Supermoon 2022: ಶೀಘ್ರವೇ ಬರಲಿದೆ ಗುಲಾಬಿ ಬೆಳದಿಂಗಳ ರಾತ್ರಿ, ಈ ದಿನ ನೋಡಲು ಸಿಗಲಿದೆ ಅದ್ಭುತ ದೃಶ್ಯ
1. ಯಾವಾಗ ಪಿಂಕ್ ಮೂನ್ ಗೋಚರಿಸಲಿದೆ - ಈ ವರ್ಷದ ಜುಲೈ 12 ರಂದು ರಾತ್ರಿ 12 ಗಂಟೆ 7 ನಿಮಿಷಕ್ಕೆ ಪಿಂಕ್ ಮೂನ್ ಅನ್ನು ನೀವು ನೋಡಬಹುದಾಗಿದೆ. ಇದಾದ ಬಳಿಕ ಮತ್ತೆ ಮುಂದಿನ ವರ್ಷ ಅಂದರೆ 2023 ರ ಜುಲೈ 3 ರಂದು ಈ ಘಟನೆ ಪುನರಾವರ್ತಿಸಲಿದೆ.
2. ಜುಲೈ 13, 2022ರ ಸೂಪರ್ ಮೂನ್ ಸಂದರ್ಭದಲ್ಲಿ ವರ್ಷದ ಅತಿ ದೊಡ್ಡ ಚಂದ್ರ ಕಾಣಿಸಿಕೊಳ್ಳಲಿದ್ದಾನೆ. ಇದನ್ನು ಡಿಯರ್ ಮೂನ್, ಥಂಡರ್ ಮೂನ್, ವಿರ್ಟ್ ಮೂನ್, ಹೇ ಮೂನ್ ಎಂದೂ ಕೂಡ ಕರೆಯಲಾಗುತ್ತದೆ. ಅಮೇರಿಕಾದಲ್ಲಿ ಇದನ್ನು ಸೈಲ್ಮನ್ ಮೂನ್, ರಾಸ್ಪಬೆರ್ರಿ ಮೂನ್ ಹಾಗೂ ಕೈಲ್ಮಿಂಗ್ ಮೂನ್ ಎಂದೂ ಕೂಡ ಕರೆಯಲಾಗುತ್ತದೆ.
3. 1979 ರಲ್ಲಿ ಮೊಟ್ಟಮೊದಲ ಬಾರಿಗೆ ಸೂಪರ್ ಮೂನ್ ಹೆಸರು ಬಳಕೆಗೆ ಬಂದಿತು. ಜೋತಿಷ್ಯ ಪಂಡಿತ ರಿಚರ್ಡ್ ನೋಲೆ ಈ ಶಬ್ದವನ್ನು ಆವಿಷ್ಕರಿಸಿದ್ದಾರೆ. ಚಂದಿರ ಭೂಮಿಯ ಅತ್ಯಂತ ಸಮೀಪ ಅಂದರೆ ಶೇ.90ರಷ್ಟು ಪೆರಿಗಿ ವ್ಯಾಪ್ತಿಗೆ ಬಂದಾಗ, ಈ ಘಗೋಳ ಘಟನೆಯನ್ನು ಸೂಪರ್ ಮೂನ್ ಎಂದು ಕರೆಯಲಾಗುತ್ತದೆ.
4. ಸೂಪರ್ ಮೂನ್ ಒಂದು ಸಾಮಾನ್ಯ ಖಗೋಳ ಘಟನೆಯಾಗಿದ್ದು, ಒಂದು ವರ್ಷದಲ್ಲಿ ಮೂರು ಬಾರಿಗೆ ಕಂಗೊಳಿಸುತ್ತದೆ. ಆದರೆ, ಇದರಿಂದ ಚಂದ್ರನಲ್ಲಿ ಯಾವುದೇ ವಿಶೇಷ ಶಕ್ತಿ ಬರುತ್ತದೆ ಎಂದು ಇದರರ್ಥವಲ್ಲ. ಈ ದಿನ ಚಂದ್ರ ನಿತ್ಯದ ಗಾತ್ರಕ್ಕೆ ಹೋಲಿಸಿದರೆ, ಸ್ವಲ್ಪ ದೊಡ್ಡದಾಗಿ ಗೋಚರಿಸುತ್ತಾನೆ. ಏಕೆಂದರೆ, ಆತ ಭೂವಿಯ ಸಮೀಪದಲ್ಲಿರುತ್ತಾನೆ. ಈ ಖಗೋಳ ಘಟನೆಯನ್ನು ಪೇರಿಗೆ ಹೆಸರಿನಿಂದಲೂ ಕೂಡ ಗುರುತಿಸಲಾಗುತ್ತದೆ.
5. ಈ ಖಗೋಳ ಘಟನೆ ಸೂಪರ್ ಹೈ ಟೈಡ್ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಈ ದಿನ ಮಹಾಸಾಗರಗಳಲ್ಲಿ ಅಲೆಗಳ ಸರಣಿಯನ್ನೇ ನೀವು ನೋಡಬಹುದು. ಸೂಪರ್ ಮೂನ್ ಹಿನ್ನೆಲೆ ಸಾಗರದಲ್ಲಿ ಬಿರುಗಾಳಿ ಹಾಗೂ ಸಮುದ್ರ ತೀರದಲ್ಲಿ ನೆರೆ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆ ಇರುತ್ತದೆ.