ಸುನಿಲ್ ನರೈನ್ 2ನೇ ಪತ್ನಿ ಯಾರು ಗೊತ್ತಾ? ಭಾರತ ಮೂಲದ ಚೆಲುವೆಗೆ ವಿಚ್ಛೇದನ ನೀಡಿ ಈ ಸುಂದರಿಯ ಕೈಹಿಡಿದ ಸ್ಟಾರ್ ಆಲ್’ರೌಂಡರ್

Fri, 19 Apr 2024-4:27 pm,

2020ರಲ್ಲಿ, ಸುನಿಲ್ ನರೈನ್ ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡಿ, ಎರಡನೇ ಮದುವೆಯಾಗಲು ನಿರ್ಧರಿಸಿದರು. ಅಂದಹಾಗೆ ಆ ವಿಚ್ಛೇದನಕ್ಕೆ ನಿಖರವಾದ ಕಾರಣ ಏನೆಂಬುದು ತಿಳಿದಿಲ್ಲ.

ತನ್ನ ಬೌಲಿಂಗ್ ಮತ್ತು ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದ ನರೈನ್, ಟ್ರಿನಿಡಾಡ್’ನ ನಂದಿತಾ ಕುಮಾರ್ ಎಂಬವರನ್ನು ಮದುವೆಯಾಗಿದ್ದರು. ನಂದಿತಾ ನೇಲ್ ಆರ್ಟಿಸ್ಟ್. ಇಬ್ಬರೂ 2013ರಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾದರು, ಆದರೆ 2020ರಲ್ಲಿ ವಿಚ್ಛೇದನ ಪಡೆದರು.

ಇನ್ನು ಇದಾದ ಬಳಿಕ ಆಂಜೆಲಿಯಾ ಎಂಬವರನ್ನು ನರೈನ್ ವಿವಾಹವಾದರು. ಟ್ರಿನಿಡಾಡ್‌’ನ ಅತಿದೊಡ್ಡ ಫ್ಯಾಷನ್ ಬ್ರ್ಯಾಂಡ್‌ಗಳಲ್ಲಿ ಒಂದಾದ 'ದಿ ಫ್ಯಾಶನ್ ಅಟೆಲಿಯರ್' ಮಾಲಕಿ ಈಕೆ. ಈ ಜೋಡಿಗೆ ಒಬ್ಬ ಮಗನೂ ಇದ್ದಾನೆ.

ಅಂದಹಾಗೆ ಇತ್ತೀಚೆಗೆಯಷ್ಟೇ ಸುನಿಲ್ ನರೈನ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಮೊದಲ ಶತಕ ದಾಖಲಿಸಿದ್ದಾರೆ.

ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ 2024ರ 31ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ನರೈನ್ 49 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಈ ಇನ್ನಿಂಗ್ಸ್’ನಲ್ಲಿ 11 ಬೌಂಡರಿ ಮತ್ತು ಆರು ಸಿಕ್ಸರ್‌’ಗಳನ್ನು ಸಿಡಿಸಿದ್ದಾರೆ. ಇದು ಟಿ20 ಕ್ರಿಕೆಟ್‌’ನಲ್ಲಿ ಅವರ ಮೊದಲ ಶತಕವಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link