Sun Transit October 2021: ಅಕ್ಟೋಬರ್ 17 ರಂದು ಸೂರ್ಯನ ರಾಶಿ ಪರಿವರ್ತನೆ, ಈ 5 ರಾಶಿಯವರಿಗೆ ಸಂಕಷ್ಟ

Sat, 16 Oct 2021-8:20 am,

ವೃಷಭ ರಾಶಿ: ಸೂರ್ಯನ ರಾಶಿ ಪರಿವರ್ತನೆಯು ವೃಷಭ ರಾಶಿಯ ಜನರಿಗೆ ಅಶುಭ ಫಲಗಳನ್ನು ತರಲಿದೆ. ಈ ರಾಶಿಯವರು ಅಕ್ಟೋಬರ್ 17 ರಿಂದ ಮುಂದಿನ 1 ತಿಂಗಳು ಜಾಗರೂಕರಾಗಿರಬೇಕು ಎಂದು ಜ್ಯೋತಿಷ್ಯದಲ್ಲಿ ಸೂಚಿಸಲಾಗಿದೆ. ಈ ಸಮಯದಲ್ಲಿ ವೃಷಭ ರಾಶಿಯವರು ವೃತ್ತಿ, ಆಸ್ತಿಯ ವಿಷಯದಲ್ಲಿ ಎಚ್ಚರಿಕೆಯಿಂದ ಇರಬೇಕು. ಜೊತೆಗೆ, ಅನಾವಶ್ಯಕ ವಾದ-ವಿವಾದಗಳಿಂದ ದೂರ ಇದ್ದರೆ ಒಳಿತು.  

ಮಿಥುನ ರಾಶಿ: ಮಿಥುನ ರಾಶಿಯ ಜನರು ಈ ಸಮಯದಲ್ಲಿ ಅನಾವಶ್ಯಕ ವಾದ-ವಿವಾದಗಳನ್ನು ತಪ್ಪಿಸಬೇಕು, ಇಲ್ಲದಿದ್ದರೆ ಅದು ಹಾನಿಯನ್ನು ಉಂಟುಮಾಡಬಹುದು. ವಿಶೇಷವಾಗಿ ಕೆಲಸದ ಸ್ಥಳದಲ್ಲಿ ಶಾಂತವಾಗಿ ಮತ್ತು ತಾಳ್ಮೆಯಿಂದ ಕೆಲಸ ಮಾಡಿದರೆ ಒಳ್ಳೆಯದು.   

ಕರ್ಕಾಟಕ ರಾಶಿ: ಸೂರ್ಯನು ತುಲಾ ರಾಶಿಯಲ್ಲಿದ್ದಾಗ ಕರ್ಕಾಟಕ ರಾಶಿಯವರು ತಮ್ಮ ವೃತ್ತಿ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ, ಈ ಸಮಯದಲ್ಲಿ ತಾಳ್ಮೆಯಿಂದ ವರ್ತಿಸಿ, ಇಲ್ಲದಿದ್ದರೆ ದೊಡ್ಡ ನಷ್ಟವಾಗಬಹುದು. ಕೆಲವರು ವೃತ್ತಿಯಲ್ಲಿ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಯಾರೊಂದಿಗೂ ಜಗಳವಾಡುವುದನ್ನು ತಪ್ಪಿಸಿ.

ಇದನ್ನೂ ಓದಿ- Navratri 2021: ನೀವೂ ಕೂಡ ಜೀವನದಲ್ಲಿ ಪ್ರಗತಿ, ಆರ್ಥಿಕ ಲಾಭ ಬಯಸುತ್ತೀರಾ, ನವರಾತ್ರಿ ಮುಗಿಯುವ ಮೊದಲು ಈ ಕೆಲಸ ಮಾಡಿ

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಈ ಸಮಯವು ಹಣದ ನಷ್ಟ ಮತ್ತು ಗೌರವದ ನಷ್ಟವನ್ನು ಉಂಟುಮಾಡಬಹುದು. ಆದ್ದರಿಂದ ಎರಡೂ ವಿಷಯಗಳ ಬಗ್ಗೆ ಜಾಗರೂಕರಾಗಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.  ಇದನ್ನೂ ಓದಿ- Astrology: ಇತರರ ಏಳಿಗೆಯನ್ನು ಸಹಿಸಲ್ಲ ಈ ರಾಶಿಯ ಜನ, ನಿಮ್ಮ ಸುತ್ತಲೂ ಇಂತಹವರು ಇದ್ದಾರೆಯೇ? 

ಕುಂಭ ರಾಶಿ: ರಾಶಿಚಕ್ರದಲ್ಲಿನ ಸೂರ್ಯನ ಬದಲಾವಣೆಯಿಂದ ಕುಂಭ ರಾಶಿಯ ಜನರಿಗೆ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಕುಟುಂಬದ ಎಲ್ಲ ಸದಸ್ಯರನ್ನು ಚೆನ್ನಾಗಿ ನೋಡಿಕೊಳ್ಳಿ, ಇಲ್ಲದಿದ್ದರೆ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ. 

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link