January Grah Gochar: ಜನವರಿಯಲ್ಲಿ ಗ್ರಹಗಳ ಸಂಚಾರದ ಪರಿಣಾಮ ಹೊಳೆಯಲಿದೆ ಈ ರಾಶಿಯವರ ಅದೃಷ್ಟ
ಜನವರಿ 2024ರಲ್ಲಿ ಗ್ರಹಗಳ ರಾಜ ಸೂರ್ಯದೇವ, ಗ್ರಹಗಳ ರಾಜಕುಮಾರ ಬುಧ ಮತ್ತು ಐಷಾರಾಮಿ ಜೀವನಕಾರಕ ಶುಕ್ರ ತಮ್ಮ ರಾಶಿಚಕ್ರವನ್ನು ಬದಲಾಯಿಸಲಿದ್ದಾರೆ.
ಜನವರಿ 2024ರಲ್ಲಿ ಸೂರ್ಯ, ಬುಧ ಮತ್ತು ಶುಕ್ರ ಗ್ರಹಗಳ ಸಂಚಾರದ ಪರಿನಾಮ್ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ ಈ ಸಮಯದಲ್ಲಿ ಕೆಲವು ರಾಶಿಯವರಿಗೆ ಭಾರೀ ಅದೃಷ್ಟ ಎಂದು ಹೇಳಲಾಗುತ್ತಿದೆ.
ಗ್ರಹಗಳ ರಾಜಕುಮಾರ ಬುಧ ಜನವರಿ 7, 2024 ರಂದು ರಾತ್ರಿ 09.32 ಕ್ಕೆ ವೃಶ್ಚಿಕ ರಾಶಿಯನ್ನು ತೊರೆದು ಧನು ರಾಶಿಯನ್ನು ಪ್ರವೇಶಿಸುತ್ತಾನೆ. ಇದರ ಪರಿಣಾಮವಾಗಿ ವೃಷಭ ರಾಶಿ ಮತ್ತು ಕನ್ಯಾ ರಾಶಿಯ ಜನರು ವೃತ್ತಿ ಬದುಕಿನಲ್ಲಿ ಬಂಪರ್ ಲಾಭವನ್ನು ನಿರೀಕ್ಷಿಸಬಹುದು.
ಗ್ರಹಗಳ ರಾಜ ಸೂರ್ಯದೇವನು ಜನವರಿ 15, 2024 ರಂದು 02.54 ಕ್ಕೆ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈ ದಿನ ಮಕರ ಸಂಕ್ರಾಂತಿಯನ್ನೂ ಸಹ ಆಚರಿಸಲಾಗುತ್ತದೆ. ಸೂರ್ಯ ಗೋಚಾರದ ಪರಿಣಾಮವಾಗಿ ವೃಶ್ಚಿಕ, ಧನು ಮತ್ತು ಮೀನ ರಾಶಿಯವರ ಅದೃಷ್ಟ ಹೊಳೆಯಲಿದೆ ಎಂದು ಹೇಳಲಾಗುತ್ತಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಸೌಂದರ್ಯ, ಸಂಪತ್ತು ಮತ್ತು ಐಷಾರಾಮಿ ಅಂಶ ಎಂದು ಪರಿಗಣಿಸಲಾಗಿರುವ ಶುಕ್ರನು ಜನವರಿ 18, 2024 ರಂದು ರಾತ್ರಿ 09.05 ಕ್ಕೆ ಧನು ರಾಶಿ ಪರ್ವೇಶಿಸುತ್ತಾನೆ. ಇದರಿಂದ ಧನು ರಾಶಿಯಲ್ಲಿ ಬುಧ, ಮಂಗಳ ಮತ್ತು ಶುಕ್ರ ಸಂಯೋಗದಿಂದ ತ್ರಿಗ್ರಾಹಿ ಯೋಗ ರೂಪುಗೊಳ್ಳಲಿದೆ. ಇದರ ಪರಿಣಾಮ ಮಿಥುನ ರಾಶಿಯವರಿಗೆ ಆದಾಯದ ಮೂಲಗಳು ಹೆಚ್ಚಾಗಲಿದೆ. ಕನ್ಯಾ ರಾಶಿಯವರಿಗೆ ಬಡ್ತಿ ಯೋಗವಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.