Long Hair: ಬೋಳು ತಲೆಯಲ್ಲೂ ದಪ್ಪ ಉದ್ದ ಕೂದಲು ಬೆಳೆಯಲು ಈ ಕಾಳು ತಿನ್ನಿ ಸಾಕು!
ಮನೆಮದ್ದುಗಳಲ್ಲಿ ಒಂದು ಮೆಂತ್ಯ ಕಾಳು. ಮೆಂತ್ಯ ಬೀಜಗಳಲ್ಲಿ ಹೇರಳವಾದ ಕಬ್ಬಿಣ, ಸತು, ಆರೋಗ್ಯಕರ ಕೊಬ್ಬು ಮತ್ತು ಪ್ರೋಟೀನ್ ಇರುತ್ತವೆ. ಇದು ಕೂದಲಿಗೆ ಸಾಕಷ್ಟು ಪೋಷಣೆಯನ್ನು ಒದಗಿಸಲು ಸಹಾಯ ಮಾಡುತ್ತದೆ. ಇದು ಕೂದಲಿನ ಬೆಳವಣಿಗೆಗೆ ಅವಶ್ಯಕವಾಗಿದೆ.
ಮೆಂತ್ಯ ಬೀಜಗಳನ್ನು ಸರಿಯಾಗಿ ಸೇವಿಸುವುದರಿಂದ ನಿಮ್ಮ ಕೂದಲು ದಟ್ಟವಾಗಿ ಮತ್ತು ಉದ್ದವಾಗಿ ಬೆಳೆಯುತ್ತದೆ. ಈ ಕಾರಣಕ್ಕಾಗಿಯೇ ಆಯುರ್ವೇದದಲ್ಲಿ ಕೂದಲಿನ ಸಮಸ್ಯೆಯನ್ನು ಪರಿಹರಿಸಲು ಮೆಂತ್ಯ ಬೀಜಗಳನ್ನು ಹಲವು ವರ್ಷಗಳಿಂದ ಬಳಸಲಾಗುತ್ತಿದೆ.
ಪ್ರೋಟೀನ್, ವಿಟಮಿನ್ ಬಿ 6 ಮತ್ತು ಫೋಲಿಕ್ ಆಮ್ಲ ಸೇರಿದಂತೆ ಮೆಂತ್ಯ ಬೀಜಗಳಲ್ಲಿರುವ ಪೋಷಕಾಂಶಗಳು ಕೂದಲಿನ ಬೆಳವಣಿಗೆಗೆ ಬಹಳ ಸಹಾಯಕವಾಗಿವೆ. ಜಿಂಕ್, ಮೆಗ್ನೀಷಿಯಂ, ಫಾಸ್ಫರಸ್, ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಮುಂತಾದ ಅಂಶಗಳು ಹೇರಳವಾಗಿದ್ದು, ಕೂದಲು ದಪ್ಪವಾಗಿ ಬೆಳೆಯಲು ಸಹಕಾರಿಯಾಗಿದೆ.
ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿರುವ ಜನರು ತಮ್ಮ ಆಹಾರದಲ್ಲಿ ನಿಯಮಿತವಾಗಿ ಮೆಂತ್ಯ ತಿನ್ನಬೇಕು.
ಕೂದಲು ಉದುರುವುದನ್ನು ನಿಲ್ಲಿಸಲು ಅಥವಾ ತಲೆಯ ಮೇಲೆ ಕೂದಲು ಬೆಳೆಯಲು ಮೊಳಕೆಯೊಡೆದ ಮೆಂತ್ಯ ಕಾಳು ತಿನ್ನಬೇಕು. ಮೆಂತ್ಯ ಬೀಜ ನೆನೆಸಿ ಮೊಳಕೆಯೊಡೆದ ನಂತರ ತಿನ್ನುವುದರಿಂದ ಅದರ ಪೋಷಕಾಂಶಗಳು ಅನೇಕ ಪಟ್ಟು ಹೆಚ್ಚಾಗುತ್ತದೆ. ಹೀಗೆ ಮಾಡುವುದರಿಂದ ಕೂದಲು ಬಲವಾಗಿ ದಪ್ಪ ಮತ್ತು ಉದ್ದವಾಗಿ ಬೆಳೆಯಲು ಸಹಾಯ ಮಾಡುತ್ತದೆ.
ರಾತ್ರಿಯಿಡೀ ಮೆಂತ್ಯ ಬೀಜಗಳನ್ನು ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಎದ್ದ ನಂತರ ಆ ನೀರು ಕುಡಿದು ಉಳಿದ ಮೆಂತ್ಯ ಕಾಳನ್ನು ಹತ್ತಿ ಬಟ್ಟೆಯಲ್ಲಿ ಕಟ್ಟಿ. 7 ರಿಂದ 8 ಗಂಟೆ ಬಳಿಕ ಇದು ಮೊಳಕೆಯೊಡೆದಿರುತ್ತದೆ. ಇದಕ್ಕೆ ಈರುಳ್ಳಿ, ಟೊಮೆಟೊ, ನಿಂಬೆ ರಸ, ಕ್ಯಾರೆಟ್, ಸೌತೆಕಾಯಿ ಸ್ವಲ್ಪ ಉಪ್ಪನ್ನು ಬೆರೆಸಿ ರುಚಿಕರವಾದ ಸಲಾಡ್ ತಯಾರಿಸಬಹುದು.
ಮೆಂತ್ಯ ಬೀಜಗಳನ್ನು ವಾರಕ್ಕೆ ಎರಡು ಬಾರಗಿಂತ ಹೆಚ್ಚು ಸೇವಿಸಬಾರದು. ಅತಿಯಾದ ಮೆಂತ್ಯ ಸೇವನೆ ಮಲಬದ್ಧತೆ ಮತ್ತು ಅಸಿಡಿಟಿ ಸಮಸ್ಯೆಗೆ ಕಾರಣವಾಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.