ನಟಿ ಸೋನಲ್ ಮೊಂಥೆರೋ ಅಣ್ಣ ಕೂಡ ಫೇಮಸ್ ನಟ! ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮಿಂಚುತ್ತಿರುವ ಸ್ಟಾರ್... ಯಾರೆಂದು ಗೆಸ್ ಮಾಡಿ ನೋಡೋಣ
ಇತ್ತೀಚೆಗೆಯಷ್ಟೇ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಅದ್ಧೂರಿ ಮದುವೆ ನಡೆದಿತ್ತು, ಈ ಸಂದರ್ಭದಲ್ಲಿ ಅನೇಕ ಗಣ್ಯರು, ನಟರು ಆಗಮಿಸಿ ನವಜೋಡಿಗೆ ಶುಭಾಶಯ ಸಲ್ಲಿಸಿದ್ದರು.
ಇನ್ನು ಇದೇ ಸಂದರ್ಭದಲ್ಲಿ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ಈ ಫೋಟೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಸೋನಲ್ ಮೊಂಥೆರೋ ಅವರ ಅಣ್ಣನ ಸ್ಥಾನದಲ್ಲಿ ನಿಂತು ಮದುವೆ ಕಾರ್ಯ ನಡೆಸಿಕೊಟ್ಟಿದ್ದರು.
ಅಷ್ಟಕ್ಕೂ ಅವರು ಬೇರಾರು ಅಲ್ಲ, ಲಕ್ಷ್ಮೀನಿವಾಸ ಧಾರಾವಾಹಿಯಲ್ಲಿ ಖಳನಾಯಕನಾಗಿ ಅಭಿನಯಿಸುತ್ತಿರುವ ಅಮಿತ್ ರಾವ್.
ಇವರು ಸೋನಲ್ ಮೊಂಥೆರೋ ಅಣ್ಣ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅಮಿತ್ ಶೇರ್ ಮಾಡಿಕೊಂಡಿರುವ ಫೋಟೋಗೆ ನೆಟ್ಟಿಗರೊಬ್ಬರು ಕಮೆಂಟ್ ಮಾಡಿ ಪ್ರಶ್ನಿಸಿದ್ದು, ಅದಕ್ಕೆ ಉತ್ತರಿಸಿದ ಅಮಿತ್. "ಸೋನಲ್ ನಮ್ಮ ಫ್ಯಾಮಿಲಿ ಸದಸ್ಯರಿದ್ದಂತೆ" ಎಂದು ಹೇಳಿದ್ದಾರೆ.
ನಟಿ ಸೋನಲ್ ಮೊಂಥೆರೋ ತಮ್ಮ ಹುಟ್ಟುಹಬ್ಬದ ದಿನವೇ ತರುಣ್ ಸುಧೀರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ನವ ಜೋಡಿಯ ಫೋಟೋಸ್ʼಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.