ಭಾರತದ ಜೊತೆ ಸೆಮಿಫೈನಲ್ ನಲ್ಲಿ ಸೆಣೆಸುವುದು ಇದೇ ತಂಡ ! ಟೀಂ ಇಂಡಿಯಾ ಮಾಜಿ ನಾಯಕನ ಭವಿಷ್ಯ

Wed, 08 Nov 2023-7:14 pm,

ವಿಶ್ವಕಪ್‌ 2023ರಲ್ಲಿ  ಭಾರತ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ  ಸೆಮಿಫೈನಲ್ ತಲುಪಿದೆ. ಈ ಪೈಕಿ ಟೀಂ ಇಂಡಿಯಾ ಅತಿ ಹೆಚ್ಚು ಅಂಕಗಳನ್ನು ಪಡೆದು ಅಗ್ರಸ್ಥಾನದಲ್ಲಿದೆ. 

 ಇನ್ನು ಟಾಪ್ 4 ನೇ ತಂಡ ಯಾವುದು ಎನ್ನುವುದು ಇನ್ನೂ ಅಸ್ಪಷ್ಟ. ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನದ ಮಧ್ಯೆ ಈಗ ಹಣಾಹಣಿ ನಡೆಯುತ್ತಿದೆ. ಅದರಲ್ಲೂ ಪಾಕಿಸ್ತಾನ, ನ್ಯೂಜಿಲೆಂಡ್  ಈ ಎರಡು ತಂಡಗಳ ಪೈಕಿ ಜಿದಾಜಿದ್ದಿ ಜೋರಾಗಿದೆ. ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದಿರುವ ಭಾರತ ಪಾಯಿಂಟ್ ಟೇಬಲ್ ನಲ್ಲಿ ಅಗ್ರಸ್ಥಾನದಲ್ಲಿದೆ.    

ಈ ಹಿನ್ನೆಲೆಯಲ್ಲಿ ನವೆಂಬರ್ 15ರಂದು ನಡೆಯಲಿರುವ ಮೊದಲ ಸೆಮಿಫೈನಲ್ ನಲ್ಲಿ ಭಾರತ  ಕಣಕ್ಕಿಳಿಯುವುದು ಗ್ಯಾರಂಟಿ. ಆದರೆ ಟೀಂ ಇಂಡಿಯಾದ ಜೊತೆ ಸೆಣೆಸುವುದು ಯಾವ ತಂಡ ಎನ್ನುವುದೇ ಸದ್ಯ ಮುಂದಿರುವ ಪ್ರಶ್ನೆ.   

ಈ ಮಧ್ಯೆ ಟೀಂ ಇಂಡಿಯಾ ಮಾಜಿ ನಾಯಕ  ಸೌರವ್ ಗಂಗೂಲಿ ಭವಿಷ್ಯ ನುಡಿದಿದ್ದಾರೆ. ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ  ಮುಖಾಮುಖಿಯಾಗಲಿವೆ ಎಂದಿದ್ದಾರೆ.   

ಪಾಕಿಸ್ತಾನ ವಿಶ್ವಕಪ್‌ನ ಸೆಮಿಫೈನಲ್‌ ಪ್ರವೇಶಿಸುತ್ತದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್ ನಲ್ಲಿ ಸೆಣೆಸಲಿದೆ. ಇದು ವಿಶ್ವಕಪ್‌ನಲ್ಲಿ ಅತ್ಯಂತ ದೊಡ್ಡ ಪಂದ್ಯವಾಗಲಿದೆ ಎಂದಿದ್ದಾರೆ.

ಇದೀಗ ನಾಲ್ಕನೇ ಸ್ಥಾನಕ್ಕಾಗಿ ಪಾಕಿಸ್ತಾನ, ನ್ಯೂಜಿಲ್ಯಾಂಡ್ ಮತ್ತು ಅಫ್ಘಾನಿಸ್ತಾನ  ನಡುವೆ ಪೈಪೋಟಿ ಇದೆ. ಒಂದು ವೇಳೆ ಪಾಕ್ ಟಾಪ್ 4 ರಲ್ಲಿ ಸ್ಥಾನ ಪಡೆದರೆ ಭಾರತವನ್ನು ಪಾಕಿಸ್ತಾನ ತಂಡವೇ ಎದುರಿಸಲಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link