ಹಲವು ವರ್ಷಗಳ ಬಳಿಕ ಆಗಸ್ಟ್ 16 ರಂದು ನಿರ್ಮಾಣಗೊಳ್ಳುತ್ತಿದೆ ವಿಶೇಷ ಯೋಗ, ಧನ-ವೈಭವ ಪ್ರಾಪ್ತಿಗೆ ಸುವರ್ಣಾವಕಾಶ!
1. ಆಗಸ್ಟ್ 16 ರಂದು ನಿರ್ಮಾಣಗೊಳ್ಳುತ್ತಿದೆ ಅಪರೂಪದ ಕಾಕತಾಳೀಯ : ಜೋತಿಷ್ಯ ಶಾಸ್ತ್ರ ಹಾಗೂ ಹಿಂದೂ ಪಂಚಾಂಗದ ಪ್ರಕಾರ ಆಗಸ್ಟ್ 15 ಮಂಗಳವಾರ ಮಧ್ಯಾಹ್ನ 12 ಗಂಟೆ 42 ನಿಮಿಷಕ್ಕೆ ಅಮಾವಾಸ್ಯೆಯ ತಿಥಿ ಆರಂಭಗೊಳ್ಳುತ್ತಿದೆ. ಇದು ಬುಧವಾರ ಮಧ್ಯಾಹ್ನ 3 ಗಂಟೆ 7 ನಿಮಿಷದವರೆಗೆ ಇರಲಿದೆ. ಇದರಿಂದ ಅಮಾವಾಸ್ಯೆ ಆಗಸ್ಟ್ 16ಕ್ಕೆ ಬೀಳುತ್ತಿದೆ. ಹೀಗಾಗಿ ಇಲ್ಲ ಅಮಾವಾಸ್ಯೆ ತಿಥಿ ಅಂತ್ಯ ಹಾಗೂ ಶ್ರಾವಣ ಮಾಸ ಆರಂಭ ಎರಡೂ ತಿಥಿಗಳು ಏಕಕಾಲಕ್ಕೆ ಸಂಭವಿಸುತ್ತಿರುವ ಕಾರಣ ಒಂದು ಅದ್ಭುತ ಯೋಗ ರೂಪುಗೊಳ್ಳುತ್ತಿದ್ದು, ಇದು ಅತ್ಯಂತ ಶುಭ ಹಾಗೂ ಕಾಕತಾಳೀಯ ಎನ್ನಲಾಗುತ್ತಿದೆ.
2. ಶಿವ ಪುರಾಣದ ಪ್ರಕಾರ ಶ್ರಾವಣ ಮಾಸದಲ್ಲಿ ಶಿವ ಹಾಗೂ ತಾಯಿ ಪಾರ್ವತಿ ಪೃಥ್ವಿಗೆ ಬಂದು ನೆಲೆಸುತ್ತಾರೆ ಎನ್ನಲಾಗುತ್ತದೆ. ಹೀಗಾಗಿ ಈ ತಿಂಗಳಲ್ಲಿ ಅವರ ಪೂಜೆ ನೆರವೇರಿಸಿದರೆ ಅಪಾರ ಧನ-ಧಾನ್ಯ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ. ಇದಲ್ಲದೆ ಅಧಿಕ ಅಮಾವಾಸ್ಯೆ ತಿತಿಯೂ ಕೂಡ ಬೀಳುವ ಕಾರಣ ಪೂರ್ವಜರ ಆಶೀರ್ವಾದ ಕೂಡ ಪ್ರಾಪ್ತಿಯಾಗಲಿದೆ.
3. ಆಗಸ್ಟ್ 16 ರಂದು ಶಿವನಿಗೆ ಅರ್ಪಿಸಿ ಈ ವಿಶೇಷ ವಸ್ತು: ಆಗಸ್ಟ್ 16 ರಂದು ಅಂದರೆ ಅಧಿಕ ಮಾಸದ ಅಮಾವಾಸ್ಯೆಯ ತಿಥಿಯ ದಿನ ದೇವಾಧಿದೇವ ಮಹಾದೇವ ಹಾಗೂ ಪೂರ್ವಜರ ಆಶೀರ್ವಾದ ಪಡೆಯಲು ಶಿವಲಿಂಗದ ಮೇಲೆ ಒಂದು ಲೋಟ ಜಲದ ಜೊತೆಗೆ ಹಳದಿ ಕನೇರಿ ಹೂವನ್ನು ಅವಶ್ಯವಾಗಿ ಅರ್ಪಿಸಿ.
4. ಹಳದಿ ಕನೇರಿ ಹೂವು ಶಿವನಿಗೆ ಅತ್ಯಂತ ಪ್ರಿಯವಾದ ಹೂವು ಎನ್ನಲಾಗುತ್ತದೆ. ಶಿವಳಿಂದಾದ ಮೇಲೆ ಈ ಹೂವನ್ನು ಅರ್ಪಿಸಿದರೆ, ಧನ-ಧಾನ್ಯದಲ್ಲಿ ಅಪಾರ ವೃದ್ಧಿಯಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ. ಇದು ಮನೆಯಲ್ಲಿನ ದಾರಿದ್ರ್ಯವನ್ನು ತೊಲಗಿಸಲು ಕಾರಣವಾಗಿ ಮನೆಯಲ್ಲಿ ಸುಖ-ಸೌಭಾಗ್ಯ-ಶಾಂತಿ ನೆಲೆಸುವಂತೆ ಮಾಡುತ್ತದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)