Sreeleela: ಭರಾಟೆ ಬೆಡಗಿ ಶ್ರೀಲೀಲಾ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ

Sat, 10 Jul 2021-5:11 pm,

ರೆಬೆಲ್ ಸ್ಟಾರ್ ಅಂಬರೀಶ್ ಅವರ ತೋಳಲ್ಲಿ ಕ್ಯೂಟ್ ಕ್ಯೂಟ್ ಶ್ರೀಲೀಲಾ

ಮೋಹಕ ಬೆಡಗಿ ಶ್ರೀಲೀಲಾ ಕನ್ನಡ ಚಿತ್ರರಂಗದಲ್ಲಿ ತನ್ನದೇಯಾದ ಹವಾ ಸೃಷ್ಟಿಸಿದ್ದಾರೆ. ಪಡ್ಡೆಹುಡುಗರ ನಿದ್ದೆಗೆಡಿಸಿರುವ ಶ್ರೀಲೀಲಾ ಕಡಿಮೆ ಅವಧಿಯಲ್ಲಿಯೇ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ನಟಿ ಶ್ರೀಲೀಲಾ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡತ್ ರೊಂದಿಗೆ ನಿಕಟಪೂರ್ವ ಸಂಬಂಧ ಹೊಂದಿದ್ದಾರೆ. ಯಶ್ ಮತ್ತು ರಾಧಿಕಾರಿಗೂ ಅಚ್ಚುಮೆಚ್ಚಾಗಿರುವ ಶ್ರೀಲೀಲಾ ಅವರನ್ನು ಜೀಜು-ಅಕ್ಕಾ ಎಂದೇ ಕರೆಯುತ್ತಾರೆ.

ನಟಿ ಶ್ರೀಲೀಲಾ ಸ್ಯಾಂಡಲ್ ವುಡ್ ನ ಬ್ಯುಸಿ ನಟಿಯಾಗಿದ್ದಾರೆ. ಅವರ ಕೈಯಲ್ಲಿಗ ಅನೇಕ ಸಿನಿಮಾ ಆಫರ್ ಗಳಿವೆ. ಕನ್ನಡ ಮಾತ್ರವಲ್ಲದೆ ಟಾಲಿವುಡ್ ನಲ್ಲಿ ಅವರಿಗ ಬ್ಯುಸಿಯಾಗಿದ್ದಾರೆ.

ವೈದ್ಯ ವೃತ್ತಿಯಲ್ಲಿ ಮುಂದುವರೆಯಬೇಕೆಂದುಕೊಂಡಿದ್ದ ಶ್ರೀಲೀಲಾರವರಿಗೆ ಸಿನಿಮಾದ ಬಗ್ಗೆ ವಿಶೇಷ ಸೆಳೆತವಿತ್ತು. ಸಿನಿಮಾಗಳಲ್ಲಿ ನಟಿಸಲು ಶ್ರೀಲೀಲಾರವರಿಗೆ ಆರಂಭದಲ್ಲಿ ಮನೆಯವರಿಂದ ವಿರೋಧ ವ್ಯಕ್ತವಾಗಿತ್ತು. ಬಳಿಕ ಮನೆಯವರನ್ನು ಒಪ್ಪಿಸಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. 

ತಮ್ಮ ವಿಶಿಷ್ಟ ನಟನೆಯ ಮೂಲಕ ಶ್ರೀಲೀಲಾ ಕನ್ನಡ ಸಿನಿಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಕಿಸ್, ಭರಾಟೆ ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ನ ಭರವಸೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link