Sovereign Gold Bond 2021: ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಸಲು ಮಾ.1 ರಿಂದ ಸಿಗುತ್ತಿದೆ ಈ ಸುವರ್ಣಾವಕಾಶ
1. ಗೋಲ್ಡ್ ಬಾಂಡ್ ಗಳನ್ನು ಎಲ್ಲಿ ಖರೀದಿಸಬಹುದು ಪ್ರತಿ SGB ಅಪ್ಲಿಕೇಶನ್‌ನೊಂದಿಗೆ ಹೂಡಿಕೆದಾರರ PAN ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕು. ಚಿನ್ನದ ಬಾಂಡ್‌ಗಳನ್ನು ಬ್ಯಾಂಕುಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (HSCIL), ಗೊತ್ತುಪಡಿಸಿದ ಅಂಚೆ ಕಚೇರಿಗಳು ಮತ್ತು ಮಾನ್ಯತೆ ಪಡೆದ ಷೇರು ವಿನಿಮಯ ಕೇಂದ್ರಗಳು (NSE ಮತ್ತು BSE) ಮೂಲಕ ಮಾರಾಟ ಮಾಡಲಾಗುತ್ತದೆ.
2. ಎಷ್ಟು ಹೂಡಿಕೆ ಮಾಡಬಹುದು? ಯೋಜನೆಯಡಿಯಲ್ಲಿ, ವೈಯಕ್ತಿಕ ಹೂಡಿಕೆದಾರರು (Investment In Gold) ಮತ್ತು ಹಿಂದೂ ಅವಿಭಾಜ್ಯ ಕುಟುಂಬಗಳು ಆರ್ಥಿಕ ವರ್ಷದಲ್ಲಿ ಕನಿಷ್ಠ ಒಂದು ಗ್ರಾಂ ಮತ್ತು ಗರಿಷ್ಠ ನಾಲ್ಕು ಕಿಲೋಗ್ರಾಂ ಚಿನ್ನದಲ್ಲಿ (Gold) ಹೂಡಿಕೆ ಮಾಡಬಹುದು. ಟ್ರಸ್ಟ್ ಮತ್ತು ಇಂತಹ ಇತರ ಘಟಕಗಳು ಪ್ರತಿವರ್ಷ 20 ಕೆಜಿ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಚಿನ್ನದ ಬಾಂಡ್‌ಗಳನ್ನು ಬ್ಯಾಂಕುಗಳು, ಭಾರತದ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್‌ಗಳು, ಅಂಚೆ ಕಚೇರಿಗಳು ಮತ್ತು ಮಾನ್ಯತೆ ಪಡೆದ ಷೇರು ವಿನಿಮಯ ಕೇಂದ್ರಗಳ ಮೂಲಕ ಮಾರಾಟ ಮಾಡಲಾಗುತ್ತದೆ.
3. Gold Bondಗಳ ಲಾಭವೇನು?: - ಗೋಲ್ಡ್ ಬಾಂಡ್ ಹೂಡಿಕೆಯ ಮ್ಯಾಚುರಿಟಿ ತೆರಿಗೆ ಮುಕ್ತವಾಗಿರುತ್ತದೆ. ಅಲ್ಲದೆ ಇದರಲ್ಲಿ ಎಕ್ಷ್ಪೆನ್ಸ ರೆಶ್ಯೋ ಒಟ್ಟಿಗೆ ಇರುವುದಿಲ್ಲ. ಭಾರತ ಸರ್ಕಾರಕ್ಕ ಸಮರ್ಪಿತವಾದ ಕಾರಣ ಡಿಫಾಲ್ಟ್ ಅಪಾಯ ಇರುವುದಿಲ್ಲ. - ಇದು HINs ಗಾಗಿ ಉತ್ತಮ ಆಯ್ಕೆಯಾಗಿದೆ. ಹೀಗಾಗಿ ಮ್ಯಾಚ್ಯೂರಿಟಿವರೆಗೆ ಕಾಯ್ದರೆ, ಕ್ಯಾಪಿಟಲ್ ಗೆನ್ಸ್ ಟ್ಯಾಕ್ಸ್ ಕೂಡ ಇರುವುದಿಲ್ಲ. ಇಕ್ವಿಟಿ ಮೇಲೆ ಶೇ.10ರಷ್ಟು ಕ್ಯಾಪಿಟಲ್ ಗೆನ್ಸ್ ಟ್ಯಾಕ್ಸ್ ಇರುತ್ತದೆ. ಹೇಗಾಗಿ ದೀರ್ಘಾವಧಿ ಹೂಡಿಕೆಗೆ ಇದೊಂದು ಉತ್ತಮ ಆಯ್ಕೆಯಾಗಿದೆ. - ಭೌತಿಕ ಚಿನ್ನಕ್ಕೆ ಹೋಲಿಸಿದರೆ ಇದೊಂದು ಸುರಕ್ಷಿತ ಹೂಡಿಕೆಯಾಗಿದೆ. - ಚಿನ್ನದ ಶುದ್ಧತೆಯನ್ನು ಪರಿಶೀಲಿಸುವ ಅವಶ್ಯಕತೆ ಇಲ್ಲ. - ಎಕ್ಸಿಟ್ ಗಾಗಿ ತುಂಬಾ ಸರಳ ಆಯ್ಕೆಗಳಿವೆ. ಇದರ ಮೇಲೆ ನೀವು ಸಾಲವನ್ನು ಕೂಡ ಪಡೆಯಬಹುದು.