Sunil Narine Love Story: ಮೊದಲು ಭಾರತೀಯ ಯುವತಿಯನ್ನು ವಿವಾಹವಾದ Sunil Narine ನಂತರ ಮತ್ತೆ ವರನಾಗಿದ್ದು ಹೇಗೆ?

Sun, 31 Mar 2024-4:01 pm,

1. ಐಪಿಎಲ್ 2024 ರ 10 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲ್ಲಲು ಸುನಿಲ್ ನರೈನ್ ಪ್ರಮುಖ ಕೊಡುಗೆ ನೀಡಿದ್ದಾರೆ. ಅವರು 213.64 ಸ್ಟ್ರೈಕ್ ರೇಟ್‌ನಲ್ಲಿ 1 ವಿಕೆಟ್ ಮತ್ತು 47 ರನ್ ಗಳಿಸಿದ್ದಾರೆ.  

2. ನರೇನ್ ತನ್ನ ಮಿಸ್ಟರಿ ಎಸೆತಗಳಿಂದ ಬ್ಯಾಟ್ಸ್‌ಮನ್‌ಗಳನ್ನು ಬಲೆಗೆ ಬೀಳುಸ್ವಂತೆ, ಅವರ  ಪ್ರೇಮಕಥೆಯು ಕೂಡ ತುಂಬಾ ರೋಚಕವಾಗಿದೆ. ವಾಸ್ತವದಲ್ಲಿ  ನರೈನ್ ಲವ್ ಸ್ಟೋರಿ ಒಂದು ತ್ರಿಕೋನ ಪ್ರೇಮ ಕತೆಯಾಗಿದೆ.   

3. ಈ ಹಿಂದೆ ಸುನಿಲ್ ನರೈನ್ ಭಾರತೀಯ ಮೂಲದ ಮಹಿಳೆಯನ್ನು ಮದುವೆಯಾಗಿದ್ದರು, ಆದರೆ ನಂತರ ಅವರು ಮತ್ತೊಮ್ಮೆ ಹಸೆಮಣೆ ಏರಿದ್ದಾರೆ. ನರೈನ್ ಅವರ ಪ್ರೇಮ ಜೀವನವು ಸಾಕಷ್ಟು ವೈಯಕ್ತಿಕವಾಗಿದ್ದರೂ, ಅದರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ನರೈನ್ 2013 ರಲ್ಲಿ ಭಾರತೀಯ ಮೂಲದ ನಂದಿತಾ ಅವರನ್ನು ವಿವಾಹವಾಗಿದ್ದರು. ನಂದಿತಾ ಅವರ ಪೂರ್ವಜರು ಟ್ರಿನಿಡಾಡ್‌ನಲ್ಲಿ ದೀರ್ಘಕಾಲದಿಂದ ವಾಸಿಸುತ್ತಿದ್ದರು.  

4. ನಂದಿತಾ ಮತ್ತು ನರೇನ್ ಮದುವೆ ಹಿಂದೂ ಸಂಪ್ರದಾಯದಂತೆ ನಡೆದಿತ್ತು. ಆದರೆ ನಂದಿತಾ ಅವರಿಂದ ನರೈನ್ ಯಾವಾಗ ವಿಚ್ಛೇದನ ಪಡೆದರು ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದಾದ ನಂತರ ಅಂಜೆಲಿಯಾ ಅವರ ಜೀವನಕ್ಕೆ ಕಾಲಿಟ್ಟರು. ಆದರೆ, ಇವರಿಬ್ಬರು ಹೇಗೆ, ಯಾವಾಗ ಮತ್ತು ಎಲ್ಲಿ ಭೇಟಿಯಾದರು ಎಂಬ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿ ಇಲ್ಲ.  

5. ನರೇನ್ 2020 ರಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಆಂಜೆಲಿಯಾ ಜೊತೆಗಿನ ಚಿತ್ರಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು. ಆದರೆ, ನರೇನ್ ಮತ್ತು ಆಂಜೆಲಿಯಾ ಮದುವೆಯಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಕೂಡ ನಿಗೂಢವಾಗಿದೆ. ಇಬ್ಬರೂ ಮಗುವಿನ ಪೋಷಕರು ಕೂಡ ಆಗಿದ್ದಾರೆ. .  

6. ಆಂಜೆಲಿಯಾ ಟ್ರಿನಿಡಾಡ್‌ನಲ್ಲಿ 'ದಿ ಫ್ಯಾಶನ್ ಅಟೆಲಿಯರ್' ಎಂಬ ಬಟ್ಟೆ ಬ್ರಾಂಡ್ ಅನ್ನು ನಡೆಸುತ್ತಿದ್ದಾರೆ. ನರೇನ್ ಆಗಾಗ ಆಂಜೆಲಿಯಾ ಜೊತೆಗಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link