ಬರೋಬ್ಬರಿ 18ವರ್ಷಗಳ ಬಳಿಕ ಸೂರ್ಯ-ಕೇತು ಮೈತ್ರಿ: ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
ಜ್ಯೋತಿಷ್ಯ ಶಾಸ್ತ್ರದಲ್ಲಿ, ಸೂರ್ಯನನ್ನು ಗ್ರಹಗಳ ಅಧಿಪತಿಮ್, ಆತ್ಮವಿಶ್ವಾಸ, ಗೌರವ, ಪ್ರತಿಷ್ಠೆಯ ಸಂಕೇತ ಎಂದು ಬಿಂಬಿಸಲಾಗುತ್ತದೆ. ಅಂತೆಯೇ ನೆರಳು, ಪಾಪ ಗ್ರಹವಾದ ಕೇತುವನ್ನು ಧ್ಯಾನ, ತ್ಯಾಗದ ಸಂಕೇತ ಎನ್ನಲಾಗುತ್ತದೆ.
ಸದ್ಯ ಕೇತು ಕನ್ಯಾ ರಾಶಿಯಲ್ಲಿದ್ದು ಸೂರ್ಯ ಗ್ರಹವೂ ಸಹ ಸೆಪ್ಟೆಂಬರ್‌ನಲ್ಲಿ ಕನ್ಯಾ ರಾಶಿಗೆ ಸಾಗಲಿದೆ. ಬರೋಬ್ಬರಿ 18ವರ್ಷಗಳ ಬಳಿಕ ಈ ರೀತಿಯಾಗಿ ಕನ್ಯಾ ರಾಶಿಯಲ್ಲಿ ಸೂರ್ಯ-ಕೇತು ಒಟ್ಟಿಗೆ ಕೂಡುತ್ತಿದ್ದಾರೆ.
ಕೇತು ನೆರಳು ಗ್ರಹವೇ ಆದರೂ ಜಾತಕದಲ್ಲಿ ಕೇತು ಶುಭ ಸ್ಥಾನದಲ್ಲಿದ್ದಾಗ ಒಳ್ಳೆಯ ಫಲಗಳನ್ನು ನೀಡಲಿದ್ದಾನೆ. ಇದೀಗ 18ವರ್ಷಗಳ ಬಳಿಕ ಕನ್ಯಾ ರಾಶಿಯಲ್ಲಿ ಸೂರ್ಯ-ಕೇತು ಸಂಯೋಗವು ಕೂಡ ಕೆಲವು ರಾಶಿಯವರ ಬದುಕಿನಲ್ಲಿ ಸುವರ್ಣ ಸಮಯವನ್ನು ತರಲಿದೆ ಎನ್ನಲಾಗುತ್ತಿದೆ.
ಈ ಸಂಯದಲ್ಲಿ ಭೌತಿಕ ಸುಖ-ಸಂಪತ್ತು ಹೆಚ್ಚಾಗಲಿದೆ. ಪೂರ್ವಿಕಾರ ಆಸ್ತಿಯಿಂದ ಲಾಭದ ಜೊತೆಗೆ ಭೂಮಿ, ವಾಹನ ಖರೀದಿ ಯೋಗವೂ ಇದೆ. ವೃತ್ತಿಪರರು ಸ್ವಲ್ಪ ಪ್ರಯತ್ನಿಸಿದರೂ ಉತ್ತಮ ಫಲ ಪಡೆಯುವಿರಿ.
ಉದ್ಯೋಗಸ್ಥರಿಗೆ ಬದಲಾವಣೆಯ ಪರ್ವಕಾಲ ಇದಾಗಿದೆ. ವ್ಯಾಪಾರ ವ್ಯವಹಾರದಲ್ಲಿ ಏಳ್ಗೆಯನ್ನು ಕಾಣುವಿರಿ. ಸಮಾಜದಲ್ಲಿ ಗೌರವ, ಕೀರ್ತಿ ವೃದ್ಧಿಯಾಗುತ್ತದೆ. ಹೂಡಿಕೆಯಿಂದ ಲಾಭ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ.
ಸೂರ್ಯ-ಕೇತು ಸಂಯೋಗದಿಂದ ನಿಮ್ಮ ಅದೃಷ್ಟವೇ ಬದಲಾಗಲಿದೆ. ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ಜಯ ನಿಮ್ಮದಾಗಲಿದೆ. ವಿದೇಶ ವ್ಯವಹಾರದಲ್ಲಿ ಸಂಬಂಧ ಹೊಂದಿರುವವರು ಬಂಪರ್ ಲಾಭವನ್ನು ನಿರೀಕ್ಷಿಸಬಹುದು.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.