ಧಕ್ ಧಕ್ ಸುಂದರಿ ಮಾಧುರಿ ಧೀಕ್ಷಿತ್ ಮದುವೆ ಸುದ್ದಿ ಕೇಳಿ ಬಾತ್ ರೂಮಿನಲ್ಲಿ ಬಿಕ್ಕಳಿಸಿ ಅತ್ತಿದ್ದರಂತೆ ಈ ಸ್ಟಾರ್ ಆಟಗಾರ !
ಬಾಲಿವುಡ್ ನಟಿ ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್... ಆಕೆಯ ಸೌಂದರ್ಯ, ಅದ್ಭುತವಾದ ನೃತ್ಯ, ಕೊಂದೇಬಿಡುವಂತಿದ್ದ ನಗು ಪಡ್ಡೆಹುಡುಗರ ದೊಡ್ಡ ಪಡೆಯನ್ನೇ ಹಾದಿತಪ್ಪುವಂತೆ ಮಾಡಿದ್ದು ಸುಳ್ಳಲ್ಲ. ಪಡ್ಡೆಹುಡುಗರು ಮಾತ್ರವಲ್ಲ, ಖ್ಯಾತನಾಮರು ಕೂಡ ಗುಟ್ಟಾಗಿ ಮಾಧುರಿ ಮಾಧುರಿ ಅಂತಾ ಜಪ ಮಾಡುತ್ತಿದ್ದರು.
ಮುಂಬೈ ಡಾನ್ ಗಳು ಕೂಡ ಮಾಧುರಿ ಮೇರಿ ಜಾನ್… ಎಂದು ಹಾಡುತ್ತಿದ್ದರು.
ಬೇರೆಯವರನ್ನು ಬಿಡಿ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಕೂಡ ಫಿದಾ ಆಗಿದ್ದರು.
ಮಾಧುರಿ ಧೀಕ್ಷಿತ್ ಗೆ ಮದುವೆ ಎನ್ನುವ ಸುದ್ದಿ ಗೊತ್ತಾಗಿದ್ದೇ ತಡ ಪ್ರಕಾಶ್ ಪಡುಕೋಣೆ ಬಾತ್ ರೂಮಿಗೆ ಹೋಗಿ ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ!
ಪ್ರಕಾಶ್ ಪಡುಕೋಣೆ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಅವರ ತಂದೆ.
ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾಧುರಿ ದೀಕ್ಷಿತ್ ಮೇಲೆ ಲವ್ ಆಗಿತ್ತು ಅಂತಾ ಪ್ರಕಾಶ್ ಪಡುಕೋಣೆ ಹೇಳಿಕೊಂಡಿದ್ದಾರೆ.