ಧನುರ್ಮಾಸದಲ್ಲಿ ಸೂರ್ಯನ ಪ್ರಚಂಡ ಪ್ರಭಾವ: ಸಂಕ್ರಾಂತಿವರೆಗೆ ಈ ರಾಶಿಯವರಿಗೆ ಹಣವೋ ಹಣ!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ ದೇವನು 15 ಡಿಸೆಂಬರ್ 2024ರಂದು ತನ್ನ ಪಥ ಬದಲಾಯಿಸಲಿ ಧನು ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರೊಂದಿಗೆ ಧನುರ್ ಮಾಸ ಆರಂಭವಾಗಲಿದೆ.
ಧನುರ್ ಮಾಸದಲ್ಲಿ ಸೂರ್ಯನ ವಿಶೇಷ ಆಶೀರ್ವಾದದಿಂದ ಕೆಲವು ರಾಶಿಯವರ ಬಾಳು ಬಂಗಾರವಾಗಲಿದೆ. ಸಂಕ್ರಾಂತಿಯವರೆಗೂ ಈ ಅದೃಷ್ಟದ ರಾಶಿಗಳ ಜನರು ಅಪಾರ ಪ್ರಮಾಣದ ಸಂಪತ್ತು ಕೀರ್ತಿಯನ್ನು ಗಳಿಸಲಿದ್ದಾರೆ ಎನ್ನಲಾಗುತ್ತಿದೆ.
ಮೇಷ ರಾಶಿ: ಸೂರ್ಯನ ವಿಶೇಷ ಆಶೀರ್ವಾದ ಈ ಜನರ ಮೇಲಿರಲಿದ್ದು, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಕೆಲಸವೊಂದು ವೇಗವನ್ನು ಪಡೆಯಲಿದೆ. ಕೌಟುಂಬಿಕ ಸುಖವನ್ನು ಆನಂದಿಸಿವಿರಿ. ಆದಾಯದ ಹೊಸ ಮೂಲಗಳು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಗೊಳಿಸಲಿದೆ.
ವೃಶ್ಚಿಕ ರಾಶಿ: ಧನುರ್ ಮಾಸದಲ್ಲಿ ಸೂರ್ಯದೇವನ ಕೃಪೆಯಿಂದ ವೃತ್ತಿಪರರಿಗೆ ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ. ಬಹಳ ದಿನಗಳಿಂದ ನೀವು ಹೊಸ ವ್ಯವಹಾರವನ್ನು ಆರಂಭಿಸಲು ಯೋಚಿಸುತ್ತಿದ್ದರೆ ಈ ವೇಳೆ ಅದು ಕೈಗೂಡಲಿದೆ. ಹಣದ ಹರಿವು ಹೆಚ್ಚಾಗಿ ಆರ್ಥಿಕ ಸ್ಥಿರತೆಯನ್ನು ಕಾಣುವಿರಿ.
ಧನು ರಾಶಿ: ಸ್ವ ರಾಶಿಯಲ್ಲಿರುವ ಸೂರ್ಯನು ಈ ರಾಶಿಯ ಜನರಿಗೆ ಕೆಲಸದಲ್ಲಿ ಬಡ್ತಿ, ವೇತನ ಹೆಚ್ಚಳದ ಜೊತೆಗೆ ಉದ್ಯೋಗ ಸ್ಥಳದಲ್ಲಿ ಕೀರ್ತಿಯನ್ನೂ ಸಹ ಹೆಚ್ಚಿಸಲಿದ್ದಾನೆ. ಹಣಕಾಸಿನ ಸ್ಥಿತಿ ಮೊದಲಿಗಿಂತಲೂ ಉತ್ತಮಗೊಳ್ಳಲಿದೆ. ಪ್ರೀತಿಯಲ್ಲಿರುವವರಿಗೆ ಶುಭ ಸಮಯ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.