ಈ ರಾಶಿಯವರಿಗೆ ಅದೃಷ್ಟದ ಕಾಲ ! ವರ್ಷದ ಬಳಿಕ ಧನ ಸಂಪತ್ತು ಕರುಣಿಸುತ್ತಿದ್ದಾರೆ ಸೂರ್ಯ ಮತ್ತು ಅಂಗಾರಕ

Wed, 20 Sep 2023-12:30 pm,

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂರ್ಯ ಮತ್ತು ಮಂಗಳನ ಸಂಯೋಗವು 3 ರಾಶಿಯವರಿಗೆ ಮಂಗಳಕರವಾಗಿರಲಿದೆ. ಸೂರ್ಯ ಮತ್ತು ಮಂಗಳನ ದೆಸೆಯಿಂದ ಈ ರಾಶಿಯವರ ಜೀವನದಲ್ಲಿ ಭಾರೀ ಧನ ಸಂಪತ್ತು ಹರಿದು ಬರಲಿದೆ.

ಮೇಷ ರಾಶಿ : ಸೂರ್ಯ ಮತ್ತು ಮಂಗಳನ ಸಂಯೋಗವು ಮೇಷ ರಾಶಿಯ ಜನರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಜನರ ಆದಾಯ ಹೆಚ್ಚಾಗುತ್ತದೆ. ಯಾವ ಯೋಜನೆ ಹಾಕಿದರೂ ಅದು ಯಶಸ್ವಿಯಾಗುವುದು. ಶತ್ರುಗಳ ಮೇಲೆ ಜಯ ಸಾಧಿಸಬಹುದು. ಹಣ ಸಂಪಾದನೆಗೆ ಹೊಸ ಮಾರ್ಗಗಳು ಸೃಷ್ಟಿಯಾಗಲಿವೆ. 

 ಕರ್ಕಾಟಕ ರಾಶಿ : ಮಂಗಳ ಮತ್ತು ಸೂರ್ಯನ ಸಂಯೋಜನೆಯು ಕರ್ಕ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ಧೈರ್ಯ ಮತ್ತು ಶೌರ್ಯ ಹೆಚ್ಚಾಗುತ್ತದೆ. ಆರ್ಥಿಕ ಲಾಭವಿರುತ್ತದೆ. ವ್ಯವಹಾರವು ಉತ್ತಮವಾಗಿ ನಡೆಯುತ್ತದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ಹೊಸ ಉದ್ಯೋಗದ ಆಫರ್ ಕೂಡ ಬರಬಹುದು. 

ವೃಶ್ಚಿಕ ರಾಶಿ : ಸೂರ್ಯ ಮತ್ತು ಮಂಗಳನ ಸಂಯೋಜನೆಯು ವೃಶ್ಚಿಕ ರಾಶಿಯವರಿಗೆ ಅನುಕೂಲಕರವಾಗಿದೆ. ಈ ಜನರು ಹಳೆಯ ಹೂಡಿಕೆಗಳಿಂದ ಲಾಭವನ್ನು ಪಡೆಯುತ್ತಾರೆ. ಆಮದು-ರಫ್ತು ಕೆಲಸದಲ್ಲಿ ತೊಡಗಿರುವವರು ವಿಶೇಷ ಲಾಭವನ್ನು ಪಡೆಯುತ್ತಾರೆ. ಸರ್ಕಾರಿ ಕೆಲಸ ಸಿಗಬಹುದು.  

ಧನು ರಾಶಿ: ನಿಮ್ಮ ಆಸೆ ಆಕಾಂಕ್ಷೆಗಳು ಈಡೇರಲಿವೆ. ವೃತ್ತಿ ಜೀವನದಲ್ಲಿ ವೃದ್ಧಿಯ ಸಂಕೇತಗಳಿವೆ. ಹೊಸ ನೌಕರಿಯ ಹುಡುಕಾಟದಲ್ಲಿ ತೊಡಗಿರುವವರಿಗೆ ನೌಕರಿ ಭಾಗ್ಯ ಪ್ರಾಪ್ತಿಯಾಗಲಿದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರಲಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link