Cleaning tricks:ಹೆಚ್ಚು ಶ್ರಮವಿಲ್ಲದೆ ಮನೆಯನ್ನು ಕನ್ನಡಿಯಂತೆ ಹೊಳೆಯುವಂತೆ ಮಾಡುವ ಸೂಪರ್ ಹ್ಯಾಕ್ಸ್ !
ಮನೆಯ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಮನೆ ಶುಚಿಯಾಗಿದ್ದರೆ, ರೋಗಗಳ ಅಪಾಯ ಕೂಡಾ ಕಡಿಮೆ.ಆದರೆ ಒಂದೇ ದಿನದಲ್ಲಿ ಇಡೀ ಮನೆಯನ್ನು ಸ್ವಚ್ಛಗೊಳಿಸಬೇಕು ಎಂದರೆ ಅದು ಅಸಾಧ್ಯ. ಮನೆಯನ್ನು ಸರಿಯಾಗಿ ಸ್ವಚ್ಛಗೊಳಿಸಬೇಕಾದರೆ ಮನೆಯ ಕೆಲಸವನ್ನು ಮೊದಲು ವಿಭಜಿಸಿಕೊಳ್ಳಬೇಕು. ಪ್ರತಿದಿನ ಮನೆಯ ಒಂದೊಂದೇ ಭಾಗಗಳನ್ನು ಸ್ವಚ್ಛಗೊಳಿಸುತ್ತಾ ಬನ್ನಿ.
ಸ್ನಾನಗೃಹದ ಶುಚಿತ್ವವು ಅತ್ಯಂತ ಮುಖ್ಯವಾಗಿದೆ. ಜನರು ಮೊದಲು ಗಮನ ಹರಿಸುವ ಸ್ಥಳ ಇದೇ. ಇಲ್ಲಿ ರೋಗಗಳ ಅಪಾಯವೂ ಹೆಚ್ಚು. ನಿಂಬೆ ಮತ್ತು ವಿನೆಗರ್ ಸಹಾಯದಿಂದ, ಸಂಪೂರ್ಣ ಬಾತ್ರೂಮ್ ಅನ್ನು ಸ್ವಚ್ಛಗೊಳಿಸಬಹುದು.ಬಾತ್ ರೂಂ ಶುಚಿಗೊಳಿಸಲು ಬಿಸಿ ನೀರನ್ನು ಬಳಸಬೇಕು. ಹೀಗೆ ಮಾಡುವುದರಿಂದ ಬಾತ್ ರೂಂನಲ್ಲಿರುವ ಮೊಂಡುತನದ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಬಹುದು.
ಮನೆಯ ರೂಂ ಅನ್ನು ಸ್ವಚ್ಛಗೊಳಿಸುವಾಗ ವಿಶೇಷ ಕಾಳಜಿಯನ್ನು ವಹಿಸಬೇಕು. ನಿಮ್ಮ ಕೋಣೆಯಲ್ಲಿ ಬಹಳಷ್ಟು ವಸ್ತುಗಳನ್ನು ಇರಿಸಿಕೊಂಡಿದ್ದರೆ, ಮೊದಲು ಆ ವಸ್ತುಗಳನ್ನು ಬೇರೆ ಸ್ಥಳಕ್ಕೆ ಮೊದಲು ಸ್ಥಳಾಂತರಿಸಬೇಕು. ಹಾಸಿಗೆಯನ್ನು ಸರಿಯಾಗಿ ಜೋಡಿಸಬೇಕು. ಕೋಣೆಯಲ್ಲಿ ಬಹಳಷ್ಟು ವಸ್ತುಗಳನ್ನು ಇಡಬೇಕಾಗಿಲ್ಲ. ಸ್ವಚ್ಛಗೊಳಿಸುವಾಗ ನೀವು ಬಟ್ಟೆಯ ಸಹಾಯವನ್ನು ತೆಗೆದುಕೊಳ್ಳಬೇಕು.ಆದರೆ, ನೆನಪಿಡಿ ಕೊಳಕು ಬಟ್ಟೆಗಳನ್ನು ಬಳಸಬಾರದು.
ಇಡೀ ಮನೆಯ ಡಸ್ಟಿಂಗ್ ಮಾಡುವಾಗ ವ್ಯಾಕ್ಯೂಮ್ ಸಹಾಯವನ್ನು ತೆಗೆದುಕೊಂಡು ಮನೆಯನ್ನು ಸ್ವಚ್ಛಗೊಳಿಸಬೇಕು.ಮನೆಯಲ್ಲಿ ಬಹಳಷ್ಟು ಧೂಳು ಸಂಗ್ರಹವಾಗುತ್ತದೆ. ಇದು ನಿಮ್ಮ ಕೆಲಸವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮಾತ್ರವಲ್ಲ ಅನೇಕ ರೋಗಗಳಿಂದ ಬಳಲಬೇಕಾಗಬಹುದು.
ಮನೆಯನ್ನು ಶುಚಿಗೊಳಿಸುವಾಗ ಮನೆಯ ಎಲ್ಲಾ ಕಿಟಕಿ ಬಾಗಿಲುಗಳನ್ನು ತೆರೆದಿಟ್ಟುಕೊಂಡಿರಬೇಕು. ಅಲ್ಲದೆ ಮನೆಯನ್ನು ಕ್ಲೀನ್ ಮಾಡುವಾಗ ನಿಮ್ಮ ಬಾಯಿಗೆ ಮಾಸ್ಕ್ ಕಟ್ಟಿಕೊಳ್ಳಬೇಕು. ಹೀಗೆ ಮಾಡಿದರೆ ಧೂಳಿನ ಕಾರಣ ನಿಮ್ಮ ಆರೋಗ್ಯ ಹಾಳಾಗುವುದಿಲ್ಲ.