ಶೀಘ್ರದಲ್ಲಿಯೇ ಸಿಂಹ ರಾಶಿಯಲ್ಲಿ ಬುಧ-ಮಂಗಳ-ಶುಕ್ರರ ಮೈತ್ರಿ, ಈ ಜನರ ಮೇಲಾಗಲಿದೆ ಹಣದ ಸುರಿಮಳೆ!
ವೈದಿಕ ಪಂಚಾಂಗದ ಪ್ರಕಾರ ಬರುವ ಜುಲೈ 25 ರಂದು ಸಿಂಹ ರಾಶಿಯಲ್ಲಿ ಬುಧ, ಶುಕ್ರ ಹಾಗೂ ಮಂಗಳರ ಮೈತ್ರಿ ನೆರವೇರಲಿದೆ. ಇದೃಂದ ಮೂರು ರಾಶಿಗಳ ಜಾತಕದವರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಈ ಮೂರು ರಾಶಿಗಳ ಜನರಿಗೆ ಅಪಾರ ಧನ ಪ್ರಾಪ್ತಿಯ ಯೋಗ ರೂಪುಗೊಳ್ಳಲಿದೆ.
ತುಲಾ ರಾಶಿ- ನಿಮ್ಮ ಗೋಚರ ಜಾತಕದ ಆದಾಯ ಭಾವದಲ್ಲಿ ಈ ಶುಕ್ರ, ಮಂಗಳ ಹಾಗೂ ಬುಧರ ಮೈತ್ರಿ ನೆರವೇರುತ್ತಿದ್ದು, ನಿಮ್ಮ ಪಾಲಿಗೆ ಇದು ಲಾಭದಾಯಕ ಸಾಬೀತಾಗಲಿದೆ. ಸಾಮಾನ್ಯವಾಗಿ ಆದಾಯ ಭಾವದಲ್ಲಿ ಈ ಮೈತ್ರಿ ಇರುವ ಕಾರಣ ನಿಮ್ಮ ಆಧಾಯದಲ್ಲಿ ಅಪಾರ ಹೆಚ್ಚಳ ಸಂಭವಿಸಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕು ನಿಮಗೆ ಪದೋನ್ನತಿಯ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಇದರಿಂದ ಆದಾಯ ವೃದ್ಧಿಯ ಪ್ರಬಲ ಯೋಗ ನಿರ್ಮಾಣಗೊಳ್ಳಲಿದೆ. ಈ ಅವಧಿಯಲ್ಲಿ ನೀವು ಹಣ ಉಳಿತಾಯ ಮಾಡುವಲ್ಲಿ ಯಶಸ್ವಿಯಾಗುವಿರಿ. ಷೇರು ಮಾರುಕಟ್ಟೆ, ಲಾಟರಿ ವ್ಯವಹಾರಗಳಿಂದ ನಿಮಗೆ ಲಾಭ ಸಿಗಲಿದೆ.
ವೃಶ್ಚಿಕ ರಾಶಿ- ಬುಧ-ಮಂಗಳ-ಶುಕ್ರರ ಈ ಮೈತ್ರಿ ನಿಮ್ಮ ಗೋಚರ ಜಾತಕದ ಕರ್ಮ ಭಾವದ ಮೇಲೆ ನೆರವೇರುತ್ತಿದೆ. ಇದರಿಂದ ವೃಶ್ಚಿಕ ರಾಶಿಯ ಜನರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಕೆಲಸ ವ್ಯವಹಾರಗಳಲ್ಲಿ ನಿಮಗೆ ಯಶಸ್ಸು ಪ್ರಾಪ್ತಿಯಾಗಲಿದೆ. ವೃತ್ತಿಜೀವನ ಕೂಡ ಉತ್ತಮವಾಗಿರಲಿದೆ. ಕಾರ್ಯಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ಇದರ ಪರಿಣಾಮವಶಾತ್ ನಿಮಗೆ ಹೆಚ್ಚುವರಿ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ವ್ಯಾಪಾರಸ್ಥರಿಗೆ ಅವರ ವ್ಯಾಪಾರದಲ್ಲಿ ಅಪಾರ ಧನಲಾಭ ಉಂಟಾಗಲಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ತಂದೆಯ ಬೆಂಬಲ ಸಿಗಲಿದೆ.
ಕರ್ಕ ರಾಶಿ- ಈ ಮೂರು ದೊಡ್ಡಗ್ರಹಗಳ ಮೈತ್ರಿ ನಿಮ್ಮ ಗೋಚರ ಜಾತಕದ ಆದಾಯ ಭಾವದಲ್ಲಿ ನೆರವೇರುತ್ತಿದೆ. ಹೀಗಾಗಿ ಇದು ನಿಮ್ಮ ಪಾಲಿಗೂ ಕೂಡ ಮಂಗಳಕರ ಸಿದ್ಧ ಸಾಬೀತಾಗಲಿದೆ. ಇದರಿಂದ ನಿಮಗೆ ಆಕಸ್ಮಿಕ ಧನಪ್ರಾಪ್ತಿಯ ಯೋಗ ನಿರ್ಮಾಣಗೊಳ್ಳುತ್ತಿದೆ. ಈ ಅವಧಿಯಲ್ಲಿ ನಿಮಗೆ ಸಿಗುವ ಅವಕಾಶಗಳಿಂದ ನೀವು ಉತ್ತಮ ಹಣಗಳಿಕೆ ಮಾಡುವಲ್ಲಿ ಯಶಸ್ಸನ್ನು ಸಾಧಿಸುವಿರಿ. ಆರ್ಥಿಕ ಸ್ಥಿತಿ ಉತ್ತಮಗೊಂದು ನಿಮ್ಮ ಮಾತಿನ ಪ್ರಭಾವ ಹೆಚ್ಚಾಗಲ್ಲಿದೆ. ವಿದೇಶಗಳ ಜೊತೆಗೆ ವ್ಯಾಪಾರ ಸಂಬಂಧ ಹೊಂದಿದವರಿಗೆ ಅತಿ ಹೆಚ್ಚು ಲಾಭ ಉಂಟಾಗುವ ಸಾಧ್ಯತೆ ಇದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)