ಈ ಸೊಪ್ಪನ್ನು ಬೇಯಿಸಿ ತಿಂದರೆ ಬಿಳಿಕೂದಲು ಪರ್ಮನೆಂಟ್ ಆಗಿ ಕಪ್ಪಾಗುತ್ತೆ! ಒಮ್ಮೆ ಟ್ರೈ ಮಾಡಿ ನೋಡಿ
ವಯಸ್ಸಿಗೆ ಮುಂಚೆಯೇ ಕೂದಲು ಬಿಳಿಯಾಗುವುದು ಕೆಲವೊಮ್ಮೆ ಮುಜುಗರಕ್ಕೀಡು ಮಾಡುತ್ತದೆ. ಇವು ಸೌಂದರ್ಯವನ್ನು ಹಾಳು ಮಾಡುತ್ತದೆ. ಆರಂಭದಲ್ಲಿ ಒಂದೋ ಎರಡೋ ಎಂದು ಕಂಡರೂ ಅನಾರೋಗ್ಯಕರ ಅಭ್ಯಾಸಗಳಿಂದಾಗಿ ಬಿಳಿಕೂದಲು ಹೆಚ್ಚುತ್ತಲೇ ಹೋಗುತ್ತದೆ.
ಬೂದು ಕೂದಲಿನ ಸಮಸ್ಯೆಯ ಹಿಂದೆ ಹಲವು ಕಾರಣಗಳಿವೆ. ಪ್ರಮುಖ ಕಾರಣಗಳಲ್ಲಿ ಒಂದು ಜೀವಸತ್ವಗಳು ಮತ್ತು ಆರೋಗ್ಯಕರ ಆಹಾರವನ್ನು ಅನುಸರಿಸದಿರುವುದು. ಆಹಾರದಲ್ಲಿ ಪೋಷಕಾಂಶಗಳ ಕೊರತೆಯಿಂದಾಗಿ, ಹಲವಾರು ರೀತಿಯ ಕೂದಲಿನ ಸಮಸ್ಯೆಗಳು ಪ್ರಾರಂಭವಾಗುತ್ತವೆ.
ನೆಲ್ಲಿಕಾಯಿಯನ್ನು ಆಯುರ್ವೇದದಲ್ಲಿ ಬಹಳ ಪ್ರಯೋಜನಕಾರಿ ಅಂಶವೆಂದು ಪರಿಗಣಿಸಲಾಗಿದೆ. ಬಿಳಿ ಕೂದಲಿನ ಸಮಸ್ಯೆಯನ್ನು ದೂರವಿಡುವಲ್ಲಿ ಇದು ಪರಿಣಾಮಕಾರಿ. ಪ್ರತಿದಿನ ಒಂದು ನೆಲ್ಲಿಕಾಯಿಯನ್ನು ತಿನ್ನುವುದರಿಂದ ಕೂದಲು ಆರೋಗ್ಯಕರವಾಗಿರುವುದು ಮಾತ್ರವಲ್ಲದೆ ಬಿಳಿಕೂದಲಿನ ಸಮಸ್ಯೆಯನ್ನು ತಡೆಯುತ್ತದೆ.
ದೈಹಿಕ ಸಮಸ್ಯೆಗಳನ್ನು ದೂರ ಮಾಡಲು ಪಾಲಕ್ ಸೊಪ್ಪು ಉತ್ತಮ ಆಯ್ಕೆ. ಅದರಲ್ಲೂ ಇದು ಕೂದಲಿಗೆ ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಫೋಲಿಕ್ ಆಮ್ಲವು ಕೂದಲನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ನೆತ್ತಿಯ ಚರ್ಮವನ್ನು ಪೋಷಿಸುತ್ತದೆ. ಇನ್ನು ಪಾಲಕ್ ಸೊಪ್ಪನ್ನು ಬೇಯಿಸಿ ಅಥವಾ ಸಲಾಡ್ ರೀತಿಯಲ್ಲಿ ತಿಂದರೆ ಕ್ರಮೇಣ ಕೂದಲು ಕಪ್ಪಾಗುತ್ತವೆ.
ಕೂದಲಿನ ಆರೋಗ್ಯ ಕಾಪಾಡುವಲ್ಲಿ ಎಳ್ಳು ಮತ್ತು ಸೂರ್ಯಕಾಂತಿ ಬೀಜ ಉತ್ತಮ. ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತಿದ್ದರೆ, ಎಳ್ಳು ಮತ್ತು ಸೂರ್ಯಕಾಂತಿ ಬೀಜಗಳನ್ನು ಸೇವಿಸಿ. ಇದರಲ್ಲಿರುವ ಕಬ್ಬಿಣ, ಸತು, ವಿಟಮಿನ್ ಬಿ6 ಮತ್ತು ವಿಟಮಿನ್ ಇ ಗುಣಗಳು ಹಲವು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಎಳ್ಳಿನಲ್ಲಿ ಉತ್ಕರ್ಷಣ ನಿರೋಧಕ ಗುಣಗಳಿವೆ. ಇದು ಕೂದಲು ಬಿಳಿ ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ.
ಕೂದಲು ಆರೋಗ್ಯಕರವಾಗಿ ಮತ್ತು ಕಪ್ಪಾಗಿರಲು ಬಯೋಟಿನ್ ಎಂಬ ಅಂಶ ಬಹಳ ಮುಖ್ಯ. ಮೊಟ್ಟೆಯು ಪ್ರೋಟೀನ್’ನಲ್ಲಿ ಸಮೃದ್ಧವಾಗಿದ್ದು, ಬಯೋಟಿನ್ ಎಂಬ ವಿಟಮಿನ್ ಬಿ ಗುಣಗಳನ್ನು ಸಹ ಹೊಂದಿದೆ. ಇದು ಕೂದಲಿನ ನೈಸರ್ಗಿಕ ಬಣ್ಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆಹಾರದಲ್ಲಿ ಪ್ರೋಟೀನ್ ಮತ್ತು ಬಯೋಟಿನ್ ಸಮೃದ್ಧವಾಗಿರುವ ಇತರ ವಸ್ತುಗಳನ್ನು ಸಹ ನೀವು ಸೇರಿಸಬಹುದು. ಇದು ನಿಮ್ಮ ಕೂದಲಿಗೆ ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)