ಶನಿಯ ನಕ್ಷತ್ರಕ್ಕೆ ಪ್ರವೇಶಿಸಿರುವ ಸೂರ್ಯ ಬೆಳಗುವನು ಈ ರಾಶಿಯವರ ಭಾಗ್ಯ ! ಇನ್ನು ಇವರ ಕೈಯ್ಯಲ್ಲಿ ಕುಣಿದಾಡುವಳು ಧನಲಕ್ಷ್ಮೀ

Tue, 25 Jul 2023-10:47 am,

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂರ್ಯನು ಶನಿಯ ಪುಷ್ಯ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಇದನ್ನು ದೇವತೆಗಳು ಪೂಜಿಸುವ ನಕ್ಷತ್ರ ಎಂದು ಕರೆಯಲಾಗುತ್ತದೆ. ಈ ನಕ್ಷತ್ರದ ಅಧಿಪತಿ ಶನಿ. ಹೀಗಿರುವಾಗ ಈ ಬದಲಾವಣೆಯ ಪ್ರಾಮುಖ್ಯತೆಯು ಇನ್ನಷ್ಟು ಹೆಚ್ಚಾಗುತ್ತದೆ. 

ಈ ಸಮಯದಲ್ಲಿ ಸೂರ್ಯ ಮತ್ತು ಶನಿಗ್ರಹವು ಒಟ್ಟಿಗೆ ಬರುವುದರಿಂದ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಅದರ ಹೇರಳವಾದ ಪ್ರಯೋಜನಗಳು ವಿಶೇಷವಾಗಿ 3 ರಾಶಿಯವರ  ಜೀವನದಲ್ಲಿ ಕಾಣಿಸುತ್ತದೆ. 

ಸೂರ್ಯನ ನಕ್ಷತ್ರ ಬದಲಾವಣೆಯು ಕನ್ಯಾ ರಾಶಿಯವರಿಗೆ ಶುಭ ಫಲವನ್ನು ನೀಡುತ್ತದೆ. ನಿಮ್ಮ ರಾಶಿಯ ಹನ್ನೊಂದನೇ ಮನೆಯಲ್ಲಿ ಸೂರ್ಯ ದೇವನ ಸಂಚಾರವಾಗುತ್ತಿದೆ. ಇದರಿಂದ ನಿಮ್ಮ ಆದಾಯದ ಮೂಲವೂ ಹೆಚ್ಚುತ್ತದೆ. ಈ ಸಮಯದಲ್ಲಿ ಸಾಲ ಕೊಟ್ಟು ಹೊರಗೆ ಉಳಿದುಕೊಂಡಿರುವ ಹಣ ಮತ್ತೆ ಕೈ ಸೇರಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸಮಯದಲ್ಲಿ ಒಳ್ಳೆಯ ಸುದ್ದಿ ಸಿಗಲಿದೆ. ಉದ್ಯೋಗ ಬದಲಾವಣೆಯ ಬಗ್ಗೆ ಯೋಚಿಸುತ್ತಿದ್ದರೆ, ಅದು ಲಾಭದಾಯಕವಾಗಿರುತ್ತದೆ.

ಈ ಅವಧಿಯಲ್ಲಿ ನಿಮ್ಮ ಶತ್ರುಗಳು ನಾಶವಾಗುತ್ತಾರೆ. ಈ ರಾಶಿಯವರ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ. ಆತ್ಮವಿಶ್ವಾಸ ಹೆಚ್ಚಾಗುವ ಸಾಧ್ಯತೆ ಇದೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ಅದನ್ನು ಈ ಅವಧಿಯಲ್ಲಿ ಮಾಡಬಹುದು. ವಿದೇಶ ಪ್ರವಾಸದ ಅವಕಾಶಗಳು ಒದಗಿ ಬರುತ್ತವೆ. ಆದಾಯವೂ ಹೆಚ್ಚಲಿದೆ. ಭೌತಿಕ ಸುಖಗಳು ಹೆಚ್ಚಾಗುತ್ತವೆ. 

ಜ್ಯೋತಿಷ್ಯದ ಪ್ರಕಾರ, ಆಸ್ತಿ ಇತ್ಯಾದಿ ವಾಹನಗಳನ್ನು ಖರೀದಿಸಬಹುದು.  ಆಸ್ತಿಗೆ ಸಂಬಂಧಿಸಿದ ವಿವಾದ ಕೊನೆಯಾಗುವುದು. ಅನಗತ್ಯ ವೆಚ್ಚಕ್ಕೆ ಕಡಿವಾಣ ಬೀಳಲಿದೆ. ಕುಟುಂಬದೊಂದಿಗೆ ಸಮಯ ಕಳೆಯುವ ಅವಕಾಶ ಸಿಗುತ್ತದೆ. ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ಈ ಸಮಯವು ನಿಮಗೆ ಅನುಕೂಲಕರವಾಗಿರುತ್ತದೆ. 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link