RCB Captain: ವಿರಾಟ್ ಅಲ್ಲ.. ಈತನೇ ಬೆಂಗಳೂರು ತಂಡದ ಕ್ಯಾಪ್ಟನ್! ಈ ಸಲ ಕಪ್..?
RCB Captain: ಐಪಿಎಲ್ ಮೆಗಾ ಹಾರಜು ನಡೆದು ಮುಗಿದಿದೆ. ಆರ್‌ಸಿಬಿ ತಂಡವನ್ನು ಕಟ್ಟುವಲ್ಲಿ ಫ್ರಾಂಚೈಸಿ ಎಡವಿದ್ದು, ಈ ಭಾರಿಯೂ ಕೂಡ ಬೆಂಗಳೂರು ತಂಡ ಕಪ್ ನಮ್ಮದಾಗುತ್ತಾ ಇಲ್ವಾ ಎನ್ನುವ ಅನುಮಾನದಲ್ಲಿದೆ.
ಈ ಭಾರಿಯ ಐಪಿಎಲ್ ಹರಾಜಿನಲ್ಲಿ ವಿದೇಶಿ ಆಟಗಾರರಿಗೆ ಪ್ರಾಮುಖ್ಯತೆ ನೀಡಿದ ಆರ್‌ಸಿಬಿ ಫ್ರಾಂಚೈಸಿ. ಕನ್ನಡಿಗರನ್ನು ಸೂರ ತಳ್ಳಿರುವುದು ಅಭಿಮಾನಿಗಳಲ್ಲಿ ಬೇಸರವನ್ನುಂಟು ಮಾಡಿತ್ತು.
ಇನ್ನೂ, ಆರ್‌ಸಿಬಿ ತಂಡದಲ್ಲಿ ಭುವನೇಶ್ವರ್ ಕುಮಾರ್, ಟಿಮ್ ಡೇವಿಡ್, ಜೋಶ್ ಹೇಜಲ್‌ವುಡ್, ಫಿಲ್ಟ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್‌ನಂತಹ ಪ್ರಮುಖ ಆಟಗಾರರನ್ನಷ್ಟೆ ಖರೀದಿಸಿದೆ. ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದ ಮೊಹಮ್ಮದ್ ಸಿರಾಜ್ ಅವರನ್ನು ಬೆಂಗಳೂರು ಫ್ರಾಂಚೈಸಿ ಕೈ ಬಿಟ್ಟಿದೆ.
ಇನ್ನೂ, ಐಪಿಎಲ್ ಮೆಗಾ ಹರಾಜಿಗೂ ಮುನ್ನ ಕೆ ಎಲ್ ರಾಹುಲ್ ಅವರನ್ನು ಆರ್‌ಸಿಬಿ ಫ್ರಾಂಚೈಸಿ ಖರೀದಿಸಲಿದೆ, ಇದರಿಂದ ಈ ಭಾರಿ ಕಪ್ ಅನ್ನು ಗೆಲ್ಲಬಹುದು ಎಂಬ ಕುತೂಹಲದಿಂದ ಅಭಿಮಾನಿಗಳು ಕಾಯುತ್ತಿದ್ದರು.
ಆದರೆ, ಕೊನೆ ಕ್ಷಣದಲ್ಲಿ ಆರ್‌ಸಿಬಿ ತಂಡ ಕೆ ಎಲ್ ರಾಹುಲ್ ಅವರನ್ನು ಕೂಡ ಖರೀಸಿದರೆ, ಅಭಿಮನಿಗಲ ಆಸೆಗೆ ಎಳ್ಳು ನೀರು ಬಿಟ್ಟಿದೆ.
ಇನ್ನೂ, ಐಪಿಎಲ್ 2025 ರಲ್ಲಿ ಆರ್‌ಸಿಬಿ ತಂಡವನ್ನು ಕೆ ಎಲ್ ರಾಹುಲ್ ಅವರು ನಡೆಸಲಿದ್ದಾರೆ ಎಂದು ಹೇಲಲಾಗುತ್ತಿತ್ತು, ಆದರೆ ಅವರು ಇದೀಗ ಬೇರೆ ತಂಡದ ಪಾಲಾಗಿದ್ದಾರೆ.
ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ತಂಡದಲ್ಲಿ ನಾಯಕತ್ವವನ್ನು ಮುನ್ನಡೆಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತಾದರೂ ಕೂಡ, ಇದೀಗ ಕೊಹ್ಲಿ ಅವರು ಬೆಂಗಳೂರು ತಂಡದಲ್ಲಿ ನಾಯಕತ್ವವನ್ನು ವಹಿಸಿಕೊಳ್ಳುತ್ತಿಲ್ಲ ಎನ್ನುವ ಸುದ್ದಿ ಹರಿದಾಡುತ್ತಿದೆ.
ಒಂದು ವೇಳೆ ವಿರಾಟ್ ಕೊಹ್ಲಿ ಅವರು ನಾಯಕತ್ವ ವಹಿಸಿಕೊಳ್ಳದೆ ಹೋದಲ್ಲಿ ರಜತ್ ಪಟಿದಾರ್ ಕ್ಯಾಪ್ಟನ್ಸಿ ವಹಿಸಿಕೊಳ್ಳಲಿದ್ದಾರೆ. ತಂಡದಲ್ಲಿ ರಜತ್ ಪ್ರಮುಖ ಆಟಗಾರರಾಗಿದ್ದು,ತಂಡವನ್ನು ಇವರು ಸರಿಯಾಗಿ ನಿಬಾಯಿಸುತ್ತಾರಾ ಎಂಬ ಅನುಮಾನ ಇದೆ.
ಇನ್ನೂ, ಆರ್‌ಸಿಬಿ ತಂಡ ರಜತ್ ಅವರನ್ನು 11 ಕೋಟಿಗೆ ರಿಟೈನ್ ಮಾಡಿಕೊಂಡಿದೆ, ಇವರು ತಂಡದ ನಾಯಕತ್ವ ವಹಿಸಿಕೊಂಡರೂ ಕೂಡ ಇವರಿಗೆ ವಿರಾಟ್ ಕೊಹ್ಲಿ ಅವರ ಮಾರ್ಗದರ್ಶನ ಬೇಕೆ ಬೇಕು ಎಂದು ರಾಬಿನ್ ಉತ್ತಪ್ಪ ಅವರು ಅಭಿಪ್ರಾಯ ಪಟ್ಟಿದ್ದಾರೆ.