ಬಹಳ ಸಭ್ಯ ಮತ್ತು ಸೌಭಾಗ್ಯಶಾಲಿಗಳಾಗಿರುತ್ತಾರೆ ಈ ಮಹಿಳೆಯರು..!
ಸಮುದ್ರಶಾಸ್ತ್ರದ ಪ್ರಕಾರ, ತಮ್ಮ ಬಲಗಣ್ಣಿನಲ್ಲಿ ಮಚ್ಚೆ ಗುರುತು ಹೊಂದಿರುವ ಮಹಿಳೆಯರನ್ನು ಅತ್ಯಂತ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ ಅವರ ದಾಂಪತ್ಯ ಜೀವನವೂ ಸುಖಮಯವಾಗಿರುತ್ತದೆ.
ಸಮುದ್ರಶಾಸ್ತ್ರದ ಪ್ರಕಾರ, ತಲೆಯ ಮಧ್ಯದಲ್ಲಿ ಮಚ್ಚೆ ಹೊಂದಿರುವ ಜನರು ತಮ್ಮ ಸಂಗಾತಿಯನ್ನು ಬಹಳವಾಗಿ ಪ್ರೀತಿಸುತ್ತಾರೆ. ಇದಲ್ಲದೆ, ಇವರು ಪ್ರತಿ ಕ್ಷಣವೂ ತಮ್ಮ ಪ್ರೇಮಿ ಅಥವಾ ಸಂಗಾತಿಯ ಬಗ್ಗೆಯೇ ಯೋಚಿಸುತ್ತಿರುತ್ತಾರೆ.
ಸಮುದ್ರಶಾಸ್ತ್ರದ ಪ್ರಕಾರ, ಮೊಣಕಾಲುಗಳ ಮೇಲೆ ಮಚ್ಚೆ ಗುರುತು ಹೊಂದಿರುವ ಮಹಿಳೆಯರನ್ನು ಪ್ರಣಯ ಮನೋಭಾವದವರೆಂದು ಪರಿಗಣಿಸಲಾಗುತ್ತದೆ. ಬಲ ಮೊಣಕಾಲಿನ ಮೇಲಿನ ಮಚ್ಚೆಯು ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ ಎಂದು ಸೂಚಿಸುತ್ತದೆ. ಮತ್ತೊಂದೆಡೆ, ಎಡ ಮೊಣಕಾಲಿನ ಮೇಲೆ ಮಚ್ಚೆ ಇದ್ದರೆ, ಪ್ರೀತಿಯಲ್ಲಿ ಯಶಸ್ಸು ಸಿಗುತ್ತದೆ ಎನ್ನುವುದನ್ನು ಹೇಳುತ್ತದೆ.
ತುಟಿಯ ಮೇಲೆ ಮಚ್ಚೆ ಗುರುತು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮೇಲಿನ ತುಟಿಯಲ್ಲಿ ಮಚ್ಚೆ ಗುರುತುಗಳನ್ನು ಹೊಂದಿರುವ ಮಹಿಳೆಯರು ತುಂಬಾ ರೋಮ್ಯಾಂಟಿಕ್ ಎಂದು ಹೇಳಲಾಗುತ್ತದೆ.
ಸಮುದ್ರಶಾಸ್ತ್ರದ ಪ್ರಕಾರ, ಕುತ್ತಿಗೆಯಲ್ಲಿ ಮಚ್ಚೆಯ ಗುರುತು ಹೊಂದಿರುವ ಮಹಿಳೆಯರು ತುಂಬಾ ಅದೃಷ್ಟವಂತರು. ಸಮುದ್ರಶಾಸ್ತ್ರದ ಪ್ರಕಾರ, ಕುತ್ತಿಗೆಯ ಮಧ್ಯದಲ್ಲಿ ಮಚ್ಚೆ ಇದ್ದರೆ ಇನ್ನೂ ಹೆಚ್ಚು ಮಂಗಳಕರವಾಗಿರುತ್ತದೆ.