ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಿ ಗಟ್ಟಿಮುಟ್ಟಾದ ಮೊಣಕಾಲುದ್ದ ಕೂದಲಿಗಾಗಿ ನೆನೆಸಿಟ್ಟ ಮೆಂತ್ಯ ಬೀಜಗಳನ್ನು ಹೀಗೆ ಬಳಸಿ!
ಬಿಳಿ ಕೂದಲನ್ನು ಯಾವುದೇ ಅಡ್ಡಪರಿಣಾಮಗಳಿಲ್ಲದೆ ಕಪ್ಪಾಗಿಸಲು ಮೆಂತ್ಯ ಬೀಜಗಳು ಪ್ರಯೋಜನಕಾರಿ ಆಗಿವೆ.
ಮೆಂತ್ಯ ಬೀಜಗಳಲ್ಲಿ ಪೊಟ್ಯಾಸಿಯಮ್ ಹೇರಳವಾಗಿರುವುದರಿಂದ ಇದು ಬಿಳಿ ಕೂದಲನ್ನು ಬುಡದಿಂದ ಕಪ್ಪಾಗಿಸಲು ಪರಿಣಾಮಕಾರಿ ನೈಸರ್ಗಿಕ ಪರಿಹಾರವಾಗಿದೆ.
ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಡು ಕಪ್ಪಾಗಿಸಲು ಮೆಂತ್ಯ ಬೀಜಗಳನ್ನು ನೇರವಾಗಿ ಬಳಸದೆ ಒಂದು ಲೋಟ ನೀರಿನಲ್ಲಿ ಎರಡು ಚಮಚ ಮೆಂತ್ಯಗಳನ್ನು ನೆನೆಸಿ ರಾತ್ರಿಯಿಡೀ ಹಾಗೆ ಬಿಡಬೇಕು.
ಮರುದಿನ ಬೆಳಿಗ್ಗೆ ನೆನೆಸಿಟ್ಟ ಮೆಂತ್ಯ ಬೀಜಗಳನ್ನು ಆಮ್ಲಾ ರಸದೊಂದಿಗೆ ಬೆರೆಸಿ ಚೆನ್ನಾಗಿ ರುಬ್ಬಿ. ಬಳಿಕ ಹೇರ್ ಮಾಸ್ಕ್ ರೀತಿ ಬುಡದಿಂದ ತುದಿಯವರೆಗೂ ಇದನ್ನು ಕೂದಲಿಗೆ ಅನ್ವಯಿಸಿ.
ಬಿಳಿ ಕೂದಲಿಗೆ ಮೆಂತ್ಯ ಪೇಸ್ಟ್ ಹಚ್ಚಿದ ಎರಡು ಗಂಟೆಗಳ ಬಳಿಕ ಹೇರ್ ವಾಶ್ ಮಾಡಿ. ನಿಯಮಿತವಾಗಿ ಈ ರೀತಿ ಮಾಡಿದರೆ ಕೂದಲು ಬುಡದಿಂದಲೂ ಕಡು ಕಪ್ಪಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.