಯ ನಡುವೆ ಟೆನ್ಷನ್ ಇದ್ದರೆ ಸಂಬಂಧಗಳಲ್ಲಿ ಜಗಳಗಳು ಮತ್ತು ಅಶಾಂತಿ ಇರುತ್ತದೆ. ಹಾಗಾಗಿ ಗಂಡ ಹೆಂಡತಿ ಇಬ್ಬರೂ ತಲೆದಿಂಬಿನ ಕೆಳಗೆ 5 ತುಳಸಿ ಎಲೆಗಳನ್ನು ಇಟ್ಟು ಮಲಗಿ. ಹೀಗೆ ಮಾಡುವುದರಿಂದ ಪತಿ ಪತ್ನಿಯರ ನಡುವೆ ಪ್ರೀತಿ ಹೆಚ್ಚುತ್ತದೆ. ನಕಾರಾತ್ಮಕತೆ ದೂರ ಹೋಗುತ್ತದೆ ಮತ್ತು ಜಗಳಗಳು ಸಂಭವಿಸುವುದಿಲ್ಲ.

 

ರಾತ್ರಿ ಮಲಗುವ ಮುನ್ನ ಐದು ತುಳಸಿ ಎಲೆಗಳನ್ನು ದಿಂಬಿನ ಕೆಳಗೆ ಇಡಿ. ಇದು ನಕಾರಾತ್ಮಕತೆಯನ್ನು ತೊಡೆದುಹಾಕುತ್ತದೆ. ಮನಸ್ಸು ಧನಾತ್ಮಕವಾಗಿ ಉಳಿಯುತ್ತದೆ. ಇದರೊಂದಿಗೆ ಶಾಂತಿ ಮತ್ತು ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಮನಸ್ಸು ಸದಾ ಸಂತೋಷದಿಂದ ಇರುತ್ತದೆ.

 

ದಿನದ ಗಡಿಬಿಡಿ ಮತ್ತು ಒತ್ತಡದಿಂದಾಗಿ ನಿದ್ರೆ ಮಾಡಲು ಸಾಧ್ಯವಾಗದಿದ್ದರೆ, ತುಳಸಿ ಎಲೆಗಳ ಈ ಪರಿಹಾರವನ್ನು ಬಳಸಬಹುದು. ತಲೆದಿಂಬಿನ ಕೆಳಗೆ 5 ತುಳಸಿ ಎಲೆಗಳನ್ನು ಇಟ್ಟು ಮಲಗಿದರೆ ಗಾಢ ನಿದ್ರೆ ಬರುತ್ತದೆ. ಒತ್ತಡವೂ ದೂರವಾಗುತ್ತದೆ.

 

ತುಳಸಿ ಎಲೆಗಳ ಈ ಪರಿಹಾರವು ವ್ಯಾಪಾರ ಮತ್ತು ಉದ್ಯೋಗದಲ್ಲಿನ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಇದರಿಂದ ಮನೆಗೆ ಸಮೃದ್ಧಿ ಹಾಗೂ ವ್ಯಾಪಾರ ವೃದ್ಧಿಯಾಗುತ್ತದೆ. ಉದ್ಯೋಗದಲ್ಲಿಯೂ ಹಣ ಮತ್ತು ಗೌರವ ಸಿಗುತ್ತದೆ. ಮನೆಗೆ ಸಂತೋಷ ಮತ್ತು ಸಮೃದ್ಧಿ ಬರುತ್ತದೆ.

 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link