ಮಗಳ ಮದುವೆ ಸಂಭ್ರಮದಲ್ಲಿ ಮಗನ ಜೊತೆ ಕ್ಯಾಮೆರಾಗೆ ಪೋಸ್ ಸುನೀಲ್ ಶೆಟ್ಟಿ..!
ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುನೀಲ್ ಶೆಟ್ಟಿ ಅವರ ಖಂಡಾಲ ಫಾರ್ಮ್‌ಹೌಸ್‌ನಲ್ಲಿ ಅದ್ದೂರಿಯಾಗಿ ವಿವಾಹ ಜರುಗಿದೆ.
ಮದುವೆಯ ಮಂಟಪದ ಹೊರಗೆ ನಿಂತಿದ್ದ ಛಾಯಾಗ್ರಾಹಕರಿಗೆ ಸುನೀಲ್ ಶೆಟ್ಟಿ ಮತ್ತು ಅವರ ಪುತ್ರ ಅಹಾನ್ ಶೆಟ್ಟಿ ಸಿಹಿತಿಂಡಿ ನೀಡಿದರು.
ಸಂಗೀತ ಸಮಾರಂಭ, ಹಲ್ದಿ, ಮೆಹೆಂದಿ ಮತ್ತು ಮದುವೆಯನ್ನು ಒಳಗೊಂಡಂತೆ ಮೂರು ದಿನಗಳನ್ನು ಮದುವೆಯ ಸಂಭ್ರಮ ನಡೆದಿದೆ.
ಸುನೀಲ್ ಮತ್ತು ಅವರ ಪುತ್ರ ಅಹಾನ್ ಶೆಟ್ಟಿ ಮದುವೆ ಸಮಾರಂಭದ ನಂತರ ಹೊರ ಬಂದು ಮಾಧ್ಯಮದವರಿಗೆ ಶುಭಾಶಯ ಕೋರಿದರು.
ಸುನೀಲ್ ಸಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡರೆ, ಅವರ ಮಗ ಕ್ರೆಪ್ ಬಣ್ಣದ ಕುರ್ತಾ ಮತ್ತು ಪೈಜಾಮಾವನ್ನು ಧರಿಸಿದ್ದರು.
ರಾಹುಲ್ ಅಥಿಯಾ ಜೋಡಿ ಕ್ಯಾಮರಾಗಳಿಗೆ ಪೋಸ್ ನೀಡುವ ನಿರೀಕ್ಷೆಯಿದೆ.